ಪುಟಿನ್‌ ಸಂಪರ್ಕಿಸಿ ಉಕ್ರೇನ್ ಮೇಲೆ ರಷ್ಯಾ ಸಂಭಾವ್ಯ ನ್ಯೂಕ್ಲಿಯರ್ ದಾಳಿ ತಡೆದಿದ್ದ ಮೋದಿ, CNN ವರದಿ!

By Suvarna NewsFirst Published Mar 10, 2024, 7:49 PM IST
Highlights

ಉಕ್ರೇನ್ ಸಂಪೂರ್ಣ ನಾಶ ಮಾಡಲು ಬಯಸಿದ್ದ ರಷ್ಯಾ ಕೀವ್ ಮೇಲೆ ನ್ಯೂಕ್ಲಿಯರ್ ದಾಳಿಗೆ ಸಜ್ಜಾಗಿತ್ತು. ಈ ಮಾಹಿತಿ ಅರಿತ ಬೆನ್ನಲ್ಲೇ ಭಾರತ ಸೇರಿದಂತೆ ಇತರ ಕೆಲ ರಾಷ್ಟ್ರ ಮಧ್ಯಪ್ರವೇಶಿಸಿ ಸಂಭಾವ್ಯ ನ್ಯೂಕ್ಲಿಯರ್ ದಾಳಿ ತಡೆಯುವಲ್ಲಿ ಯಶಸ್ವಿಯಾಗಿತ್ತು ಅನ್ನೋ ಸ್ಪೋಟಕ ಮಾಹಿತಿಯನ್ನು ಸಿಎನ್ಎನ್ಎನ್ ವರದಿ ಮಾಡಿದೆ
 

ವಾಶಿಂಗ್ಟನ್ ಡಿಸಿ(ಮಾ.10) ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಉತ್ತುಂಗಕ್ಕೆ ತಲುಪಿತ್ತು. ಉಕ್ರೇನ್ ಸರ್ವನಾಶ ಮಾಡಿ ಯುದ್ಧ ಗೆಲ್ಲಲು ನಿರ್ಧರಿಸಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೀವ್ ನಗರದ ಮೇಲೆ ನ್ಯೂಕ್ಲಿಯರ್ ದಾಳಿಗೆ ಮುಂದಾಗಿತ್ತು. ಅಮೆರಿಕ ಈ ಕುರಿತು ಮಾಹಿತಿ ಜೊತೆಗೆ ಆತಂಕವನ್ನೂ ವ್ಯಕ್ತಪಡಿಸಿತ್ತು. ಈ ವೇಳೆ ಭಾರತ ಸೇರಿದಂತೆ ಇತರ ಕೆಲ ರಾಷ್ಟ್ರಗಳು ಈ ಸಂಭಾವ್ಯ ಪರಮಾಣು ದಾಳಿಯನ್ನು ತಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ಸಿಎನ್ಎನ್ ವರದಿ ಮಾಡಿದೆ.

ರಷ್ಯಾ-ಉಕ್ರೇನ್ ಯುದ್ಧ ತೀವ್ರಗೊಳ್ಳುತ್ತಿದ್ದಂತೆ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆಡಳಿತ ವಿಭಾಗ ಹಾಗೂ ಗುಪ್ತರ ಎಜೆನ್ಸಿಗಳು ಮಹತ್ವದ ಸಭೆ ಸೇರಿತ್ತು. ಈ ವೇಳೆ ರಷ್ಯಾ ಸಂಭಾವ್ಯ ನ್ಯೂಕ್ಲಿಯರ್ ದಾಳಿ ಕುರಿತು ಬಲವಾದ ಶಂಕೆ ವ್ಯಕ್ತಪಡಿಸಿತ್ತು. ನ್ಯೂಕ್ಲಿಯರ್ ದಾಳಿ ಸಾಧ್ಯತೆಗಳು ಅತೀ ಹೆಚ್ಚು ಎಂದು ವರದಿ ನೀಡಿತ್ತು. ಈ ವರದಿಯನ್ನೂ ಭಾರತಕ್ಕೂ ನೀಡಲಾಗಿತ್ತು. ಈ ಮೂಲಕ ಭಾರತ ಮಧ್ಯಪ್ರವೇಸಿಲು ಅಮೆರಿಕ ಪರೋಕ್ಷವಾಗಿ ವರದಿ ನೀಡಿತ್ತು.

ಗಂಡ ಮೋದಿ ಘೋಷಣೆ ಕೂಗಿದರೆ ಊಟ ಕೊಡಬೇಡಿ, ಮಹಿಳಾ ಮತದಾರರಿಗೆ ಕೇಜ್ರಿವಾಲ್ ಮನವಿ!

ಪ್ರಧಾನಿ ಮೋದಿ ಸರ್ಕಾರ ಹಾಗೂ ಇತರ ಕೆಲ ದೇಶಗಳು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಂಪರ್ಕಿಸಿ ಮಾತುಕತೆ ನಡೆಸಿತ್ತು. ಈ ಫಲಪ್ರದ ಮಾತುಕತೆಯಿಂದ ರಷ್ಯಾದ ಸಂಭಾವ್ಯ ನ್ಯೂಕ್ಲಿಯರ್ ದಾಳಿ ತಪ್ಪಿತು ಎಂದು ಸಿಎನ್ಎನ್ ವರದಿ ಮಾಡಿದೆ. ರಷ್ಯಾ ದಾಳಿ ಕುರಿತು ಮಾಹಿತಿ ಬೆಚ್ಚಿ ಬೀಳುವಂತಿತ್ತು. ಹೀಗಾಗಿ ಭಾರತ ಸೇರಿದಂತೆ ಕೆಲ ರಾಷ್ಟ್ರಗಳು ಮಧ್ಯಪ್ರವೇಶಿಸಲು ಅಮೆರಿಕ ಬಯಸಿತ್ತು ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.

ಪ್ರಧಾನಿ ಮೋದಿ ಹಾಗೂ ಕೆಲ ನಾಯಕರು ಈ ಸಂಭಾವ್ಯ ದಾಳಿ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಮೆರಿಕ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭಾರತದ ಪಾತ್ರವನ್ನು ಪ್ರಮುಖವಾಗಿ ಉಲ್ಲೇಖಿಸಿದ್ದಾರೆ. 

ಅರುಣಾಚಲ ಸಂಪರ್ಕಿಸುವ ವಿಶ್ವದ ಅತಿ ಉದ್ದದ ಜೋಡಿ ಸುರಂಗ ಮಾರ್ಗ ಉದ್ಘಾಟಿಸಿದ ಮೋದಿ

ಉಕ್ರೇನ್-ರಷ್ಯಾ ಯುದ್ದಧ ವೇಳೆ ಭಾರತ ನಾಗರೀಕರ ಸಾವು ನೋವನ್ನು ಖಂಡಿಸಿತ್ತು. ಉಜ್ಬೇಕಿಸ್ತಾನದಲ್ಲಿ ನಡೆದ SCO ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಂದೇಶ ಸಾರಿದ್ದರು. ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಮಾತನಾಡಿದ್ದ ಮೋದಿ, ಇದು ಯುದ್ದದ ಕಾಲವಲ್ಲ, ಶಾಂತಿಯಿಂದ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದರು. ಜಿ20 ಅಧ್ಯಕ್ಷತೆ ವಹಿಸಿದ್ದ ಭಾರತ ಶೃಂಗಸಭೆಯಲ್ಲಿ ಇದೇ ಮಾತನ್ನು ಪುನರುಚ್ಚರಿಸಿತ್ತು.
 

click me!