
ಲಖನೌ(ಮಾ.10) ಸೆಲೆಬ್ರೆಟಿಗಳ ಡೀಪ್ ಫೇಕ್ ವಿಡಿಯೋ ಹರಿಬಿಟ್ಟ ಪ್ರಕರಣ ದೇಶಾದ್ಯಂತ ಕೋಲಾಹಲ ಸೃಷ್ಟಿಸಿತ್ತು. ಈ ಡೀಪ್ ಫೇಕ್ ವಿಡಿಯೋ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಡೀಪ್ ಫೇಕ್ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಭಾರಿ ಸಂಚಲನ ಸೃಷ್ಟಿಸುತ್ತಿದ್ದಂತೆ ಪ್ರಕರಣ ದಾಖಲಾಗಿದೆ. ಇದೀಗ ಸೈಬರ್ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂತ್ರಜ್ಞರ ಮೊರೆ ಹೋಗಿದ್ದಾರೆ.
ಹಲವು ಸೆಲೆಬ್ರೆಟಿಗಳ ಡೀಪ್ ಫೇಕ್ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಕುರಿತು ಪ್ರಕರಣ ದಾಖಲಾಗಿ, ಕೆಲವರು ಅರೆಸ್ಟ್ ಆಗಿದ್ದಾರೆ. ಕೇಂದ್ರ ಸರ್ಕಾರ ಡೀಪ್ ಫೇಕ್ ವಿಡಿಯೋ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕಾನೂನು ಹಾಗೂ ತಂತ್ರಜ್ಞಾನದ ಮೊರ ಹೋಗಿದೆ. ಈ ಬೆಳವಣಿಗೆ ನಡುವೆಯೂ ಡೀಪ್ ಫೇಕ್ ಹಾವಳಿ ಹೆಚ್ಚಾಗುತ್ತಿದೆ. ಯೋಗಿ ಆದಿತ್ಯನಾಥ್ ಅವರ ಡೀಪ್ ಫೇಕ್ ವಿಡಿಯೋ ಮಾಡಿರುವ ಕಿಡಿಗೇಡಿಗಳು, ಔಷಧ ಖರೀದಿಸಲು ಮನವಿ ಮಾಡುವ ವಿಡಿಯೋವನ್ನು ಹರಿಬಿಟ್ಟಿದ್ದಾರೆ.
ಫ್ಯಾನ್ ಫೇಜ್ ನಡೆಸುತ್ತಿದ್ದವನಿಂದಲೇ ರಶ್ಮಿಕಾ ಡೀಪ್ ಫೇಕ್ ವಿಡಿಯೋ ಸೃಷ್ಟಿ: ಆಂಧ್ರದಲ್ಲಿ ಆರೋಪಿ ಬಂಧನ
ಯೋಗಿ ಆದಿತ್ಯನಾಥ್ ಅವರ ಡೀಪ್ ಫೇಕ್ ವಿಡಿಯೋದಲ್ಲಿ ಮಧುಮೇಹ ಔಷಧಿ ಖರೀದಿಸಲು ಮನವಿ ಕುರಿತು ಮಾತನಾಡುವ ದೃಶ್ಯವಿದೆ. ಔಷಧಿ ಪ್ರಚಾರಕ್ಕೆ, ಜನರು ಖರೀದಿಸುವಂತೆ ಮಾಡಲು ಯೋಗಿ ಆದಿತ್ಯನಾತ್ ಡೀಪ್ ಫೇಕ್ ವಿಡಿಯೋ ಬಳಸಿಕೊಂಡಿದ್ದಾರೆ. ಎರಡು ವಿಡಿಯೋಗಳು ಹರಿದಾಡುತ್ತಿದೆ. ಎರಡೂ ವಿಡಿಯೋಗಳಲ್ಲಿ ಯೋಗಿ ಆದಿತ್ಯನಾಥ್ ಔಷಧಿ ಖರೀದಿಸಲು ಮನವಿ ಮಾಡುವ ದೃಶ್ಯವಿದೆ.
ಭಾರತದ ವೈದ್ಯಕೀಯ ತಜ್ಞರು, ಸಂಶೋಧಕರು ಈ ಔಷಧಿ ಪತ್ತೆ ಹಚ್ಚಿದ್ದಾರೆ. ಈ ಔಷಧಿ ಸೇವನೆ ಅತ್ಯಂತ ಪರಿಣಾಕಾರಿ ಎಂದು ಹೇಳುವ ಯೋಗಿ ಆದಿತ್ಯನಾಥ್ ಮಾತುಗಳನ್ನು ಡೀಪ್ ಫೇಕ್ ಮೂಲಕ ಸೃಷ್ಟಿಸಿ ಹರಿಬಿಡಲಾಗಿದೆ. ಪ್ರಚಾರಕ್ಕಾಗಿ ಯೋಗಿ ಆದಿತ್ಯನಾಥ್ ಅವರನ್ನು ಬಳಸಿಕೊಂಡಿರುವುದು, ಡೀಪ್ ಫೇಕ್ ವಿಡಿಯೋ ಸೃಷ್ಟಿಸಿರುವುದು, ತಂತ್ರಜ್ಞಾನದ ದುರುಪಯೋಗಿ ಸೇರಿದಂತೆ ಹಲುವು ಆರೋಪಗಳು ಕುರಿತು ದೂರು ದಾಖಲಾಗಿದೆ.
ಡೀಫ್ ಫೇಕ್ ಆಯ್ತು, ಈಗ ಕ್ಲಿಯರ್ ಫೇಕ್ ಕಾಟ ಶುರು: ಇದು ಇನ್ನೂ ಡೇಂಜರಸ್
ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಿದರೂ ಡೀಪ್ ಫೇಕ್ ವಿಡಿಯೋ ಆತಂಕ ಹೆಚ್ಚಿಸುತ್ತಿದೆ. ರಶ್ಮೀಕಾ ಮಂದಣ್ಣ, ಸಾರಾ ತೆಂಡೂಲ್ಕರ್ ಸೇರಿದಂತೆ ಹಲವರು ಡೀಪ್ ಫೇಕ್ ವಿಡಿಯೋ ಕುರಿತು ಪೊಲೀಸರು ಕೆಲವನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ