
ನವದೆಹಲಿ(ಮಾ.09): ಭಾರತ ಹಾಗೂ ಜಪಾನ್ ನಡುವಿನ ಹಲವು ದ್ವಿಪಕ್ಷೀಯ ವ್ಯವಹಾರಗಳ ಕುರಿತು ಮಹತ್ವದ ಚರ್ಚೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ, ಜಪಾನ್ ಪ್ರಧಾನಿ ಸುಗಾ ಯೋಶಿಹಿಡಾ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಈ ವೇಳೆ ಜಪಾನ್ ಪ್ರಧಾನಿಯಾಗಿ ಆಯ್ಕೆಯಾಗಿರುವ ಸುಗಾ ಯೋಶಿಹಿಡಾಗೆ ಅಭಿನಂದನೆ ತಿಳಿಸಿದ ಮೋದಿ, ಮುಂದಿನ ಪಥ ಸುಗಮ ಹಾಗೂ ಯಶಸ್ವಿಯಾಗಲಿ ಎಂದು ಹಾರೈಸಿದರು.
ಕೊರೋನಾ ಬಳಿಕ ಮೋದಿ ಮೊದಲ ವಿದೇಶ ಪ್ರವಾಸ: ಮಾ.26ಕ್ಕೆ ಬಾಂಗ್ಲಾಗೆ ಭೇಟಿ!
ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವವು ಕಳೆದ ಕೆಲವು ವರ್ಷಗಳಿಂದ ಹೆಚ್ಚಿನ ಪ್ರಗತಿ ಸಾಧಿಸಿದೆ. ಪರಸ್ಪರ ನಂಬಿಕೆ ಮತ್ತು ಹಂಚಿಕೆಯ ಮೌಲ್ಯಗಳ ಆಧಾರದ ಮೇಲೆ ಭಾರತ ಹಾಗೂ ಜಪಾನ್ ಸಂಬಂಧ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲು ಮೋದಿ ಹಾಗೂ ಸುಗಾ ಸಮ್ಮತಿಸಿದರು.
ಮೋದಿಗೆ CERAWeek ಪ್ರಶಸ್ತಿ: ಇದು ಸಮಸ್ತ ಭಾರತೀಯರಿಗೆ ಸಂದ ಅವಾರ್ಡ್ ಎಂದ ಪ್ರಧಾನಿ!
ಭಾರತ ಹಾಗೂ ಜಪಾನ್ ಜಂಟಿಯಾಗಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ನಡೆಸುತ್ತಿದೆ. ಇಂಡೋ-ಪೆಸಿಫಿಕ್ ಪ್ರದೇಶದ ಆರ್ಥಿಕ ಸ್ಥಿತಿಗತಿ, ಪೂರೈಕೆ ಸರಪಳಿ ಕುರಿತು ಮಹತ್ವದ ಚರ್ಚೆ ನಡೆಸಿದರು. ಇದೇ ವೇಳೆ ಭಾರತ, ಜಪಾನ್ ಮತ್ತು ಇತರ ಸಮಾನ ಮನಸ್ಕ ದೇಶಗಳ ನಡುವಿನ ಸಹಕಾರವನ್ನು ಮೋದಿ ಸ್ವಾಗತಿಸಿದರು.
ಭಾರತ ಹಾಗೂ ಜಪಾನ್ ಉತ್ತಮ ಸಂಬಂಧದಿಂದ ಆರ್ಥಿಕ ಸಹಭಾಗಿತ್ವ ಸಾಧಿಸಿದೆ. ಈ ಸಹಭಾಗಿತ್ವದಿಂದ ದೇಶದಲ್ಲಿರುವ ಆಗಿರುವ ಪ್ರಗತಿಯನ್ನು ಉಭಯ ನಾಯಕರು ಶ್ವಾಘಿಸಿದ್ದಾರೆ. ಇನ್ನು ಕೌಶಲ್ಯ ಅಭಿವೃದ್ಧಿ ಕುರಿತ ಒಪ್ಪಂದ ಅಂತಿಮ ರೂಪ ನೀಡುವ ಕುರಿತು ಮೋದಿ ಚರ್ಚಿಸಿದರು.
21 ವಿದ್ವಾಂಸರ ವ್ಯಾಖ್ಯಾನಗಳೊಂದಿಗೆ ಭಗವದ್ಗೀತೆಯ 11 ಸಂಪುಟ ಲೋಕಾರ್ಪಣೆ ಮಾಡಿದ ಮೋದಿ!
ಇದೇ ವೇಳೆ ಕೊರೋನಾ ವೈರಸ್ ಕಡಿಮೆಯಾದ ಬಳಿಕ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಗೆ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ಸುಗಾ ಅವರಿಗೆ ಮೋದಿ ಆಹ್ವಾನವನ್ನು ನೀಡಿದರು. ಈ ಮೂಲಕ ಭಾರತ ಹಾಗೂ ಜಪಾನ್ ದ್ವಿಪಕ್ಷೀಯ ಬಾಂದವ್ಯ ಅಭಿವೃದ್ಧಿಗೆ ಮತ್ತಷ್ಟು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ