21 ವಿದ್ವಾಂಸರ ವ್ಯಾಖ್ಯಾನಗಳೊಂದಿಗೆ ಭಗವದ್ಗೀತೆಯ 11 ಸಂಪುಟ ಲೋಕಾರ್ಪಣೆ ಮಾಡಿದ ಮೋದಿ!

Published : Mar 09, 2021, 06:21 PM IST
21 ವಿದ್ವಾಂಸರ ವ್ಯಾಖ್ಯಾನಗಳೊಂದಿಗೆ ಭಗವದ್ಗೀತೆಯ 11 ಸಂಪುಟ ಲೋಕಾರ್ಪಣೆ ಮಾಡಿದ ಮೋದಿ!

ಸಾರಾಂಶ

ಪವಿತ್ರ ಭಗವದ್ಗೀತೆಯ ಸಂಸ್ಕೃತ ವ್ಯಾಖ್ಯಾನಗಳೊಂದಿಗೆ 11 ಸಂಪುಟ ಲೋಕಾರ್ಪಣೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಗೀತೆ ಬಿಡುಗಡೆ ಮಾಡಿ ಗೀತೆಯ ಮಹತ್ವ ಹಾಗೂ ಆದರ್ಶಗಳು ನಮಗೆ ಪ್ರೇರಣೆಯಾಗಲಿ ಎಂದರು. ಮೋದಿ ಭಾಷಣದ ವಿವರ ಇಲ್ಲಿದೆ.

ನವದೆಹಲಿ(ಮಾ.08):  ಪ್ರಧಾನಿ ನರೇಂದ್ರ ಮೋದಿ ಇಂದು(ಮಾ.09)21 ವಿದ್ವಾಂಸರ ವ್ಯಾಖ್ಯಾನಗಳೊಂದಿಗೆ  ಪವಿತ್ರ ಭಗವದ್ಗೀತೆಯ 11 ಸಂಪುಟವನ್ನು ಲೋಕಾರ್ಪಣೆ ಮಾಡಿದ್ದಾರೆ.  ಸಂಸ್ಕೃತದಲ್ಲಿರುವ ಗೀತಾ ಸಂಪುಟಕ್ಕೆ ಶ್ರೀಮದ್ ಭಗವದ್ಗೀತೆ ಎಂಬ ಶೀರ್ಷಿಕೆ ನೀಡಲಾಗಿದೆ.  ಮೂಲ ಕ್ಯಾಲಿಗ್ರಫಿಯಲ್ಲಿ ಅಪರೂಪದ ಬಹು ಸಂಸ್ಕೃತ ವ್ಯಾಖ್ಯಾನಗಳನ್ನು ಈ ಗೀತೆ ಹೊಂದಿದೆ.

ಕೊರೋನಾ ಬಳಿಕ ಮೋದಿ ಮೊದಲ ವಿದೇಶ ಪ್ರವಾಸ: ಮಾ.26ಕ್ಕೆ ಬಾಂಗ್ಲಾಗೆ ಭೇಟಿ!

ಈ ವಿಶೇಷ ಕಾರ್ಯಕ್ರಮದಲ್ಲಿ ಜಮ್ಮು ಮತ್ತು ಕಾಶ್ಮೀರ ಗವರ್ನರ್ ಮನೋಜ್ ಸಿನ್ಹಾ, ಹಿಂದೂ ಧರ್ಮಶಾಸ್ತ್ರ ವಿದ್ವಾಂಸ ಡಾ.ಕರಣ್ ಸಿಂಗ್  ಸೇರಿದಂತೆ ಹಲವರು ಉಪಸ್ಥಿತರಿದ್ದರು.  11 ಸಂಪುಟಗಳನ್ನು ಲೋಕಾರ್ಪಣೆಗೊಳಿಸಿದ ಮೋದಿ, ಗೀತೆ ಮಹತ್ವ ಸಾರಿದರು. ಕರಣ್ ಸಿಂಗ್ ಭಾರತೀಯ ದರ್ಶನಕ್ಕಾಗಿ ಕೆಲಸ ಮಾಡಿದ್ದಾರೆ. ಈ ಪವಿತ್ರ ಕೆಲಸಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಎಂದು ಮೋದಿ ಹೇಳಿದರು.

 

ಕರಣ್ ಸಿಂಗ್ ಅವಿರತ ಶ್ರಮದಿಂದ ಈ ಗೀತೆ ಸಂಪುಟ ಮುಂದಿನ ಪೀಳೆಗೆಗೆ ಸುಲಭವಾಗಿ ಹಾಗೂ ಆದರ್ಶದ ಜೀವನಕ್ಕಾಗಿ ಲಭ್ಯವಾಗಿದೆ ಎಂದು ಮೋದಿ ಹೇಳಿದರು. 21 ಪ್ರಸಿದ್ಧ ಭಾರತೀಯ ವಿದ್ವಾಂಸರ ಪ್ರಮುಖ ವ್ಯಾಖ್ಯಾನಗಳನ್ನು ಒಟ್ಟುಗೂಡಿಸಿ ಮಹಾಕಾವ್ಯವನ್ನು ಸಮಗ್ರವಾಗಿ ಮತ್ತು ತುಲನಾತ್ಮಕವಾಗಿ ಸಂರಚಿತವಾಗಿದೆ. ಅಪರೂಪದ ಸಂಸ್ಕೃತ ವ್ಯಾಖ್ಯಾನಗಳು ಈ ಗೀತೆಯಲ್ಲಿ ಅಡಗಿದೆ ಎಂದು ಮೋದಿ ಹೇಳಿದರು.

ಭಾರತದ ಏಕಕತೆಯಲ್ಲಿ ಗೀತೆಯ ಪಾತ್ರ ಪ್ರಮುಖವಾಗಿದೆ. ಮಹಾಭಾರತದಿಂದ ಹಿಡಿದು ಸ್ವಾತಂತ್ರ್ಯದವರೆಗೆ ಭಗವದ್ಗೀತೆ ಎಲ್ಲರಿಗೂ ಪ್ರೇರಣೆ ನೀಡಿದೆ.  ಆದಿ ಶಂಕರಾಚಾರ್ಯರಿಗೆ ಭಗವದ್ಗೀತೆ ಆಧ್ಯಾತ್ಮಿಕ ದೃಷ್ಟಿಯಲ್ಲಿ ಪ್ರೇರಣೆ ನೀಡಿದೆ. ರಾಮಾನುಜಚಾರ್ಯರು ಭಗವದ್ಗೀತೆಯನ್ನು ಜ್ಞಾನದ ರೂಪದಲ್ಲಿ ನೋಡಿದ್ದಾರೆ. ಸ್ವಾಮಿ ವಿವೇಕಾನಂದರಿಗೆ ಗೀತೆ ಅದಮ್ಯ ಆತ್ಮವಿಶ್ವಾಸದ ಚಿಲುಮೆಯಾಗಿತ್ತು. ಅತ್ಯಂತ ಕಠಿಣ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಗೆ ಗೀತೆ ಸರಿಯಾದ ಪಥದಲ್ಲಿ ಮುನ್ನಡೆಯಲು ದಾರಿ ತೋರಿಸಿದೆ. ಸುಭಾಷಚಂದ್ರಬೋಸ್‌ಗೆ ಭಗವದ್ಗೀತೆ ರಾಷ್ಟ್ರಭಕ್ತಿ ಹಾಗೂ ಪ್ರೇರಣೆಯಾಗಿತ್ತು. ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರಿಗೆ ಗೀತೆ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಯಾಗಿತ್ತು ಎಂದು ಭಗವದ್ಗೀತೆಯ ಸಾರವನ್ನು ಪರಂಪರೆಯನ್ನು ಹೇಳಿದರು.

ನಮ್ಮ ಪೂರ್ವಜರು ಆರ್ಯುವೇದ ಸೇರಿದಂತೆ ಹಲವು ಸೇವೆಗಳನ್ನು ವ್ಯಾಪಾರ ದೃಷ್ಟಿಯಿಂದ ಮಾಡಿಲ್ಲ, ಮಾನವತಾವಾದ ಮೇಲೆ ಸೇವೆ ನೀಡಿದ್ದೇವೆ. ನಮ್ಮ ಪರಂಪರೆ ಇದು. ಆತ್ಮನಿರ್ಭರ್ ಭಾರತ ಮೂಲಕ ಈ ಮಾನವತಾವಾದ, ಭಾರತೀಯತೆ ಮತ್ತೆ ಜಾಗೃತಿಗೊಳ್ಳುತ್ತಿದೆ. ಮಾನವೀಯತೆ ಮೂಲಕ ಭಾರತ ಮತ್ತಷ್ಟು ಸೇವೆ ಮಾಡುತ್ತಿದೆ ಎಂದು ಮೋದಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು