
ನವದೆಹಲಿ(ಮಾ.08): ಪ್ರತಿ ವರ್ಷದಂತೆ ಈ ವರ್ಷವೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಶನ್( IIMC) ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿಗಳ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ಅದ್ಧೂರಿಯಾಗಿ ನಡೆದಿದೆ. 5ನೇ ವರ್ಷದ IFFCO IIMCAA ವರ್ಷದ ಅಲ್ಯೂಮಿನಿ ಪ್ರಶಸ್ತಿ(Alumni of the Year) ನೀತೇಂದ್ರ ಸಿಂಗ್ ಪಾಲಾಗಿದೆ.
ಮೋದಿಗೆ CERAWeek ಪ್ರಶಸ್ತಿ: ಇದು ಸಮಸ್ತ ಭಾರತೀಯರಿಗೆ ಸಂದ ಅವಾರ್ಡ್ ಎಂದ ಪ್ರಧಾನಿ!.
ನವದೆಹಲಿಯ IIMC ಕೇಂದ್ರ ಘಟಕದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ, ಪ್ರತಿಷ್ಠಿತ ಪ್ರಶಸ್ತಿ ವಿತರಿಸಲಾಯಿತು. IAS ಅಧಿಕಾರಿಗಳಾದ ರಾಜೇಂದರ್ ಕಟಾರಿಯಾ ಮತ್ತು ಡಾ. ಸೌಮಿತ್ರ ಮೋಹನ್ ಅವರಿಗೆ 2021ರ ಸಾರ್ವಜನಿಕ ಸೇವಾ ಪ್ರಶಸ್ತಿ(Public Service Award’ for 2021. ) ನೀಡಿ ಗೌರವಿಸಲಾಯಿತು.
ಕೃಷಿ ವರದಿಗಾರಿ ಪ್ರಶಸ್ತಿ ಪಡೆದ ಸರೋಜ ಸಿಂಗ್ 1,00,000 ರೂಪಾಯಿ ನಗದು ಬಹುಮಾನ ಸ್ವೀಕರಿಸಿದರು. ಈ ಮೂಲಕ ಸರೋಜ್ ಸಿಂಗ್ ಅತೀ ಹೆಚ್ಚು ಮೌಲ್ಯದ ನಗದು ಬಹುಮಾನ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇತರ ಪ್ರಶಸ್ತಿ ವಿಜೇತರು ತಲಾ 50,000 ರೂಪಾಯಿ ಬಹುಮಾನ ಮೊತ್ತ ಸ್ವೀಕರಿಸಿದ್ದಾರೆ.
ಪರಿಮಲ್ ಕುಮಾರ್ ಅವರಿಗೆ 'ವರ್ಷದ ಪತ್ರಕರ್ತ (Broadcasting), ಉತ್ತಕರ್ಶ್ ಕುಮಾರ್ ಸಿಂಗ್ ಅವರಿಗೆ ವರ್ಷದ ಪತ್ರಕರ್ತ (Publishing), ಹರಿತಾ ಕೆಪಿ ವರ್ಷದ ಭಾರತೀಯ ಭಾಷಾ ವರದಿಗಾರ ಪ್ರಶಸ್ತಿ(Broadcasting), ಪೂಜಾ ಕಲ್ಬಲಿಯಾ ವರ್ಷದ ಜಾಹೀರಾತು ವ್ಯಕ್ತಿ ಮತ್ತು ಸಿದ್ಧಿ ಸೆಹಗಲ್ ವರ್ಷದ PRO ಪ್ರಶಸ್ತಿ ಸ್ವೀಕರಿಸಿದರು.
ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಜಾರ್ಖಂಡ್ ಘಟಕಕ್ಕೆ ಕೆನೆಕ್ಟಿಂಗ್ ಚಾಪ್ಟರ್ ಆಫ್ ದಿ ಇಯರ್ ಪ್ರಶಸ್ತಿ ನೀಡಲಾಗಿದೆ. ಇನ್ನು ನಿಶಾಂತ್ ಶರ್ಮಾಗೆ ಕನೆಕ್ಟಿಂಗ್ ಬ್ಯಾಚ್ ಆಫ್ ದಿ ಇಯರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ವರ್ಷ ಹಳೆ ವಿದ್ಯಾರ್ಥಿಗಳ ಸಂಘ ಗೋಲ್ಡನ್ ಜುಬಿಲಿ (1970-71) ಮತ್ತು ಸಿಲ್ವರ್ ಜುಬಿಲಿ (1995-96) ಬ್ಯಾಚ್‌ಗಳ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಿತು.
ಕೊರೋನಾ ಸೇರಿದಂತೆ ಸಾಕಷ್ಟು ಅಡೆ ತಡೆಗಳ ನಡುವೆ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದ ಹಳೆ ವಿದ್ಯಾರ್ಥಿ ಸಂಘ(IIMCAA )ವನ್ನು IIMC ವಿದ್ಯಾಸಂಸ್ಥೆ ಡಿಜಿ ಸಂಜಯ್ ದ್ವಿವೇದಿ ಅಭಿನಂದಿಸಿದರು. ಒಂದು ವಿದ್ಯಾಸಂಸ್ಥೆಯ ಅಡಿಪಾಯ ಗಟ್ಟಿಯಾಗಲು ಕೇವಲ ಇಟ್ಟಿಗೆ, ಗಾರೆ ಮಾತ್ರ ಸಾಲದು. ಆ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ನಿರಂತರ ಸಂಪರ್ಕ, ಸಲಹೆ, ಮಾರ್ಗದರ್ಶನ, ಕಿರಿಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನದಿಂದ ವಿದ್ಯಾಸಂಸ್ಥೆ ಹೊಸ ಎತ್ತರಕ್ಕೆ ತಲುಪಲಿದೆ. ಕೊರೋನಾ ಸಂದರ್ಭದಲ್ಲೂ ಉತ್ತಮ ಕಾರ್ಯಕ್ರಮ ಆಯೋಜಿಸಿದ ಸಂಘದ ಸದಸ್ಯರು, ಪದಾಧಿಕಾರಿಗಳು ಹಾಗೂ ಎಲ್ಲರಿಗೂ ಅಭಿನಂದನೆ ಹೇಳಿದರು.
ಐಐಎಂಸಿಎಎ ಅಧ್ಯಕ್ಷ ಪ್ರಸಾದ್ ಸನ್ಯಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜೇಂದರ್ ಕಟಾರಿಯಾ ಎಂ.ಕೆ. ಟಿಕ್ಕು, ಪಾರ್ಥ ಘೋಷ್; ನಿತಿನ್ ಪ್ರಧಾನ್, ಮನೋಜ್ ಕುಮಾರ್, ಹರ್ಷೇಂದ್ರ ವರ್ಧನ್ ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದರು. ದೆಹಲಿಯಲ್ಲಿ ನಡೆಯುವ ಕನೆಕ್ಷನ್ಸ್ 2021 ರ ರಾಷ್ಟ್ರೀಯ ಸಭೆ ಮುಂದಿನ ತಿಂಗಳುಗಳಲ್ಲಿ ನಡೆಯಲಿದೆ. ಈ ಕಾರ್ಯ್ರಮದ ಅಂಗವಾಗಿ ಭಾರತ ಮತ್ತು ವಿದೇಶದ ಇತರ ಪ್ರಮುಖ ನಗರಗಳಲ್ಲಿ ಸಭೆ ನಡೆಯಲಿದೆ.
ಪುರಸ್ಕೃತರ ವಿವರ:
ವರ್ಷದ ಹಳೆಯ ವಿದ್ಯಾರ್ಥಿ: ನಿತೇಂದ್ರ ಸಿಂಗ್
ಸಾರ್ವಜನಿಕ ಸೇವೆ: ರಾಜೇಂದರ್ ಕಟಾರಿಯಾ, ಐಎಎಸ್
ಸಾರ್ವಜನಿಕ ಸೇವೆ: ಡಾ.ಸೌಮಿತ್ರ ಮೋಹನ್, ಐ.ಎ.ಎಸ್
ಕನೆಕ್ಟಿಂಗ್ ಚಾಪ್ಟರ್ ಆಫ್ ದಿ ಇಯರ್: ಜಾರ್ಖಂಡ್
ಕನೆಕ್ಟಿಂಗ್ ಗ್ರೂಪ್ ಆಫ್ ದಿ ಇಯರ್: 2000-01 ಬ್ಯಾಚ್
ಕನೆಕ್ಟಿಂಗ್ ಅಲ್ಯೂಮಿನಿ ಆಫ್ ದಿ ಇಯರ್: ನಿಶಾಂತ್ ವರ್ಮಾ
ಪ್ರಶಸ್ತಿ ವಿಜೇತರ ವಿವರ:
ಕೃಷಿ ವರದಿ: ಸರೋಜ್ ಸಿಂಗ್
ವರ್ಷದ ಪತ್ರಕರ್ತ (Puublication): ಉತ್ಕರ್ಶ್ ಕುಮಾರ್ ಸಿಂಗ್
ವರ್ಷದ ಪತ್ರಕರ್ತ (Broadcasting): ಪರಿಮಲ್ ಕುಮಾರ್
ವರ್ಷದ ಭಾರತೀಯ ಭಾಷಾ ವರದಿಗಾರ (Broadcasting): ಹರಿತಾ ಕೆ.ಪಿ.
ವರ್ಷದ ವ್ಯಕ್ತಿ: ಪೂಜಾ ಕಲ್ಬಲಿಯಾ
ವರ್ಷದ ಸಾರ್ವಜನಿಕ ಸಂಪರ್ಕ ವ್ಯಕ್ತಿ: ಸಿದ್ಧಿ ಸೆಹಗಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ