PM Modi in Glasgow;ತಮ್ಮ ಪಕ್ಷ ಸೇರಿಕೊಳ್ಳುವಂತೆ ನರೇಂದ್ರ ಮೋದಿಗೆ ಇಸ್ರೇಲ್ ಪ್ರಧಾನಿ ಆಹ್ವಾನ..ಹಹಾ!

By Suvarna NewsFirst Published Nov 2, 2021, 8:01 PM IST
Highlights
  • ಮೋದಿಗ ಬಿಗ್ ಆಫರ್ ನೀಡಿದ ಇಸ್ರೇಲ್ ಪ್ರಧಾನಿ
  • ಪ್ರಧಾನಿ ಆಫರ್ ಕೇಳಿ ನಗೆಗಡಲಲ್ಲಿ ತೇಲಾಡಿದ ಮೋದಿ
  • ನಮ್ಮ ಪಕ್ಷ ಸೇರಿಕೊಳ್ಳಿ ಎಂದು ಮೋದಿಗೆ ಆಫರ್

ಗ್ಲಾಸ್ಗೋ(ನ.02):  ಪ್ರಧಾನಿ ನರೇಂದ್ರ ಮೋದಿ(Narendra Modi) ವಿಶ್ವದಲ್ಲೇ ಅತ್ಯಂತ ಜನಪ್ರಿಯ ನಾಯಕ. ಇದೀಗ ಈ ಜನಪ್ರಿಯ ನಾಯಕ ಮೋದಿ ಯುಕೆ ಪ್ರವಾಸದಲ್ಲಿದ್ದಾರೆ. ಸಮಾವೇಶ, ದ್ವಿಪಕ್ಷೀಯ ಮಾತುಕತೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಂಡಿದ್ದಾರೆ. ಈ ವೇಳೆ ಇಸ್ರೇಲ್(Israel) ಪ್ರಧಾನಿ ನಫ್ತಾಲಿ ಬೆನ್ನೆಟ್(Naftali Bennett) ಜೊತೆಗಿನ ಮಾತುಕತೆಯ ಸಣ್ಣ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಇಸ್ರೇಲ್ ಪ್ರಧಾನಿ ನೀಡಿದ ಬಿಗ್ ಆಫರ್ ಮಾತುಕತೆ ಭಾರಿ ಸಂಚಲನ ಸೃಷ್ಟಿಸಿದೆ.

COP26 ಸಮ್ಮೇಳನ; ಶಾಲಾ ಪಠ್ಯದಲ್ಲಿ ಹವಾಮಾನ ಬದಲಾವಣೆ ನೀತಿ ಸೇರಿಸುವ ಅಗತ್ಯವಿದೆ; ಪ್ರಧಾನಿ ಮೋದಿ!

ದ್ವಿಪಕ್ಷೀಯ ಮಾತುಕತೆಗೆ ಮುನ್ನ ಪ್ರಧಾನಿ ಮೋದಿ ಹಾಗೂ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನ್ನೆಟ್ ಒಬ್ಬರನ್ನೊಬ್ಬರು ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ , ನೀವು ಇಸ್ರೇಲ್‌ನಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿ. ನೀವು ಇಸ್ರೇಲ್‌ಗೆ ಬಂದು ನಮ್ಮ ಪಕ್ಷ ಸೇರಿಕೊಳ್ಳಿ ಎಂದು ಮೋದಿ ಬಳಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನ್ನೆಟ್ ಹೇಳಿದ್ದಾರೆ.

ನಫ್ತಾಲಿ ಬೆನ್ನೆಟ್ ಮಾತು ಕೇಳಿದ ಮೋದಿಗೆ ನಗು ತಡೆಯಲು ಆಗಲಿಲ್ಲ. ಬೆನ್ನೆಟ್ ಹಾಗೂ ಮೋದಿ ಇಬ್ಬರು ನಗೆಗಡಲಲ್ಲಿ ತೇಲಾಡಿದ್ದಾರೆ. ಮೋದಿ ಜನಪ್ರಿಯತೆ, ಮೋದಿ ವರ್ಚಸು ಇಸ್ರೇಲ್‌ನಲ್ಲೂ ಮ್ಯಾಜಿಕ್ ಮಾಡುತ್ತಿದೆ. ಹೀಗಾಗಿ ತಮ್ಮ ಪಕ್ಷ ಸೇರಿಕೊಳ್ಳಿ ಎಂದು ಮೋದಿಗೆ ಆಹ್ವಾನ ನೀಡಿದ್ದಾರೆ. 

 

Israel's PM Bennett to : You are the most popular man in Israel. Come and join my party pic.twitter.com/0VH4jWF9dK

— Amichai Stein (@AmichaiStein1)

ಭಾರತೀಯರು ಇಸ್ರೇಲ್ ಜೊತೆಗಿನ ಸ್ನೇಹ ಸಂಬಂಧವನ್ನು ಗೌರವಿಸುತ್ತಾರೆ. ದ್ವಿಪಕ್ಷೀಯ ಸಂಬಂಧ, ವ್ಯವಹಾರ ವೃದ್ಧಿಸಲು ಜೊತೆಯಾಗಿ ಕೆಲಸ ಮಾಡಬೇಕು ಎಂದು ಮೋದಿ ದ್ವಿಪಕ್ಷೀಯ ಮಾತುಕತೆಯಲ್ಲಿ ಹೇಳಿದ್ದಾರೆ. ಪ್ರಧಾನಿ ಮೋದಿ ಜೊತೆ ವಿದೇಶಾಂಗ ಸಚಿವ ಜೈಶಂಕರ್ ಕೂಡ ದ್ವಿಪಕ್ಷೀಯ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು.

ಇಂಗಾಲ, ಕಲ್ಲಿದ್ದಲಿಗೆ ಅಂಕುಶ ಹಾಕಲು ಜಿ-20 ಅಸ್ತು!

ದ್ವಿಪಕ್ಷೀಯ ಮಾತುಕತೆಗೂ ಮುನ್ನ ಪ್ರಧಾನಿ ಮೋದಿ ಗ್ಲಾಸ್ಕೋದಲ್ಲಿ ಹವಾಮಾನ ಬದಲಾವಣೆ(Climate Change) ಸಮಾವೇಶದಲ್ಲಿ ಮಹತ್ವದ ಭಾಷಣ ಮಾಡಿದ್ದಾರೆ. ಮೋದಿ ಭಾಷಣಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾದಿದೆ. 

ಕ್ಲೈಮೆಟ್‌ ಸಮ್ಮಿಟ್‌ಗೆ(cop26 summit) ಮೊದಲ ಸಲ ನಾನು ಬಂದಾಗ, ಜಗತ್ತಿನಲ್ಲಿ ನೀಡಲಾಗಿರುವ ಹಲವು ಭಾಷೆಗಳಲ್ಲಿ ನಾನೂ ಒಂದು ಹೊಸ ಭಾಷೆಯನ್ನು ಸೇರ್ಪಡೆ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ನಾನೊಂದು ಕಾಳಜಿಯಿಂದ ಬಂದೆ. ಆ ಕಾಳಜಿ ಇಡೀ ಮನುಕುಲಕ್ಕೆ ಸಂಬಂಧಿಸಿದ್ದು. ನಾನು ಬಂದಿರುವ ಭೂಮಿಯ ಸಂಸ್ಕೃತಿ ‘ಸರ್ವೇ ಭವಂತು ಸುಖಿನಃ’ ಭೂಮಿಯಲ್ಲಿರುವ ಎಲ್ಲರೂ ಸುಖದಿಂದಿರಲಿ ಎಂದು ಬಯಸುತ್ತದೆ ಎಂದು ಮೋದಿ ಹೇಳಿದ್ದಾರೆ. 

ಪ್ಯಾರಿಸ್‌ನಲ್ಲಿ ನಡೆದಿದ್ದ ಸಮ್ಮೇಳನ ನನಗೆ ಕೇವಲ ಸಮ್ಮೇಳನವಾಗಿರಲಿಲ್ಲ. ನನಗದು ಸಂವೇದನೆಯಾಗಿತ್ತು. ಬದ್ಧತೆಯಾಗಿತ್ತು. ಭಾರತವು ವಿಶ್ವಕ್ಕೆ ಕೇವಲ ಭಾಷೆಗಳನ್ನು ನೀಡುತ್ತಿಲ್ಲ. ಆಣೆ ಪ್ರಮಾಣಗಳನ್ನು ಮಾಡುತ್ತಿಲ್ಲ. ಈ ಭಾಷೆಯನ್ನು ಭಾರತದ 125 ಜನಸಂಖ್ಯೆಯ ಜನರು ತಮಗೆ ತಾವೇ ಆಣೆ ಪ್ರಮಾಣ ಮಾಡಿಕೊಂಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಭಾರತದಂಥ ಅಭಿವೃದ್ಧಿಪರ ದೇಶದಲ್ಲಿ ಕೋಟಿಗಟ್ಟಲೆ ಜನರನ್ನು ಬಡತನದಿಂದ ಮೇಲೆತ್ತಲು, ಸಮಯಮೀರಿ, ಗುರಿಮೀರಿ ಶ್ರಮಿಸುತ್ತಿದ್ದೇವೆ ಎಂದು ಹೇಳಲು ಸಂತೋಷವಾಗುತ್ತದೆ. ಜನರ ಜೀವನ ಸರಳಗೊಳಿಸಲು, ಸುಲಲಿತಗೊಳಿಸಲು ಅವಿರತವಾಗಿ ಶ್ರಮಿಸುತ್ತಿದೆ. ಜಗತ್ತಿನ ಶೇ 17ರಷ್ಟು ಜನಸಂಖ್ಯೆ ಭಾರತದಲ್ಲಿದೆ. ಆದರೆ ಭಾರತದ ಮಾಲಿನ್ಯದ ಪ್ರಮಾಣ ಶೇ 5ರಷ್ಟು ಮಾತ್ರ ಇದೆ ಎಂದು ಮೋದಿ ಹೇಳಿದ್ದಾರೆ.

ಭಾರತ ದೇಶ ಮಾತ್ರ ಅತಿ ಬೃಹತ್‌ ಆರ್ಥಿಕತೆಯನ್ನು ಹೊಂದಿರುವ ದೇಶವಾಗಿದೆ ಎಂದು ಇಡೀ ವಿಶ್ವವು ನಂಬಿದೆ. ಪ್ಯಾರಿಸ್‌ ಬದ್ಧತೆಯಲ್ಲಿ ಭಾರತವು ಈ ಬಗ್ಗೆ ಸ್ಪಷ್ಟಪಡಿಸಿದೆ. ನಮ್ಮ ದೃಢನಿಶ್ಚಯ ಮತ್ತು ಪರಿಶ್ರಮಗಳು ತಮ್ಮ ಫಲಿತಾಂಶವನ್ನು ತೋರುತ್ತಿವೆ. ಈ ಏಳು ವರ್ಷಗಳಲ್ಲಿ ಭಾರತವು ಸಾಂಪ್ರದಾಯಿಕ ಮೂಲವಲ್ಲದ ಇಂಧನಗಳ ಬಳಕೆಯಲ್ಲಿ ಶೇ 25ರಷ್ಟು ಹೆಚ್ಚಾಗಿದೆ. ಸಮ್ಮಿಶ್ರ ಇಂಧನ ಬಳಕೆಯಲ್ಲಿ ಶೇ 40ರಷ್ಟು ಹೆಚ್ಚಳ ಸದ್ಯಕ್ಕೆ ಕಂಡು ಬಂದಿದೆ ಎಂದು ಮೋದಿ ಹೇಳಿದ್ದಾರೆ.

click me!