ಮಹಾ ಉಪ ಮುಖ್ಯಮಂತ್ರಿಗೆ ಬೇನಾಮಿ ಆಸ್ತಿ ಸಂಕಷ್ಠ; 1,000 ಕೋಟಿ ಮೌಲ್ಯದ ಆಸ್ತಿ ಜಪ್ತಿ!

By Suvarna NewsFirst Published Nov 2, 2021, 5:48 PM IST
Highlights
  • ಮಹಾರಾಷ್ಟ್ರ ಉಪ  ಮುಖ್ಯಮಂತ್ರಿಗೆ ಬೇನಾಮಿ ಆಸ್ತಿ ಸಂಕಟ
  • ಅಜಿತ್ ಪವಾರ್‌ಗೆ ಸೇರಿದ 1,000 ಕೋಟಿ ಮೌಲ್ಯದ ಆಸ್ತಿ ಜಪ್ತಿ
  • ಆಸ್ತಿ ಸೀಝ್ ಮಾಡಿದ ಆದಾಯ ತೆರಿಗೆ ಇಲಾಖೆ

ಮುಂಬೈ(ನ.02): ದೇಶದಲ್ಲಿ ಶರದ್ ಪವಾರ್ ನೇತೃತ್ವದ NCP ಪಕ್ಷ ಹಾಗೂ ನಾಯಕರು ಭಾರಿ ಸದ್ದು ಮಾಡುತ್ತಿದ್ದಾರೆ. NCB ಮುಖ್ಯಸ್ಥ ಸಮೀರ್ ವಾಂಖೆಡೆ ವಿರುದ್ಧ ಗಂಭೀರ ಆರೋಪ ಮಾಡಿದ ಎನ್‌ಸಿಪಿ ನಾಯಕ ನವಾಬ್ ಮಲಿಕ್ ದೇಶದಲ್ಲಿ ಭಾರಿ ಸಂಚಲನ ಮೂಡಿಸಿದ್ದರೆ, ಇದೀಗ ಮತ್ತೊರ್ವ NCP ನಾಯಕ, ಮಹಾರಾಷ್ಟ್ರ(Maharastra) ಮೈತ್ರಿ ಸರ್ಕಾರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್(Ajit Pawar) ಸರದಿ. ಈ ಬಾರಿ ಅಜಿತ್ ಪವಾರ್ ಸಂಚಲನಕ್ಕಿಂತ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಜಿತ್ ಪವಾರ್‌ಗೆ ಸೇರಿದ 1,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ.

ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ಗೆ ಇ.ಡಿ. ಶಾಕ್‌!

ಬೇನಾಮಿ ಆಸ್ತಿ ಹೊಂದಿರುವ ಅಜಿತ್ ಪವಾರ್‌ಗೆ ಇದೀಗ ಐಟಿ ಇಲಾಖೆ(Income Tax Department) ಶಾಕ್ ನೀಡಿದೆ. ಅಜಿತ್ ಪವಾರ್‌ಗೆ ಸೇರಿದೆ. ಆದರೆ ಅಜಿತ್ ಪವಾರ್ ಹೆಸರಲ್ಲಿ ಇಲ್ಲದ ಸುಮಾರು 1,000 ರೂಪಾಯಿ ಮೌಲ್ಯದ ಆಸ್ತಿಗಳನ್ನು ಐಟಿ ಇಲಾಖೆ ಸೀಝ್ ಮಾಡಿದೆ. ಇದೀಗ ಪವಾರ್ ಸಂಕಷ್ಟ ಹೆಚ್ಚಾಗಿದೆ.

ಮಹಾರಾಷ್ಟ್ರ, ಗೋವಾ, ದೆಹಲಿ ಸೇರಿದಂತೆ ದೇಶದ ವಿವಿದೆಡೆಯಲ್ಲಿರುವ ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆಯೆ ಬೇನಾಮಿ ವಿಭಾಗ ಸೀಝ್ ಮಾಡಿದೆ. ದೆಹಲಿಯಲ್ಲಿನ 20 ಕೋಟಿ ಮೌಲ್ಯದ ಫ್ಲ್ಯಾಟ್, ಗೋವಾದಲ್ಲಿರುವ 250 ಕೋಟಿ ರೂಪಾಯಿ ಮೌಲ್ಯದ ರೆಸಾರ್ಟ್, ಮುಂಬೈನಲ್ಲಿರುವ 600 ಕೋಟಿ ರೂಪಾಯಿ ಮೌಲ್ಯದ ಸಕ್ಕರೆ ಕಾರ್ಖಾನೆ, ಮಹಾರಾಷ್ಟ್ರದಲ್ಲಿನ ಮನೆ, ಮುಂಬೈನ ಹೊರವಲ, ಪುಣೆ ಸೇರಿದಂತೆ ಮಹಾರಾಷ್ಟ್ರದ ಹಲವು ಭಾಗದಲ್ಲಿರುವ ಸುಮಾರು 500 ಕೋಟಿ ರೂಪಾಯಿ ಮೌಲ್ಯದ ಭೂಮಿ ಸೇರಿದಂತೆ ಒಟ್ಟು 1,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ.

ಓ... ಡಿಸಿಎಂ ಸೋಷಿಯಲ್ ಮೀಡಿಯಾ ಖಾತೆ ನಿರ್ವಹಣೆಗೆ 6 ಕೋಟಿ!

ಈ ಎಲ್ಲಾ ಆಸ್ತಿಗಳು ಅಜಿತ್ ಪವಾರ್‌ಗೆ ಸೇರಿದ್ದಾಗಿದೆ, ಆದರೆ ಈ ಆಸ್ತಿಗಳು ಅಜಿತ್ ಪವಾರ್ ಹೆಸರಿನಲ್ಲಿ ರಿಜಿಸ್ಟರ್ಡ್ ಆಗಿಲ್ಲ ಎಂದು ಐಟಿ ಇಲಾಖೆ ಹೇಳಿದೆ. ಇತ್ತ ಅಜಿತ್ ಪವಾರ್‌ಗೆ ನೊಟೀಸ್ ನೀಡಲಾಗಿದೆ. ಇದೀಗ 3 ತಿಂಗಳೊಳಗೆ ಅಜಿತ್ ಪವಾರ್ ತನಗೂ ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿರುವ ಆಸ್ತಿಗಳಿಗೆ ಸಂಬಂಧವಿಲ್ಲ ಎಂದು ನ್ಯಾಯಾಲದಲ್ಲಿ ಸಾಬೀತು ಪಡಿಸಬೇಕಿದೆ.

ಕಳೆದ ತಿಂಗಳಿನಿಂದ ಅಜಿತ್ ಪವಾರ್ ಸಂಕಷ್ಟ ಹೆಚ್ಚಾಗಿದೆ. ಅಜಿತ್ ಪವಾರ್‌ಗೆ ಸೇರಿದ ರಿಯಲ್ ಎಸ್ಟೇಟ್, ಮನೆ, ಕಚೇರಿ, ಉದ್ಯಮದ ಮೇಲೆ ಐಟಿ ಇಲಾಖೆ ಅಕ್ಟೋಬರ್ 7 ರಂದು ದಾಳಿ ಆರಂಭಿಸಿತ್ತು.  ರಿಯಲ್ ಎಸ್ಟೇಟ್ ದಾಳಿಯಲ್ಲಿ 184 ಕೋಟಿ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾಗಿತ್ತು. ಈ ದಾಳಿ ಬಳಿಕ ಐಟಿ ಇಲಾಖೆ ರೇಡ್ ಚುರುಕುಗೊಳಿಸಿತ್ತು. ಅಜಿತ್ ಪವಾರ್ ಹಾಗೂ ಅವರ ಕುಟುಂಬಸ್ಥರ 70 ಕಡೆ ಐಟಿ ಇಲಾಖೆ ದಾಳಿ ಮಾಡಿತ್ತು. ಈ ವೇಳೆ ಅಕ್ರಮ ಆಸ್ತಿ ಜೊತೆಗೆ ಬೇನಾಮಿ ಆಸ್ತಿ ಪತ್ತೆಯಾಗಿತ್ತು.

ಮಹಾ ಡಿಸಿಎಂ ಪವಾರ್‌ ಹೇಳಿಕೆಗೆ ಪಕ್ಷಾತೀತ ಆಕ್ರೋಶ, ಕರ್ನಾಟಕ ಕೆಂಡ!

ನನ್ನ ಎಲ್ಲಾ ಕಂಪನಿಗಳು ಸರಿಯಾಗಿ ತೆರಿಗೆ ಪಾವತಿಸಿದೆ. ಹಣಕಾಸು ಸಚಿವನಾಗಿರುವ ಕಾರಣ ಈ ಕುರಿತು ಹೆಚ್ಚಿನ ಮುತುವರ್ಜಿ ವಹಿಸಿದ್ದೇನೆ ಎಂದಿದ್ದರು.  ಆದರೆ ದಾಳಿ ಸದ್ದಿಲ್ಲದೆ ಮುಂದುವರಿದಿತ್ತು. ಎಲ್ಲಾ ದಾಖಲೆ ಕಲೆ ಹಾಕಿದ ಐಟಿ ಇಲಾಖೆ ಇದೀಗ ಅಜಿತ್ ಪವಾರ್‌ಗೆ ಸೇರಿದ 1,000 ಕೋಟಿ ರೂಪಾಯಿ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.

ಐಟಿ ದಾಳಿ ಕುರಿತು NCP ಮುಖ್ಯಸ್ಥ ಶರದ್ ಪವಾರ್(Sharad pawar) ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸರ್ಕಾರ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ತನಿಖಾ ಸಂಸ್ಥೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಶರದ್ ಪವಾರ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. 

click me!