ಕರ್ನಾಟಕದ ಸಿರಿಧಾನ್ಯ ಕಂಪನಿಗೆ ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಶಹಬ್ಬಾಸಗಿರಿ!

Published : Jan 29, 2023, 07:44 PM IST
ಕರ್ನಾಟಕದ ಸಿರಿಧಾನ್ಯ ಕಂಪನಿಗೆ ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಶಹಬ್ಬಾಸಗಿರಿ!

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುವ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹಲವು ವಿಷಗಳ ಕುರಿತು ಪ್ರಸ್ತಾಪ ಮಾಡಲಾಗಿದೆ. ಇದರಲ್ಲಿ ಕರ್ನಾಟಕ ಸಿರಿಧಾನ್ಯ ಕಂಪನಿಗಳ ಯಶೋಗಾಥೆಯನ್ನು ವಿವರಿಸಿದ್ದಾರೆ. ಈ ಕುರಿತು ಮನ್ ಕಿ ಬಾತ್‌ನಲ್ಲಿ ಮೋದಿ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ವಿವರ.

ನವದೆಹಲಿ(ಜ.29): ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯ ಕಾರ್ಯಕ್ರಮ ಮನ್ ಕಿ ಬಾತ್ ಇಂದು 9ನೇ ಅವತರಣಿಗೆ ಪ್ರಸಾರವಾಗಿದೆ. ಹಲವು ಪ್ರಸ್ತುತ ವಿಷಯ, ಸಾಧಕರ ಪರಿಚಯ, ಸಂದೇಶಗಳೊಂದಿಗೆ ಪ್ರಸಾರವಾಗುವ ಮನ್ ಕಿ ಬಾತ್‌ನಲ್ಲಿ ಈ ಬಾರಿ ಮೋದಿ ಕರ್ನಾಟಕದ ಸಿರಿಧಾನ್ಯ ಕಂಪನಿ ಕುರಿತು ಮಾತನಾಡಿದ್ದಾರೆ. ಕರ್ನಾಟಕದ ಕಲ್ಬುರ್ಗಿಯ ಆಳಂದ ಭೂತಾಯಿ ಹಾಗೂ ಬೀದರ್ ನ ಮಹಿಳೆಯರ ತಂಡ ಸಿರಿಧಾನ್ಯಗಳಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ ಯಶಸ್ವಿ ಉದ್ಯಮ ನಡೆಸುತ್ತಿದ್ದಾರೆ. ಈ ಸಾಧನೆಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2023ರ ಸಾಲಿನಲ್ಲಿನ ನಡೆಸಿಕೊಟ್ಟ ಮೊದಲ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಕರ್ನಾಟಕದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕಲ್ಬುರ್ಗಿಯ ಆಳಂದ ಭೂತಾಯಿ ಸಿರಿಧಾನ್ಯ ಕಂಪನಿ ಕಳೆದ ವರ್ಷ ಭಾರತೀಯ ಸಿರಿಧಾನ್ಯ ಸಂಶೋಧನಾ ಕಂಪನಿ ಮೇಲ್ವಿಚಾರಣೆಯಲ್ಲಿ ವ್ಯವಹಾರ ಆರಂಭಿಸಿತು. ಒಂದೇ ವರ್ಷದಲ್ಲಿ ಅತ್ಯಂತ ಯಶಸ್ವಿಯಾಗಿದೆ. ಇಲ್ಲಿನ ಬಿಸ್ಕೆಟ್, ಕಾಕ್ರ, ಲಡ್ಡುಗಳನ್ನು ಜನರು ಇಷ್ಟಪಡುತ್ತಿದ್ದಾರೆ ಎಂದು ಮೋದಿ ಮನ್ ಕಿ ಬಾತ್‌ನಲ್ಲಿ ಹೇಳಿದ್ದಾರೆ.

Mann Ki Baat: ಗದಗ ಹೋಟೆಲ್ ಉದ್ಯಮಿಯ ಕಲಾಸೇವೆಗೆ ಮನ್ ಕೀ ಬಾತ್ ನಲ್ಲಿ ಮೋದಿ ಮೆಚ್ಚುಗೆ

ಇನ್ನು ಇದೇ ರೀತಿ ಬೀದರ್ ಜಿಲ್ಲೆಯಲ್ಲಿ ಹುಲ್ಸೂರು ಉತ್ಪಾದಕ ಕಂಪನಿಗೆ ಸೇರಿದ ಮಹಿಳೆಯರು, ಸಿರಿಧಾನ್ಯ ಕೃಷಿಯ ಜೊತೆಗೆ ಅವರೇ ಹಿಟ್ಟನ್ನು ಸಿದ್ಧಪಡಿಸುತ್ತಿದ್ದಾರೆ. ಇದರಿಂದಾಗಿ ಆವರ ಆದಾಯವೂ ಸಾಕಷ್ಟು ಹೆಚ್ಚಿದೆ ಎಂದು ಮೋದಿ ಕರ್ನಾಟಕದ ಎರಡು ಯಶಸ್ವಿ ಕಂಪನಿಗಳ ಉದಾಹರಣೆ ನೀಡಿ ಶಹಬ್ಬಾಸ್‌ಗಿರಿ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಸಿರಿ ಧಾನ್ಯ ಕಂಪನಿಗಳ ಉಲ್ಲೇಖಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಬೆನ್ನಲ್ಲೇ ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್, ಪ್ರಹ್ಲಾದ್ ಜೋಶಿ ಸೇರಿದಂತೆ ಹಲವರು ಇದು ಕರ್ನಾಟಕದ ಪಾಲಿಗೆ ಅತ್ಯಂತ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ. 

97ನೇ ಮನ್ ಕಿ ಬಾತ್ ಅವತರಣಿಗೆ ಮುಖ್ಯಾಂಶ;
ನನ್ನ ಪ್ರೀತಿಯ ದೇಶಬಾಂಧವರೇ ನಮಸ್ಕಾರ. ಜನವರಿ 14ರಂದು ದೇಶಾದ್ಯಂತ ಹಬ್ಬಗಳ ಉತ್ಸಾಹ. ಬಳಿಕ ಗಣರಾಜ್ಯೋತ್ಸವ ಆಚರಿಸಲಾಯಿತು. ಪರೇಡ್‌ನಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಮೆರವಣಿ ಹೆಮ್ಮೆ ತಂದಿದೆ ಎಂದು ಪತ್ರ ಬರೆದಿದ್ದಾರೆ. ಇನ್ನು ಪದ್ಮ ಪ್ರಶಸ್ತಿ ಸೂಕ್ತರಿಗೆ ಸಿಗುತ್ತಿದೆ ಅನ್ನೋ ಹರ್ಷವನ್ನು ಹಲವು ವ್ಯಕ್ತಪಡಿಸಿ ನನಗೆ ಪತ್ರ ಬರೆದಿದ್ದಾರೆ. ಬುಡಕಟ್ಟು ಸಮುದಾಯಗಳ ಸಂಸ್ಕತಿ, ಪರಂಪರೆಯನ್ನು ಉಳಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಮೋದಿ ಮನ್ ಕಿ ಬಾತ್‌ನಲ್ಲಿ ಹೇಳಿದ್ದಾರೆ.

Bagalkote: ಮನ್ ಕಿ ಬಾತ್‌ನಲ್ಲಿ ಬಿಲ್‌ಕೆರೂರ ಗ್ರಾಮದ ಕೆರೆ ಬಗ್ಗೆ ಶ್ಲಾಘನೀಯ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ಅಜಾದಿ ಕಾ ಅಮೃತಮಹೋತ್ಸವ ಸಂದರ್ಭದಲ್ಲಿ ನಾನು ಆಸಕ್ತಿದಾಯ ಪುಸ್ತಕದ ಕುರಿತು ಚರ್ಚಿಸುತ್ತೇನೆ. ಇಂಡಿಯಾ ದಿ ಮದರ್ ಆಫ್ ಡೆಮಾಕ್ರಸಿ ಎಂಬ ಪುಸ್ತಕದಲ್ಲಿನ ಒಂದು ವಿಷಯನ್ನ ಇಲ್ಲಿ ಹೇಳುತ್ತೇನೆ. ನಮ್ಮ ಪ್ರಜಾಪ್ರಭುತ್ವದ ಕುರಿತು ವಿಶ್ವವೇ ಬೆರಗುಗಣ್ಣಿನಿಂದ ಹಾಗೂ ಹೆಮ್ಮೆಯಿಂದ ನೋಡುತ್ತಿದೆ.   ತಮಿಳುನಾಡಿನ ಪುತ್ತಿರ್ ಮೆರೂರ್ ಎಂಬ ಪುಟ್ಟ ಹಳ್ಳಿಯಲ್ಲಿರುವ ಶಿಲಾಶಾಸನ ವಿಶ್ವಕ್ಕೆ ಅಚ್ಚರಿ ತಂದಿದೆ. 1500 ವರ್ಷಗಳ ಹಿಂದಿನ ಈ ಶಾಸನ ಪುಟ್ಟ ಸಂವಿಧಾನದಂತಿದೆ. ಗ್ರಾಮ ಸಭೆ, ಸದಸ್ಯರ ಆಯ್ಕೆ ಹೇಗಿರಬೇಕು ಅನ್ನೋದನ್ನು ವಿವರಿಸಲಾಗಿದೆ ಎಂದರು.

ದೇಶದ ಇತಿಹಾಸದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಮತ್ತೊಂದು ಉದಾಹರಣೆ ಎಂದರೆ, 12ನೇ ಶತಮಾನದಲ್ಲಿನ ಬಸವೇಶ್ವರರ ಅನುಭವ ಮಂಟಪ. ಇಲ್ಲಿ ಮುಕ್ತ ಸಂವಾದ, ಚರ್ಚೆಗೆ ಉತ್ತೇಜನ ನೀಡಲಾಗುತ್ತಿತ್ತು. ಇದು ಮ್ಯಾಗ್ನಾ ಕಾರ್ಟಾಗಿಂತ ಮುಂಚಯೇ ಅಸ್ತಿತ್ವದಲ್ಲಿತ್ತು ಎಂದು ಮೋದಿ ಕರ್ನಾಟಕ ಬಸವಣ್ಣನ ಕುರಿತು ಉಲ್ಲೇಖಿಸಿ ಭಾರತದ ಪ್ರಜಾಪ್ರಭುತ್ವದ ಕುರಿತು ಮಹತ್ವದ ಅಂಶಗಳನ್ನು ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌