
ಲಖನೌ (ನ.22) ಮದುವೆ ಸೀಸನ್ ಆರಂಭಗೊಂಡಿರುವ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಿಂದ ಭಾರತೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ವರ್ಷ ಚಿನ್ನದ ಬೆಲೆ ಗಗನಕ್ಕೇರಿತ್ತು. ಯುದ್ಧ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆದ ಮಹತ್ತರ ಬದಲಾವಣೆಗಳು, ಚಿನ್ನದ ಮೇಲಿನ ಹೂಡಿಕೆ ಸೇರಿದಂತೆ ಸೃಷ್ಟಿಯಾದ ಕೋಲಾಹಗಳಿಂದ ಚಿನ್ನದ ಬೆಲೆ ದುಬಾರಿಯಾಗಿತ್ತು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಚಿನ್ನ ಖರೀದಿಸದಂತೆ ಮನವಿ ಮಾಡಿದ್ದರು. ದೇಶದನ ಜನತೆ, ವ್ಯಾಪಾರಿಗಳಲ್ಲಿ ಚಿನ್ನ ಖರೀದಿ ಹಾಗೂ ಆಮದು ತಗ್ಗಿಸಲು ಸೂಚಿಸಿದ್ದರು. ಇದೀಗ ಒಂದೇ ವರ್ಷದಲ್ಲಿ ಚಿನ್ನದ ಬೆಲೆಯಲ್ಲಿ ಆಗಿರುವ ಗಣನೀಯ ಇಳಿಕೆ ಬೆನ್ನಲ್ಲೇ ಪ್ರಧಾನಿ ಮೋದಿ ಮತ್ತೆ ದೇಶದ ಜನತೆಗೆ ಮಹತ್ವದ ಸಂದೇಶ ನೀಡಿದ್ದಾರೆ.
ಉತ್ತರ ಪ್ರದೇಶದ ಗೋಮತಿ ನಗರದ ಇಂದಿರಾ ಗಾಂಧಿ ಪ್ರತಿಷ್ಠಾನದಲ್ಲಿ ನಡೆದ ರಾಷ್ಟ್ಪೀಯ ಕೌಶಲ್ಯ ಘಟಿಕೋತ್ಸವದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಳೆದ ಮನವಿಯನ್ನು ನೆನಪಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ಚಿನ್ನ ಖರೀದಿಯಿಂದ ದೂರವಿರಲು ಮನವಿ ಮಾಡಿದ್ದೆ. ಅನಗತ್ಯ ಚಿನ್ನಖರೀದಿ ಬೇಡ ಎಂದು ದೇಶದ ಜನತೆಗೆ ಮನವಿ ಮಾಡಿದ್ದೆ. ನನ್ನ ಮನವಿಗೆ ದೇಶದ ಜನರು ಸ್ಪಂದಿಸಿದ್ದರು. ಜನರು ನೀಡಿದ ಸ್ಪಂದನೆಯಿಂದ ಇಂದು ಚಿನ್ನದ ಬೆಲೆ ಇಳಿಕೆಯಾಗಿದೆ ಎಂದು ಮೋದಿ ಹೇಳಿದ್ದಾರೆ.
ಅನಗತ್ಯವಾಗಿ ಚಿನ್ನ ಖರೀದಿ ಬೇಡ, ಹೆಚ್ಚುವರಿ ಚಿನ್ನ ಆಮದು ಬೇಡ ಎಂದು ಜನರು ಹಾಗೂ ವರ್ತರಿಗೆ ಪ್ರಧಾನಿ ಮೋದಿ ಮನವಿ ಮಾಡಿದ್ದರು. ತನ್ನ ಮನವಿಗೆ ದೇಶದ ಜನತೆ ಸ್ಪಂದಿಸಿದ್ದಾರೆ. ಇದರಿಂದ ಚಿನ್ನದ ಬೆಲೆ ಇಳಿಮುಖವಾಗಿದೆ. 1965ರಲ್ಲಿ ಆಹಾರ ಕೊರತೆ ಸಂದರ್ಭದಲ್ಲಿ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ದೇಶದ ಜನತೆಗೆ ಮಹತ್ವದ ಕರೆ ನೀಡಿದ್ದರು. ಒಂದು ಹೊತ್ತಿನ ಊಟ ಬಿಡುವಂತೆ ಕರೆ ನೀಡಿದ್ದರು. ಶಾಸ್ತ್ರಿ ನೀಡಿದ್ದ ಕರೆಗೆ ಇಡೀ ದೇಶ ಸ್ವಂದಿಸಿತ್ತು. ನಮ್ಮ ಭಾರತದ ಈಗಲೂ ಅದೇ ಗುಣ ಉಳಿಸಿಕೊಂಡಿದೆ ಎಂದು ಮೋದಿ ಹೇಳಿದ್ದಾರೆ. ಈ ಮೂಲಕ ಶಾಸ್ತ್ರಿ ಕರೆಯನ್ನು ಸ್ಮರಿಸಿದ್ದಾರೆ.
ಪ್ರಧಾನಿ ಮೋದಿ ಮನವಿ ಮಾಡಿದ ಹಿಂದಿನ ದಿನ ಅಂದರೆ ಮೇ.9 ರಂದು ಪ್ರತಿ ಗ್ರಾಂ ಚಿನ್ನಕ್ಕೆ ಭಾರತದಲ್ಲಿ 15,220 ರೂಪಾಯಿ ಇತ್ತು. ಇದೀಗ ಪ್ರತಿ ಗ್ರಾಂಗೆ 12,523 ರೂಪಾಯಿಗೆ ಇಳಿಕೆಯಾಗಿದೆ. ಮೇ ತಿಂಗಳಿನಿಂದ ಭಾರತದ ಚಿನ್ನದ ಆಮದು ಶೇಕಡಾ 40ರಷ್ಟು ಕುಸಿತ ಕಂಡಿದೆ. ವಿದೇಶಿ ವಿನಿಮಯದ ಒತ್ತಡ ಹೆಚ್ಚಾದಾಗ, ವಿದೇಶಿ ವಿನಿಮಯ ಕೊರತೆ ತೀವ್ರಗೊಳ್ಳುತ್ತಿದ್ದಂತೆ ಮೋದಿ ಚಿನ್ನ ಖರೀದಿ ಮಾಡದಂತಂ ಮನವಿ ಮಾಡಿದ್ದರು. ಇದೇ ವೇಳೆ ಇಂಧನ ಉಳಿತಾಯ, ವಿದೇಶ ಪ್ರವಾಸಕ್ಕೆ ಮಿತಿ, ಸಾಧ್ಯವಾದರೆ ವರ್ಕ್ ಫ್ರಮ್ ಹೋಮ್ ಮಾಡುವಂತೆ ಮೋದಿ ಮನವಿ ಮಾಡಿದ್ದರು.
ಪ್ರಧಾನಿ ನರೇಂದ್ರ ಮೋದಿಗೆ ಚೇಂಬರ್ ಆಫ್ ಟ್ರೇಡ್ ಆ್ಯಂಜಡ್ ಇಂಡಸ್ಟ್ರಿ ಪತ್ರ ಬರೆದು ಮೆಚ್ಚುಗೆ ಸೂಚಿಸಿದೆ. ಪ್ರಧಾನಿ ಮೋದಿ ದೂರದೃಷ್ಟಿಯಿಂದ ಲಕ್ಷಾಂತರ ಆಭರಣ ವ್ಯಾಪಾರಿಗಳು, ಹೂಡಿಕೆದಾರರನ್ನು ಸಾಲದ ಸುಳಿಗೆ ಸಿಲುಕದಂತೆ ಪ್ರಧಾನಿ ಮೋದಿ ತಡೆದಿದ್ದಾರೆ. ಚಿನ್ನದ ಮೇಲಿನ ಹೂಡಿಕೆ, ಚಿನ್ನ ಆಮದು, ಚಿನ್ನ ಖರೀದಿ ಕುರಿತು ಮೋದಿ ಮಹತ್ವದ ಮನವಿ ಮಾಡಿದ್ದರು. ಮೋದಿ ಸಲಹೆ ನೀಡಿದ ಸಮಯದಲ್ಲಿ ಪ್ರತಿ ಕೆಜಿ ಚಿನ್ನದ ಬೆಲೆ 1.90 ಕೋಟಿ ರೂಪಾಯಿ ಇತ್ತು. ಇದೀಗ 1.25 ಕೋಟಿಗೆ ಇಳಿಕೆಯಾಗಿದೆ. ಇದರಿಂದ ಪ್ರತಿ ಕೆಜಿಯಲ್ಲಿ ವ್ಯಾಪಾರಿಗಳು 65 ಲಕ್ಷ ರೂಪಾಯಿ ಉಳಿತಾಯವಾಗಿದೆ ಎಂದು ಮೋದಿಗೆ CTI ಧನ್ಯವಾದ ಪತ್ರ ಬರೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ