
Ramrao Wadkute Passes Away: ಬಿಜೆಪಿ ರಾಜ್ಯಸಭಾ ಸಂಸದ ರಾಮರಾವ್ ವಡ್ಕುಟೆ(MP Rama Rao Vadkute) ಹೃದಯಾಘಾತ(Heart attack)ದಿಂದ ನಿಧನರಾಗಿದ್ದಾರೆ. ತೀವ್ರ ಎದೆ ನೋವಿನಿಂದಾಗಿ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಕೇವಲ ಎಂಟು ತಿಂಗಳ ಹಿಂದೆಯಷ್ಟೇ ಬಿಜೆಪಿ ಪಕ್ಷವು ರಾಮರಾವ್ ವಡ್ಕುಟೆ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿತ್ತು. ಅಜಾತಶತ್ರುವಿನಂತೆ ಇದ್ದರು. ಅವರ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲದ ಅತ್ಯುತ್ತಮ ಲೀಡರ್ ಎಂದೇ ಜನಪ್ರಿಯರಾಗಿದ್ದರು. ಇದೀಗ ನಿಧನದಿಂದಾಗಿ ಹಿಂಗೋಲಿ ಸೇರಿದಂತೆ ದೇಶದ್ಯಾಂತ ಗಣ್ಯರು ಕಂಬನಿ ಮಿಡಿದಿದ್ದಾರೆ.
ರಾಜ್ಯಸಭಾ ಸಂಸದ ರಾಮರಾವ್ ವಾಡ್ಕುಟೆ ಈ ಹಿಂದೆ ಶೆಲಿ-ಮೆಂಡಿ ಮಹಾಸಂಘದ (ಆಡು ಮತ್ತು ಕುರಿ ಕಾಯುವವರ ಸಂಘ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ನಂತರ ಅವರು ಎನ್‌ಸಿಪಿ ಪಾರ್ಟಿಯಲ್ಲಿಯೂ ಸೇವೆ ಸಲ್ಲಿಸಿದರು. ಅಷ್ಟೇ ಅಲ್ಲ ಪಕ್ಷದ ಕೋಟಾದಿಂದ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸದಸ್ಯರಾದರು. ಅಕ್ಟೋಬರ್ 2019 ರಲ್ಲಿ, ಎನ್‌ಸಿಪಿಗೆ ರಾಜೀನಾಮೆ ನೀಡಿ ಭಾರತೀಯ ಜನತಾ ಪಕ್ಷ(BJP)ಕ್ಕೆ ಸೇರ್ಪಡೆಯಾಗಿದ್ದರು.. ಬಿಜೆಪಿಗೆ ಸೇರಿದ ನಂತರ, ಅವರನ್ನು 2021 ರಲ್ಲಿ ಬಿಜೆಪಿ ಪಕ್ಷದ ಹಿಂಗೋಲಿ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಏಳು ತಿಂಗಳ ಹಿಂದೆಯಷ್ಟೇ ಪಕ್ಷವು ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ