ಜನಸಾಮ್ಯನರನ್ನು ಸುಲಭವಾಗಿ ತಲುಪಲು ಇದೀಗ ಪ್ರಧಾನಿ ಮೋದಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಇದೀಗ ಮೋದಿ ವ್ಯಾಟ್ಸ್ಆ್ಯಪ್ ಕಮ್ಯೂನಿಟಿ ಸೇರಿದ್ದಾರೆ. ಬಳಿಕ ಹೊಸ ಸಂಸತ್ ಭವನದ ಚಿತ್ರವನ್ನು ಹಂಚಿಕೊಂಡಿದ್ದಾರೆ. ನರೇಂದ್ರ ಮೋದಿ ವ್ಯಾಟ್ಸ್ಆ್ಯಪ್ ಚಾನೆಲ್ ಸೇರಿಕೊಳ್ಳುವುದು ಹೇಗೆ?
ನವದೆಹಲಿ(ಸೆ.19) ಪ್ರಧಾನಿ ನರೇಂದ್ರ ಮೋದಿ ಹೊಸ ಸಂಸತ್ ಭವನದ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮೊದಲ ಭಾಷಣ ಮಾಡಿದ್ದಾರೆ. ಇದೇ ವೇಳೆ ಐತಿಹಾಸಿಕ ಮಹಿಳಾ ಮೀಸಲಾತಿ ಬಿಲ್ ಮಂಡನೆ ಮಾಡಿದ್ದಾರೆ. ಇಂದು ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗಲು ಪ್ರಧಾನಿ ನರೇಂದ್ರ ಮೋದಿ ವ್ಯಾಟ್ಸ್ಆ್ಯಪ್ ಚಾನೆಲ್ ಸೇರಿಕೊಂಡಿದ್ದಾರೆ. ಇದೀಗ ನರೇಂದ್ರ ಮೋದಿ ಗ್ರೂಪ್ ಚಾನೆಲ್ ಆರಂಭಗೊಂಡಿದೆ. ಈ ಮೂಲಕ ಜನಸಾಮಾನ್ಯರ ಜೊತೆ ಸಂವನ, ಯೋಜನೆ, ಸರ್ಕಾರ ಘೋಷಣೆಗಳ ಮಾಹಿತಿ ನೇರವಾಗಿ ಪ್ರಧಾನಿ ಮೋದಿಯಿಂದ ಜನರಿಗೆ ತಲುಪಲಿದೆ.
ಇತ್ತೀಚೆಗೆ ವ್ಯಾಟ್ಸ್ಆ್ಯಪ್ ಗ್ರೂಪ್ ಚಾನೆಲ್ ಫೀಚರ್ ಆರಂಭಿಸಿತ್ತು. ಇದೀಗ ಮೋದಿ ಕೂಡ ಈ ವ್ಯಾಟ್ಸ್ಆ್ಯಪ್ ಚಾನೆಲ್ ಸೇರಿಕೊಂಡಿದ್ದಾರೆ. ಈ ಕುರಿತು ತಮ್ಮ ನರೇಂದ್ರ ಮೋದಿ ವ್ಯಾಟ್ಸ್ಆ್ಯಪ್ ಚಾನೆಲ್ ಗ್ರೂಪ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ನಾನು ವ್ಯಾಟ್ಸ್ಆ್ಯಪ್ ಕಮ್ಯೂನಿಟಿ ಸೇರಿಕೊಳ್ಳಲು ಉತ್ಸುಕನಾಗಿದ್ದೇನೆ. ಇದು ಜನಸಾಮಾನ್ಯರ ಜೊತೆ ಮತ್ತಷ್ಟು ಹತ್ತಿರವಾಗಿ ಸಂವನಹ ನಡೆಸಲು ಮತ್ತೊಂದು ಹೆಜ್ಜೆಯಾಗಿದೆ. ಇನ್ನು ನಾವೆಲ್ಲ ಸಂಪರ್ಕದಲ್ಲಿರೋಣ. ಇಲ್ಲಿ ಹೊಸ ಸಂಸತ್ ಭವನದ ಚಿತ್ರವನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಮೋದಿ ಮೊದಲ ಸಂದೇಶ ಹಂಚಿಕೊಂಡಿದ್ದಾರೆ.
ಹೊಸ ಸಂಸತ್ ಭವನದಲ್ಲಿ ಮೋದಿ ಮೊದಲ ಭಾಷಣ, ಮಹಿಳಾ ಮೀಸಲಾತಿ ಬಿಲ್ ತರಲು ಬದ್ಧ!
ಮೋದಿ ವ್ಯಾಟ್ಸ್ಆ್ಯಪ್ ಕಮ್ಯೂನಿಟಿ ಗ್ರೂಪ್ ಚಾನೆಲ್ ನೀವು ಸೇರಿಕೊಳ್ಳುವುದು ಹೇಗೆ?
ಜನಸಾಮಾನ್ಯರ ಜೊತೆ ಸಂವಹನ ನಡೆಸಲು ಪ್ರಧಾನಿ ಮೋದಿ ಇದೀಗ ಹೊಸ ವ್ಯಾಟ್ಸ್ಆ್ಯಪ್ ಕಮ್ಯೂನಿಟಿ ಚಾನೆಲ್ ಗ್ರೂಪ್ ತೆರೆದಿದ್ದಾರೆ. ವ್ಯಾಟ್ಸ್ಆ್ಯಪ್ ಬಳಕೆದಾರರು ನರೇಂದ್ರ ಮೋದಿ ವ್ಯಾಟ್ಸ್ಆ್ಯಪ್ ಕಮ್ಯೂನಿಟಿ ಚಾನೆಲ್ ಸೇರಿಕೊಳ್ಳಲು ಸಾಧ್ಯವಿದೆ. ಮೋದಿ ಕಮ್ಯೂನಿಟಿ ಚಾನೆಲ್ ಗ್ರೂಪ್ ಭಾಗವಾಗಲು ಒಂದು ಲಿಂಕ್ ನೀಡಲಾಗಿದೆ. ಈ ಲಿಂಕ್ ಕ್ಲಿಕ್ ಮಾಡಿ ಗ್ರೂಪ್ ಸೇರಿಕೊಳ್ಳಬುಹುದು.
ಮೋದಿ ವ್ಯಾಟ್ಸ್ಆ್ಯಪ್ ಕಮ್ಯೂನಿಟಿ ಚಾನೆಲ್ ಗ್ರೂಪ್ ಸೇರಲು ನೀಡಿರುವ ಲಿಂಕ್ ಇಲ್ಲಿದೆ
https://whatsapp.com/channel/0029Va8IaebCMY0C8oOkQT1F
ಹಳೇ ಸಂಸತ್ ಭವನಕ್ಕೆ ಸಂವಿಧಾನ ಸದನ ಹೆಸರು ಸೂಚಿಸಿದ ಮೋದಿ, ವಿಪಕ್ಷಗಳ ಅನುಮತಿ ಕೋರಿದ ಪ್ರಧಾನಿ!
ಪ್ರಧಾನಿ ಮೋದಿ ಹೊಸ ಹೆಜ್ಜೆ ದೇಶದ ಜನರಲ್ಲಿ ಅತೀವ ಸಂತಸ ತಂದಿದೆ. ಮೋದಿ ಜೊತೆಗೆ ನೇರ ಸಂಪರ್ಕದಲ್ಲಿಲು ಸಾಧ್ಯವಿದೆ. ಇದು ಕಮ್ಯೂನಿಟಿ ಚಾನೆಲ್ ಆಗಿದ್ದು, ಈ ಗ್ರೂಪ್ ಸದಸ್ಯರ ಮಾಹಿತಿ ಗೌಪ್ಯವಾಗಿರಲಿದೆ. ಯಾರು ಈ ಗ್ರೂಪ್ ಫಾಲೋ ಮಾಡುತ್ತಿದ್ದಾರೆ ಅನ್ನೋ ಮಾಹಿತಿಯೂ ಲಭ್ಯವಾಗುವುದಿಲ್ಲ. ಇನ್ನು ಗ್ರೂಪ್ ಆಡ್ಮಿನ್‌ಗೆ ಮಾತ್ರ ಇಲ್ಲಿ ಮಾಹಿತಿ ಫಾರ್ವರ್ಡ್ ಮಾಡಲು ಹಾಗೂ ಫೋಟೋ, ವಿಡಿಯೋಗಳನ್ನು ಕಳುಹಿಸಲು ಅವಕಾಶವಿರುತ್ತದೆ. ಇದು ವ್ಯಾಟ್ಸ್ಆ್ಯಪ್ ಹೊಸ ಫೀಚರ್ ನಿಯಮವಾಗಿದೆ.
ವಾಟ್ಸಾಪ್ ಚಾನೆಲ್ಸ್‌ನಲ್ಲಿ ನರೇಂದ್ರ ಮೋದಿ, ಹೊಸ ಸಂಸತ್ ಭವನದ ಕಚೇರಿ ಫೋಟೋ ಹಂಚಿಕೊಂಡ ನಮೋ, ನಮ್ಮ ನಿರಂತರ ಸಂವಾದಗಳ ಪ್ರಯಾಣದಲ್ಲಿ ಇನ್ನೂ ಒಂದು ಹೆಜ್ಜೆ ಹತ್ತಿರವಾಗಿದ್ದೇನೆ, ಸಂಪರ್ಕದಲ್ಲಿರೋಣ ಎಂದ ಪ್ರಧಾನಿ! pic.twitter.com/OahtGeTXuk
— Asianet Suvarna News (@AsianetNewsSN)