12 ಸಾವಿರ ಕೋಟಿ ರೂ. ನೇರವಾಗಿ ರೈತರ ಖಾತೆಗೆ ಹಾಕಿದ್ದು ಐತಿಹಾಸಿಕ: ಪ್ರಧಾನಿ!

By Suvarna NewsFirst Published Jan 28, 2020, 5:09 PM IST
Highlights

ಜಾಗತಿಕ ಆಲೂಗಡ್ಡೆ ಸಮಾವೇಶ ಉದ್ಘಾಟಿಸಿ ಮಾತನಾಡಿದ ಮೋದಿ| ‘12 ಸಾವಿರ ಕೋಟಿ ರೂ. ನೇರವಾಗಿ ರೈತರ ಖಾತೆಗೆ ಹಾಕಿದ್ದು ಐತಿಹಾಸಿಕ’| ಕೇಂದ್ರ ಸರ್ಕಾರ ಸದಾ ರೈತರ ಬೆನ್ನೆಲುಬಾಗಿ ನಿಲ್ಲಲಿದೆ ಎಂದ ಮೋದಿ| ‘ಜಾಗತಿಕ ಉತ್ಪಾದನಾ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಉತ್ತಮ ಸ್ಥಾನ ’| ‘ಧಾನ್ಯಗಳ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ಮೂರನೇ ಸ್ಥಾನ’| ‘ದೇಶದಲ್ಲಿ ಹಸಿರು ಕ್ರಾಂತಿಯ ಓಟ ಹೀಗೆಯೇ ಮುಂದುವರೆಯಲಿದೆ’|

ನವದೆಹಲಿ(ಜ.28): ಕಿಸಾನ್ ಸಮ್ಮಾನ್ ಯೋಜನೆಯಡಿ ದೇಶದ 6 ಸಾವಿರ ರೈತರ ಖಾತೆಗಳಿಗೆ ತಲಾ 2 ಸಾವಿರ ರೂ.ದಂತೆ ಒಟ್ಟು 12 ಸಾವಿರ ಕೋಟಿ ರೂ.ಗಳನ್ನು ನೇರವಾಗಿ ಹಾಕಿದ್ದು ಐತಿಹಾಸಿಕ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

ಜಾಗತಿಕ ಆಲೂಗಡ್ಡೆ ಸಮಾವೇಶದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, 12 ಸಾವಿರ ಕೋಟಿ ರೂ.ಗಳನ್ನು ಏಕಕಾಲಕ್ಕೆ ನೇರವಾಗಿ ರೈತರ ಖಾತೆಗೆ ಹಾಕುವ ನಿರ್ಧಾರ ಐತಿಹಾಸಿಕ ಎಂದು ಬಣ್ಣಿಸಿದರು.

ರೈತ ದರ್ಶನ ನನ್ನ ಸೌಭಾಗ್ಯ: ಕಿಸಾನ್ ಸಮ್ಮಾನ್ ಹಣ ಬಿಡುಗಡೆ ಮಾಡಿದ ಮೋದಿ!

ಜಾಗತಿಕ ಉತ್ಪಾದನಾ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಉತ್ತಮ ಸ್ಥಾನ ಹೊಂದಿದ್ದು, ಈ ದೇಶದ ರೈತರು ಕಷ್ಟಪಟ್ಟು ದುಡಿಯುತ್ತಿರುವ ಪರಿಣಾಮವಿದು ಎಂದು ಮೋದಿ ಹೇಳಿದರು.

Addressing the Global Potato Conclave. https://t.co/GIuavRjLtA

— Narendra Modi (@narendramodi)

ಧಾನ್ಯಗಳ ಉತ್ಪಾದನೆಯಲ್ಲಿ ಭಾರತ ಇಡೀ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದ್ದು, ಇತರ ಆಹಾರ ಪದಾರ್ಥಗಳ ಉತ್ಪನ್ನದಲ್ಲೂ ಗಮನಾರ್ಹ ಸಾಧನೆ ಮಾಡಿದೆ ಎಂದು ಈ ವೇಳೆ ಪ್ರಧಾನಿ ಮೋದಿ ನುಡಿದರು.

ರೈತರ ಖಾತೆಗೆ 12 ಸಾವಿರ ಕೋಟಿ ವರ್ಗಾವಣೆ

ದೇಶದ ರೈತರ ಬೆನ್ನೆಲುಬಾಗಿ ಕೇಂದ್ರ ಸರ್ಕಾರ ಸದಾ ನಿಲ್ಲಲಿದ್ದು, ಹಸಿರು ಕ್ರಾಂತಿಯ ಓಟ ಹೀಗೆಯೇ ಮುಂದುವರೆಯಲಿದೆ ಎಂದು ಮೋದಿ ಈ ವೇಳೆ ಹಾರೈಸಿದರು.

click me!