
ನವದೆಹಲಿ(ಜ.28): ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಹಾಗೂ ದೇಶದ ಒಳಿತಿಗಾಗಿ ಸಿಎಎ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಧಾನ ಮಂತ್ರಿಗಳ ವಾರ್ಷಿಕ ಎನ್‌ಸಿಸಿ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ನೆರೆಯ ರಾಷ್ಟ್ರದ ನಮ್ಮ ಸಹೋದರರು ನಮ್ಮನ್ನು ಕೂಡಿಕೊಳ್ಳಲು ಈ ಕಾನೂನು ನೆರವಾಗಲಿದೆ ಎಂದು ಹೇಳಿದರು.
ದೇಶವನ್ನು ಬಾಧಿಸುತ್ತಿರುವ ದಶಕಗಳಷ್ಟು ಹಳೆಯದಾದ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಪ್ರಯತ್ನಿಸುತ್ತಿದ್ದು, ಸಿಎಎ ಜಾರಿ ಭಾರತದ ಕರ್ತವ್ಯ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಮುಸ್ಲಿಮರಿಗೆ ತೊಂದರೆ ಆದರೆ ಬಿಜೆಪಿ ಹೋರಾಟ: ರಕ್ಷಣಾ ಸಚಿವ ರಾಜನಾಥ್ ಅಭಯ!
ಇದೇ ವೇಳೆ ದೇಶದ ಏಕತೆ ಹಾಗೂ ಅಖಂಡತೆ ಕಾಪಾಡುವಲ್ಲಿ ಎನ್‌ಸಿಸಿ ಪಾತ್ರ ಅತ್ಯಂತ ಮುಖ್ಯ ಎಂದ ಪ್ರಧಾನಿ, ನಮ್ಮ ಗಡಿಗಳು ಎಂದೆಂದಿಗೂ ಸುರಕ್ಷಿತ ಎಂಬುದು ಈ ಯುವ ಸಮುದಾಯವನ್ನು ನೋಡಿದರೆ ಯಾರಿಗಾದರೂ ತಿಳಿಯುತ್ತದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ನೆರೆಯ ಪಾಕಿಸ್ತಾನ ದೇಶವು ಮೂರು ಯುದ್ಧಗಳಲ್ಲಿ ಸೋತಿದೆ. ಆದರೆ ಭಾರತದ ವಿರುದ್ಧ ಶೀತಲ ಸಮರವನ್ನು ಮುಂದುವರೆಸಿದೆ ಎಂದ ಪ್ರಧಾನಿ, ಪಾಕಿಸ್ತಾನದ ಈ ಕುತಂತ್ರಕ್ಕೆ ಸರಿಯಾದ ಪ್ರತ್ಯುತ್ತರ ನೀಡಲು ನಾವು ಸಮರ್ಥರು ಎಂದು ಹೇಳಿದರು.
ಈ ವೇಳೆ ದೇಶದ ಮೂಲೆ ಮೂಲೆಗಳಿಂದ ಬಂದಿದ್ದ ಎನ್‌ಸಿಸಿ ಕೆಡೆಟ್‌ಗಳು ಭರ್ಜರಿ ಪರೇಡ್ ನಡೆಸಿದರು. ಪ್ರತಿಭಾನ್ವಿತ ಕೆಡೆಟ್‌ಳಿಗೆ ಪ್ರಧಾನಿ ಮೋದಿ ಪ್ರಶಸ್ತಿ ಪದಕ ವಿತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ