PM Modi: ಇಂದು ಮೋದಿ ಮಂತ್ರಿಮಂಡಲ ಮಹತ್ವ ಸಭೆ; ಸಂಪುಟ ಪುನಾರಚನೆ ಆಗುತ್ತಾ?

Kannadaprabha News   | Kannada Prabha
Published : May 21, 2026, 05:47 AM IST
PM Modi Important meeting cabinet today Will the volume be restructured

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಮಂತ್ರಿಮಂಡಲ ಸಭೆ ನಡೆಯಲಿದ್ದು, ಇದರಲ್ಲಿ ಸಚಿವಾಲಯಗಳ ಕಾರ್ಯವೈಖರಿ, ಯೋಜನೆಗಳ ಅನುಷ್ಠಾನ, ಮುಂದಿನ ಸುಧಾರಣಾ ಕ್ರಮಗಳ ಬಗ್ಗೆ ಚರ್ಚೆಯಾಗಲಿದೆ. ಸಂಪುಟ ಪುನಾರಚನೆಯ ಚರ್ಚೆಗಳ ನಡುವೆಯೇ ನಡೆಯುತ್ತಿರುವ ಈ ಸಭೆಯಲ್ಲಿ, ಯಾವ ವಿಷಯ ಪ್ರಸ್ತಾಪ ಆಗಲಿವೆ ತಿಳಿಯಿರಿ.

ಪುನಾರಚನೆ ಗುಸುಗುಗು ಏಕೆ?

  • ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಈಗಾಗಲೇ ಪೂರ್ಣ
  • ಹೀಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದ ಸಂಘಟನೆಯಲ್ಲಿ ಬದಲಾವಣೆಗೆ ಮುಹೂರ್ತ
  • ಜೊತೆಗೆ 2027ರ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಬದಲಾವಣೆ ಸಂಭವ
  • ಕೆಲ ಸಚಿವರು ಪಕ್ಷ ಸಂಘಟನೆಗೆ, ಹೊಸ, ಅನುಭವಿಗಳಿಗೆ ಸಂಪುಟದಲ್ಲಿ ಅವಕಾಶ ನಿರೀಕ್ಷೆ

ಪಿಟಿಐ ನವದೆಹಲಿ (ಮೇ.21): ದೇಶದಲ್ಲಿ ಪಂಚರಾಜ್ಯ ಚುನಾವಣೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಪಂಚರಾಷ್ಟ್ರ ಭೇಟಿ ಸಂಪನ್ನವಾದ ಬೆನ್ನಲ್ಲೇ ಗುರುವಾರ ಅವರ ನೇತೃತ್ವದಲ್ಲಿ ಮಹತ್ವದ ಮಂತ್ರಿಮಂಡಲ ಸಭೆ ನಡೆಯಲಿದೆ. ಇದರಲ್ಲಿ ಎಲ್ಲಾ ಸಂಪುಟ ಸಚಿವರು, ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರು ಮತ್ತು ಇತರೆ ರಾಜ್ಯ ಸಚಿವರು ಭಾಗಿಯಾಗಲಿದ್ದಾರೆ.

ಇದು ಈ ವರ್ಷದ ಇಂಥ ಮೊದಲ ಸಭೆಯಾಗಿದೆ. ಸಂಪುಟ ಪುನಾರಚನೆಯ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಏರ್ಪಡಿಸಲಾಗಿರುವುದು ಗಮನಾರ್ಹ.

ಏನೇನು ಚರ್ಚೆ?:

ಮೂಲಗಳ ಪ್ರಕಾರ, ಈ ಸಭೆಯಲ್ಲಿ ಎಲ್ಲಾ ಸಚಿವಾಲಯಗಳ ಕಾರ್ಯನಿರ್ವಹಣೆ, ತೆಗೆದುಕೊಳ್ಳಲಾಗಿರುವ ಪ್ರಮುಖ ನಿರ್ಧಾರಗಳು, ಅದರ ಫಲಿತಾಂಶ, ಮುಂದಿನ ಯೋಜನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆಯಾಗಲಿದೆ. ಜತೆಗೆ, ಸರ್ಕಾರದ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳು, ಗರಿಷ್ಠ ಯಶಸ್ಸು ಲಭಿಸುವಂತೆ ಅವುಗಳ ಅನುಷ್ಠಾನದ ಬಗ್ಗೆಯೂ ವಿಮರ್ಶೆಗಳು ನಡೆಯುವ ಸಾಧ್ಯತೆಯಿದೆ.

ಯುದ್ಧದ ಬಗ್ಗೆಯೂ ಪ್ರಸ್ತಾಪ:

ಸದ್ಯ ಸ್ಥಗಿತವಾಗಿದ್ದರೂ ಆರ್ಥಿಕ ಅಸ್ಥಿರತೆಗೆ ಕಾರಣವಾಗಿರುವ ಮಧ್ಯಪ್ರಾಚ್ಯ ಸಂಘರ್ಷವೂ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗಲಿದ್ದು, ಜನರಿಗೆ ಹೆಚ್ಚು ಸಮಸ್ಯೆಯಾಗದಂತೆ ಪರಿಸ್ಥಿತಿಯನ್ನು ನಿಭಾಯಿಸುವ ರೀತಿಯ ಬಗ್ಗೆ ಪ್ರಧಾನಿ ಮೋದಿಯವರು ಸಚಿವಾಲಯಗಳು ಮತ್ತು ಇಲಾಖೆಗಳಿಗೆ ನಿರ್ದೇಶನ ಕೊಡುವ ನಿರೀಕ್ಷೆಯಿದ್ದು, ಇಂಧನ, ಕೃಷಿ, ರಸಗೊಬ್ಬರ, ವಿಮಾನಯಾನ, ಹಡಗುಗಳ ಸಂಚಾರ, ಸರಕು ಸಾಗಣೆಯಂತಹ ಪ್ರಮುಖ ಕ್ಷೇತ್ರಗಳಿಗೆ ಒತ್ತು ಕೊಡುವ ಸಾಧ್ಯತೆಯಿದೆ.

ಸುಧಾರಣಾ ಎಕ್ಸ್‌ಪ್ರೆಸ್‌:

ತಮ್ಮ ಸರ್ಕಾರದ ‘ಸುಧಾರಣಾ ಎಕ್ಸ್‌ಪ್ರೆಸ್’ ಕ್ರಮದಿಂದಾಗಿ ಜನಸಾಮಾನ್ಯರಿಗೆ ಪ್ರಯೋಜನವಾಗಿದೆ ಎಂದು ಈ ಹಿಂದಿನ ಸಂಪುಟ ಸಭೆಗಳಲ್ಲಿ ಪ್ರಸ್ತಾಪಿಸಿದ್ದ ಪ್ರಧಾನಿ ಮೋದಿ, ಮುಂದಿನ 10 ವರ್ಷಗಳ ಸುಧಾರಣಾ ಆದ್ಯತೆಗಳನ್ನು ವಿವರಿಸಿದ್ದರು. ಇದರ ಜಾರಿ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ ಮೊದಲ ಪೆಟ್ರೋಲ್ ಬಂಕ್ ಎಲ್ಲಿ, ಯಾವಾಗ ಆರಂಭವಾಯ್ತು? ಬೆಂಗಳೂರಿನಿಂದ ಮುಂಬೈಗೆ ಹೋಗಲು 3 ರೂ. ಪೆಟ್ರೋಲ್ ಸಾಕು!
Modi Meloni: ಇಂಟರ್‌ನೆಟ್‌ ಟ್ರೆಂಡಿಂಗ್ ಮೋದಿ-ಮೆಲೋನಿ 10 ವೈರಲ್ ಫೋಟೋಗಳು!