* ನ್ಯೂ ಅರ್ಬನ್ ಇಂಡಿಯಾ ಕಾನ್ಕ್ಲೆವ್‌ನಲ್ಲಿ ಪಾಲ್ಗೊಂಡ ಮೋದಿ
* 75 ಸಾವಿರ ವಸತಿರಹಿತರಿಗೆ ಕೀಲಿ ಕೈ ಹಸ್ತಾಂತರಿಸಿದ ಮೋದಿ
* ಕಾರ್ಯಕ್ರಮದ ವೆಳೆ ಫಲಾನುಭವಿಗಳೊಂದಿಗೆ ಮೋದಿ ಸಂವಾದ
ಲಕ್ನೋ(ಅ.05): ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಮಂಗಳವಾರ ನ್ಯೂ ಅರ್ಬನ್ ಇಂಡಿಯಾ ಕಾನ್ಕ್ಲೆವ್‌ನಲ್ಲಿ ಪಾಲ್ಗೊಳ್ಳಲು ಲಕ್ನೋಗೆ ಆಗಮಿಸಿದ್ದರು. ಅವರು ಇಲ್ಲಿನ ಇಂದಿರಾ ಗಾಂಧಿ ಪ್ರತಿಷ್ಠಾನದಲ್ಲಿ ಮೂರು ದಿನಗಳ ಸಮಾವೇಶಕ್ಕೆ ಚಾಲನೆ ನೀಡಿದರು. ಇದಲ್ಲದೇ, ಆವಾಸ್ ಯೋಜನೆ(PM Awas Yojna) ಅಡಿಯಲ್ಲಿ 75 ಸಾವಿರ ಫಲಾನುಭವಿಗಳಿಗೆ ಮನೆಗಳ ಕೀಲಿಗಳನ್ನು ಹಸ್ತಾಂತರಿಸಲಾಯಿತು. ಲಕ್ನೋ, ಕಾನ್ಪುರ, ಗೋರಖ್‌ಪುರ್, ಝಾನ್ಸಿ, ಪ್ರಯಾಗರಾಜ್, ಗಾಜಿಯಾಬಾದ್ ಮತ್ತು ವಾರಣಾಸಿ ಜಿಲ್ಲೆಗಳಿಗಾಗಿ 75 ಸ್ಮಾರ್ಟ್ ಎಲೆಕ್ಟ್ರಿಕ್ ಬಸ್ಸುಗಳಿಗೆ ಪ್ರಧಾನಿ ಹಸಿರು ನಿಶಾನೆ ನೀಡಿದರು. ಈ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath Singh) ಕೂಡ ಇದ್ದರು.
ಕಾರ್ಯಕ್ರಮದಲ್ಲಿ, 75 ಸಾವಿರ ವಸತಿರಹಿತರಿಗೆ ಮೋದಿ ಮನೆಗಳ ಕೀಲಿಗಳನ್ನು ಹಸ್ತಾಂತರಿಸಿದರು. ಇವರೆಲ್ಲರೂ ಯುಪಿ ವಿವಿಧ ಜಿಲ್ಲೆಯವರಾಗಿದ್ದು, ಇವರೆಲ್ಲರೂ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇನ್ನು ಕೆಲ ಫಲಾನುಭವಿಗಳೊಂದಿಗೆ ಮಾತನಾಡಿದ ಮೋದಿ, ಈ ದೀಪಾವಳಿಯನ್ನು ಹೊಸ ಮನೆಯಲ್ಲಿ ಆಚರಿಸಲಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮನೆ ಕೊಟ್ಟಾಯ್ತು, ಅತಿಥಿಗಳು ಬರುತ್ತಿರುತ್ತಾರೆ.... ನೀವೂ ಬನ್ನಿ ಎಂದ ಮಹಿಳೆ
ವಸತಿ ಯೋಜನೆ ಫಲಾನುಭವಿಯೊಂದಿಗೆ ಮಾತನಾಡಿದ ಮೋದಿ ಹೊಸ ಮನೆ ಸಿಕ್ಕಿದೆ ಇನ್ನು ಸಂಬಂಧಿಕರು ಕೂಡ ಹೆಚ್ಚಾಗುತ್ತಾರೆ, ವೆಚ್ಚಗಳು ಕೂಡ ಹೆಚ್ಚಾಗುತ್ತವೆ ಎಂದು ಹೇಳಿದ್ದಾರೆ. ಇದಕ್ಕೆ ಫಲಾನುಭವಿಯೊಬ್ಬರು ಮುಗುಳ್ನಕ್ಕು ಹೌದು ಈ ಮೊದಲಿಗಿಂತ ಸಂಬಂಧಿಕರು ಹೆಚ್ಚು ಬರುತ್ತಾರೆ ಎಂದು ಉತ್ತರಿಸಿದ್ದಾರೆ. ಈ ವೇಳೆ ಕೊಂಚ ತಮಾಷೆ ಮಾಡಿದ ಮೋದಿ ಖರ್ಚು ವೆಚ್ಚ ಹೆಚ್ಚಾಗುತ್ತದೆ. ಅವರು ಮನೆ ಕೊಟ್ಟರು ಹೀಗೆ ಬಡವರಿಗೆ ಖರ್ಚು ವೆಚ್ಚವೂ ಹೆಚ್ಚಾಗುತ್ತದೆ ಎಂದು ಆರೋಪಿಸಬಹುದು ಎಂದು ನಕ್ಕಿದ್ದಾರೆ.
ಇದೇ ವೇಳಖೆ ಮತ್ತೊಬ್ಬ ಫಲಾನುಭವಿಯೊಂದಿಗೆ ಮಾತನಾಡಿದ ಮೋದಿ ಉಜ್ವಲ ಸರ್ಕಾರಿ ಯೋಜನೆಯಡಿ ಗ್ಯಾಸ್ ಸಿಕ್ಕಿದೆಯಲ್ಲವೇ? ಈಗ ಗ್ಯಾಸ್ ಸ್ಟೌನಲ್ಲಿ ಏನು ಅಡುಗೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಫಲಾನುಭವಿ ತಾನು ಆಲೂಗಡ್ಡೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಉತ್ತರಕ್ಕೆ ಮುಗುಳ್ನಕ್ಕ ಪಿಎಂ ಪರ್ವಾಗಿಲ್ಲ ಹೇಳಿ, ನಾನು ತಿನ್ನಲು ಬರುವುದಿಲ್ಲ' ಎಂದಿದ್ದಾರೆ. ಇದನ್ನು ಕೇಳಿದ ಫಲಾನುಭವಿ ನೀವು ತಪ್ಪದೇ ಮನೆಗೆ ಬರಬೇಕು ಎಂದು ಆಹ್ವಾನಿಸಿದ್ದಾರೆ.
ಯೋಗಿ ಮಾತು:
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 'ಕಳೆದ ಕೆಲವು ವರ್ಷಗಳಲ್ಲಿ ಉತ್ತರ ಪ್ರದೇಶ ಸಾಧನೆಗಳನ್ನು ಮಾಡಿದೆ. 11 ಕೋಟಿ ಡೋಸ್ ಕರೋನಾ ಲಸಿಕೆಯನ್ನು ನೀಡಲಾಗಿದೆ. 2017 ಕ್ಕಿಂತ ಮೊದಲು, ಉತ್ತರ ಪ್ರದೇಶದಲ್ಲಿ ಒಟ್ಟು 654 ಮುನ್ಸಿಪಲ್ ಸಂಸ್ಥೆಗಳಿದ್ದವು, ಇಂದು ಅವುಗಳ ಸಂಖ್ಯೆ 734 ಕ್ಕೆ ಏರಿದೆ. ಅಭಿವೃದ್ಧಿ ವೇಗ ಬೆಳೆಯುತ್ತಲೇ ಇದೆ. ನಗರ ಅಭಿವೃದ್ಧಿಯ ಹೊಸ ಆಯಾಮಗಳು ಸಮಾವೇಶದಲ್ಲಿ ನಮ್ಮ ಮುಂದೆ ಬರಲಿವೆ ಮತ್ತು ಇಡೀ ದೇಶದ ಪರಿವರ್ತನೆಗೆ ಕೊಡುಗೆ ನೀಡುತ್ತವೆ ಎಂದು ಅವರು ಹೇಳಿದ್ದಾರೆ..