21 ವರ್ಷಗಳ ಹಿಂದೆ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ರಾಜ್ಯದ ಬಾಲಚಾಡಿಯಲ್ಲಿರುವ ಸೈನಿಕ ಶಾಲೆಗೆ ಭೇಟಿ ನೀಡಿ, ಇಬ್ಬರು ವಿದ್ಯಾರ್ಥಿಗಳಿಗೆ ಪಾರಿತೋಷಕ ನೀಡಿದ್ದರು. ಅಚ್ಚರಿ ವಿಷಯವೆಂದರೆ ಅಂದು ಸೈನಿಕ ಶಾಲೆಯಲ್ಲಿ ಓದಿದ್ದ ಅದೇ ವಿದ್ಯಾರ್ಥಿ ಅಂದು ಮೋದಿ ತನಗೆ ನೀಡಿದ ಪಾರಿತೋಷಕದೊಂದಿಗೆ ಮೋದಿ ಅವರನ್ನು ಭೇಟಿಯಾಗಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೋಮವಾರ ಕಾರ್ಗಿಲ್‌ಗೆ (Kargil) ಭೇಟಿ ನೀಡಿದ ಸಮಯ ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಯಿತು. 21 ವರ್ಷಗಳ ಹಿಂದೆ ಅಂದಿನ ಗುಜರಾತ್ ಮುಖ್ಯಮಂತ್ರಿ (Gujarat Chief Minister) ನರೇಂದ್ರ ಮೋದಿ, ರಾಜ್ಯದ ಬಾಲಚಾಡಿಯಲ್ಲಿರುವ ಸೈನಿಕ ಶಾಲೆಗೆ (Army School) ಭೇಟಿ ನೀಡಿ, ಇಬ್ಬರು ವಿದ್ಯಾರ್ಥಿಗಳಿಗೆ ಪಾರಿತೋಷಕ ನೀಡಿದ್ದರು. ಅಚ್ಚರಿ ವಿಷಯವೆಂದರೆ ಅಂದು ಸೈನಿಕ ಶಾಲೆಯಲ್ಲಿ ಓದಿದ್ದ ಅದೇ ವಿದ್ಯಾರ್ಥಿ ಅಂದು ಮೋದಿ ತನಗೆ ನೀಡಿದ ಪಾರಿತೋಷಕದೊಂದಿಗೆ ಪ್ರಧಾನಿ ಮೋದಿ ಅವರನ್ನು ಕಾರ್ಗಿಲ್‌ನಲ್ಲಿ ಎದುರಾದ. ಅಂದು ಮೋದಿಯಿಂದ ಪಾರಿತೋಷಕ ಸ್ವೀಕರಿಸಿದ ಬಾಲಕ ಇಂದು ಸೇನೆಯಲ್ಲಿ ಮೇಜರ್ (Army Major) ಹುದ್ದೆಗೆ ಏರಿದ್ದಾನೆ. 21 ವರ್ಷಗಳ ಬಳಿಕ ಹೀಗೆ ಮೋದಿಯನ್ನು ಭೇಟಿ ಮಾಡಿದ ಮೇಜರ್ ಅಮಿತ್ (Major Amit) ಇದೊಂದು ಭಾವನಾತ್ಮಕ ಪುರ್ನಮಿಲನ ಎಂದು ಸಂಭ್ರಮಿಸಿದ್ದಾರೆ.
ಯೋಧರೊಂದಿಗೆ ಮೋದಿ ದೇಶಭಕ್ತಿ ಗಾಯನ
ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ವೇಳೆ ಕಾರ್ಗಿಲ್‌ನ ಯೋಧರು ದೇಶಭಕ್ತಿ ಗಾಯನ ಮೂಲಕ ಸಂಭ್ರಮಿಸಿದ್ದಾರೆ. ಮೋದಿ ಸಮ್ಮುಖದಲ್ಲೇ ಯೋಧರ ತಂಡವೊಂದು ‘ವಂದೇ ಮಾತರಂ’, ‘ಮಾ ತುಜೇ ಸಲಾಂ’ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಗಮನ ಸೆಳೆಯಿತು. ಈ ವೇಳೆ ಪ್ರಧಾನಿ ಮೋದಿ ಕೂಡಾ ಚಪ್ಪಾಳೆ ತಟ್ಟುತ್ತಾ, ಹಾಡಿಗೆ ಧ್ವನಿಗೂಡಿಸುತ್ತಾ ಯೋಧರ ಉತ್ಸಾಹವನ್ನು ಹೆಚ್ಚಿಸಿದರು. ಇದಕ್ಕೂ ಮುನ್ನ ಕಾರ್ಗಿಲ್ ಯುದ್ಧದಲ್ಲಿ ಮಣಿದ ಸೈನಿಕರ ಸ್ಮಾರಕಕ್ಕೆ ಮೋದಿ ಪುಷ್ಪ ನಮನ ಸಲ್ಲಿಸಿದರು.
ಇದನ್ನು ಓದಿ: ತಂಟೆಗೆ ಬಂದರೆ ಸುಮ್ಮನಿರಲ್ಲ; ಪಾಕ್, ಚೀನಾಗೆ Modi ಎಚ್ಚರಿಕೆ..!
ದೇಶ ರಕ್ಷಕರೊಂದಿಗೆ ಮೋದಿ 9 ದೀಪಾವಳಿ
ದೀಪಾವಳಿಯನ್ನು ಗಡಿಕಾಯುವ ಯೋಧರ ಜೊತೆ ಆಚರಿಸುವ ಸಂಪ್ರದಾಯವನ್ನು ಪ್ರಧಾನಿ ಮೋದಿ ಈ ವರ್ಷವೂ ಮುಂದುವರೆಸಿದ್ದು, ಪಾಕ್‌ನೊಂದಿಗೆ ಗಡಿ ಹೊಂದಿರುವ ಕಾರ್ಗಿಲ್‌ನಲ್ಲಿ ಈ ಬಾರಿ ಹಬ್ಬ ಆಚರಿಸಿದ್ದಾರೆ. ಕಳೆದ 9 ವರ್ಷಗಳಲ್ಲಿ ಮೋದಿ ಎಲ್ಲೆಲ್ಲಿ ದೀಪಾವಳಿ ಆಚರಿಸಿದರು ಎಂಬ ಮಾಹಿತಿ ಇಲ್ಲಿದೆ.
2014: ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೆಲ ದಿನಗಳಲ್ಲೇ ಭಾರತ-ಚೀನಾ ಗಡಿಯಲ್ಲಿರುವ ದೇಶದ ಅತ್ಯಂತ ಎತ್ತರದ ಯುದ್ಧಭೂಮಿ ಸಿಯಾಚಿನ್‌ಗೆ ತೆರಳಿ ಅಲ್ಲಿ ಯೋಧರೊಂದಿಗೆ ದೀಪಾವಳಿ ಆಚರಣೆ.
2015: ಪಂಜಾಬ್ ಗಡಿಯಲ್ಲಿರುವ ಯೋಧರೊಂದಿಗೆ ಹಬ್ಬ ಆಚರಿಸಿದರು. ಈ ವೇಳೆ ಮೂರು ಯುದ್ಧ ಸ್ಮಾರಕಗಳಿಗೂ ಭೇಟಿ ನೀಡಿದರು. ಯೋಧರೊಂದಿಗೆ ಸಂವಾದ ನಡೆಸಿದರು.
2016: ಹಿಮಾಚಲ ಪ್ರದೇಶದಲ್ಲಿರುವ ಲಾಹೌಲ್-ಸ್ಪಿತಿಯ ಪೋಸ್ಟ್‌ನಲ್ಲಿರುವ ಭಾರತ-ಟಿಬೆಟ್ ಗಡಿ ಪೋಲಿಸ್ ಸಿಬ್ಬಂದಿ ಜತೆ ದೀಪಾವಳಿ.
2017: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿರುವ ಗುಲ್ರೇಜ್ ಕಣವೆಯಲ್ಲಿರುವ ಯೋಧರೊಂದಿಗೆ ದೀಪಾವಳಿ.
2018: ಉತ್ತರಾಖಂಡದ ಹಾರ್ಸಿಲ್‌ನಲ್ಲಿ ಸೇನೆಯಲ್ಲಿರುವ ಜವಾನರು ಹಾಗೂ ಇಂಡೋ-ಟಿಬೆಟ್ ಗಡಿ ಪೊಲೀಸರು (ಐಟಿಬಿಪಿ) ಜತೆ ಹಬ್ಬ ಆಚರಣೆ.
2019: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿಯಿರುವ ರಜೌರಿಯಲ್ಲಿ ಯೋಧರು ಮತ್ತು ಪಠಾಣಕೋಟ್ ವಾಯುನೆಲೆಯಲ್ಲಿರುವ ವಾಯುಪಡೆ ಯೋಧರೊಂದಿಗೆ ಹಬ್ಬ.
2020: ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಗಡಿ ಭದ್ರತಾ ಪಡೆಯ ಯೋಧರ ಜತೆ ಸಂಭ್ರಮದ ದೀಪಾವಳಿ
2021: ಜಮ್ಮುವಿನ ನೌಶೇರಾದಲ್ಲಿ ಭಾರತೀಯ ಸೇನಾಪಡೆಯ ಯೋಧರೊಂದಿಗೆ ಹಬ್ಬ ಆಚರಣೆ.
2022: ಕಾರ್ಗಿಲ್‌ನಲ್ಲಿ ಮೈಕೊರೆಯುವ ಚಳಿಯಲ್ಲೂ ಯೋಧರ ಜೊತೆ ಮಾತುಕತೆ ಹಬ್ಬ, ಸಿಹಿ
ಇದನ್ನೂ ಓದಿ: ಚೀನಾ ಗಡಿಯ ಕಾರ್ಮಿಕರ ಶೆಡ್‌ನಲ್ಲಿ ರಾತ್ರಿ ಕಳೆದ Modi: ಸರಳತೆ ಮೆರೆದ ಪ್ರಧಾನಿ