British PM Rishi Sunak: ಬ್ರಿಟನ್‌ ಪ್ರಧಾನಿ ಆದ ಅಳಿಯ, ಹೆಮ್ಮೆಯ ವಿಷಯ ಎಂದ ನಾರಾಯಣ ಮೂರ್ತಿ!

Published : Oct 25, 2022, 10:45 AM ISTUpdated : Oct 25, 2022, 11:00 AM IST
British PM Rishi Sunak: ಬ್ರಿಟನ್‌ ಪ್ರಧಾನಿ ಆದ ಅಳಿಯ, ಹೆಮ್ಮೆಯ ವಿಷಯ ಎಂದ ನಾರಾಯಣ ಮೂರ್ತಿ!

ಸಾರಾಂಶ

42 ವರ್ಷದ ಸುನಕ್ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ಭಾರತೀಯ ಎನಿಸಿಕೊಳ್ಳಲಿದ್ದಾರೆ. ಅಳಿಯ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ಬಳಿಕ ಪ್ರತಿಕ್ರಿಯೆ ನೀಡಿರುವ ನಾರಾಯಣ ಮೂರ್ತಿ, 'ಅಭಿನಂದನೆಗಳು ರಿಷಿ, ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ ಮತ್ತು ನೀವು  ಯಶಸ್ಸನ್ನು ನಾವು ಬಯಸುತ್ತೇವೆ' ಎಂದು ಹೇಳಿದ್ದಾರೆ.

ಬೆಂಗಳೂರು (ಅ. 25): ಭಾರತೀಯ ಸಂಜಾತ ರಿಷಿ ಸುನಕ್‌ ಬ್ರಿಟನ್‌ನ ಹೊಸ ಪ್ರಧಾನಿಯಾಗಿ ಘೋಷಣೆಯಾಗಿದ್ದಾರೆ. ಇದರ ಬೆನ್ನಲ್ಲಿಯೇ ಅವರ ಮಾವ ಹಾಗೂ ಇನ್ಫೋಸಿಸ್‌ ಕಂಪನಿಯ ಸಂಸ್ಥಾಪಕ ನಾರಾಯಣ ಮೂರ್ತಿ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ, 'ಅವರ ಬಗ್ಗೆ ನನಗೆ ಹೆಮ್ಮೆ ಎನಿಸುತ್ತಿದೆ. ಅವರಿಗೆ ಎಲ್ಲಾ ರೀತಿಯ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ' ಎಂದು ಹೇಳಿದ್ದಾರೆ.  42 ವರ್ಷದ ರಿಷಿ ಸುನಕ್‌ ಅವರನ್ನು ಭಾನುವಾರ ಕನ್ಸರ್ವೇಟಿವ್‌ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ನಾಮನಿರ್ದೇಶನ ಮಾಡಲಾಗಿದೆ. ಬ್ರಿಟನ್‌ ದೇಶದ ಪ್ರಧಾನಮಂತ್ರಿ ಪದವಿಗೇರಿದ ಮೊದಲ ಭಾರತೀಯ ಸಂಜಾತ ವ್ಯಕ್ತಿ ಎನ್ನುವ ಹಿರಿಮೆ ಇವರದಾಗಿದೆ. ರಿಷಿ ಸುನಕ್‌ ಅವು ಪ್ರಧಾನಿ ಪದವಿಗೇರಿದ ಬಳಿಕ ನಾರಾಯಣ ಮೂರ್ತಿ ಅವರ ಪ್ರತಿಕ್ರಿಯೆಯನ್ನು ಪಿಟಿಐ ಈ ಮೇಲ್‌ ಮೂಲಕ ಪಡೆದುಕೊಂಡಿದೆ. 'ಅಭಿನಂದನೆಗಳು ರಿಷಿ, ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತಿದೆ. ನಿಮಗೆ ಇನ್ನಷ್ಟು ಯಶಸ್ಸು ಸಿಗಲಿ' ಎಂದು ನಾರಾಯಣ ಮೂರ್ತಿ ಅವರು ಈಮೇಲ್‌ನಲ್ಲಿ ಬರೆದಿದ್ದಾರೆ. ರಿಷಿ ಸುನಕ್‌ ಅವರ ತಂದೆ ವೈದ್ಯರಾಗಿದ್ದರೆ, ತಾಯಿ ಫಾರ್ಮಾಸಿಸ್ಟ್‌ ಆಗಿದ್ದರು. ಇಂಗ್ಲೆಂಡ್‌ನ ಪ್ರಸಿದ್ಧ ಶಾಲೆಗಳಾಗಿರುವ ವಿಂಚೆಸ್ಟರ್‌ ಮತ್ತು ಆಕ್ಸ್‌ಫರ್ಡ್‌ನಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತಿದ್ದಾರೆ. ಆ ಬಳಿಕ ಗೋಲ್ಡ್‌ ಮನ್‌ ಸ್ಯಾಕ್ಸ್‌ ಗ್ರೂಪ್‌ನಲ್ಲಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದರು.

2009ರಲ್ಲಿ ವಿವಾಹ: ರಿಷಿ ಸುನಕ್‌ 2009ರಲ್ಲಿ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿಯ ವಿವಾಹವಾಗಿದ್ದರು. ಇವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್‌ಅಲ್ಲಿ ಎಂಬಿಎ ಮಾಡುವ ವೇಳೆ ರಿಷಿ ಸುನಕ್‌ ಹಾಗೂ ಅಕ್ಷತಾ ಮೂರ್ತಿ ಭೇಟಿಯಾಗಿದ್ದರು. ಭಾರತದ ಅಗ್ರ ಸಾಫ್ಟ್‌ವೇರ್‌ ಕಂಪನಿ ಇನ್ಫೋಸಿಸ್‌ನ (Infosys Narayan Murthy) ಸಹಸಂಸ್ಥಾಪಕರಲ್ಲಿ ಒಬ್ಬರಾದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಪುತ್ರಿ ಅಕ್ಷತಾ. 2009ರಲ್ಲಿ ಇವರಿಬ್ಬರ ವಿವಾಹ ನೆರವೇರಿತ್ತು. ಕೃಷ್ಣಾ ಹಾಗೂ ಅನುಷ್ಕಾ ಹೆಸರಿನ ಇಬ್ಬರು ಪುತ್ರಿಯರಿದ್ದಾರೆ.

ಲಿಜ್‌ ಟ್ರಸ್‌ ಸ್ಥಾನಕ್ಕೆ ಸುನಕ್‌: ಬ್ರಿಟನ್ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುವ ಪ್ರಯತ್ನದಲ್ಲಿರುವ ನಡುವೆಯೇ, ರಿಷಿ ಸುನಕ್ ಶೀಘ್ರದಲ್ಲೇ ಬ್ರಿಟಿಷ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕೋವಿಡ್‌ (Post Covid) ಕಾಲಾನಂತರ ಬ್ರಿಟನ್‌ನ ಆರ್ಥಿಕತೆ ಇನ್ನಷ್ಟು ಹದಗೆಟ್ಟಿದ್ದು, ಈ ಅವಧಿಯಲ್ಲಿ ಬೊರಿಸ್‌ ಜಾನ್ಸನ್‌ ಹಾಗೂ ಲಿಜ್‌ ಟ್ರಸ್‌ (Liz Truss) ಕೂಡ ಪ್ರಧಾನಿ ಹುದ್ದೆ ತೊರೆದಿದ್ದಾರೆ. ಆರ್ಥಿಕ ಬಿಕ್ಕಟ್ಟಿನ ಕಾರಣದಿಂದಾಗಿ ಕೇವಲ 45 ದಿನಗಳಲ್ಲಿ ಲಿಜ್ ಟ್ರಸ್ ಪ್ರಧಾನಿ ಹುದ್ದೆ ತೊರೆಯಬೇಕಾಯಿತು. ಅವರ ಸ್ಥಾನಕ್ಕೀಗ ಸುನಕ್ ಆಯ್ಕೆಯಾಗಿದ್ದಾರೆ.

ಬ್ರಿಟನ್‌ ಏಕತೆ, ಸ್ಥಿರತೆ ನನ್ನ ಆದ್ಯತೆ; ಸಂಕಷ್ಟ ಎದುರಿಸುತ್ತಿರುವ ದೇಶಕ್ಕೆ ಅಭಯ ನೀಡಿದ Rishi Sunak

ಸುನಕ್ ಅವರು ಹಿಂದಿನ ಬೋರಿಸ್ ಜಾನ್ಸನ್ ಸರ್ಕಾರದಲ್ಲಿ (Boris Johnson government) ಹಣಕಾಸು ಸಚಿವರಾಗಿದ್ದರು. ಈ ಹಿಂದೆ ಟ್ರಸ್‌ ಅವರೊಂದಿಗೆ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಹಲವಾರು ಚರ್ಚೆಗಳಲ್ಲಿ ಅವರು ಬ್ರಿಟನ್‌ನನ್ನು ಆರ್ಥಿಕ ತೊಂದರೆಯಿಂದ ಹೊರಬರಲು ಯೋಜನೆಯನ್ನು ಮಂಡಿಸಿದ್ದರು. ಪ್ರಧಾನ ಮಂತ್ರಿಯ ಪ್ರಮಾಣ ವಚನದ ನಂತರ, ಸುನಕ್ ಅವರು ಲಂಡನ್‌ನ 10 ಡೌನಿಂಗ್ ಸ್ಟ್ರೀಟ್‌ನಲ್ಲಿರುವ (Boris Johnson government) ಬ್ರಿಟಿಷ್ ಪ್ರಧಾನಿಯವರ ಅಧಿಕೃತ ನಿವಾಸ (British PM official residence) ಮತ್ತು ಕಚೇರಿಯಲ್ಲಿ ಔಪಚಾರಿಕವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Rishi Sunak ಅವರದು ಹೂವಿನ ಹಾದಿಯಲ್ಲ: ಮುಂದಿವೆ ಬೆಟ್ಟದಷ್ಟು ಸವಾಲುಗಳು..!

ಯಾರ್ಕ್‌ಷೈರ್‌ನಿಂದ ಸಂಸದರಾಗಿ ಆಯ್ಕೆಯಾಗಿದ್ದ ರಿಷಿ ಸುನಕ್‌ (Rishi Sunak), ಬ್ರಿಟನ್‌ ಸಂಸತ್ತಿನಲ್ಲಿ ಭಗವದ್ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ವಚನ ತೆಗೆದುಕೊಂಡಿದ್ದರು. ಈ ರೀತಿಯಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ ಯುಕೆಯ ಮೊದಲ ಸಂಸದ ಇವರಾಗಿದ್ದರು. ರಿಷಿ ಸುನಕ್‌ ಆಗಾಗ, ಅವರ ಪರಂಪರೆಯ ಬಗ್ಗೆ ಮಾತನಾಡುತ್ತಾರೆ. ಅವರ ಕುಟುಂಬವು ತಮಗೆ ಕಲಿಸಿಕೊಟ್ಟ ಸಂಸ್ಕೃತಿ ಹಾಗೂ ಮೌಲ್ಯಗಳ ಬಗ್ಗೆಯೂ ಅವರು ಮಾತನಾಡುತ್ತಾರೆ. ಬ್ರಿಟನ್‌ ಸಂಸದರಾಗಿದ್ದ ಅವಧಿಯಲ್ಲಿಯೂ, ಮಾವ ಹಾಗೂ ಅತ್ತೆಯನ್ನು ಭೇಟಿ ಮಾಡುವ ಸಲುವಾಗಿ ಹೆಂಡತಿ ಮಕ್ಕಳೊಂದಿಗೆ ಬೆಂಗಳೂರಿಗೆ ಆಗಮಿಸುತ್ತಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!