
ಬೆಂಗಳೂರು (ಜ.15): ಮಕರ ಸಂಕ್ರಾಂತಿ ನಿಮಿತ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಅಧಿಕೃತ ನಿವಾಸದ ಒಂದು ಅಪರೂಪದ ವಿಡಿಯೋ ಪೋಸ್ಟ್ ಮಾಡಿದ್ದರು. ಇದರಲ್ಲಿ ನಿವಾಸದಲ್ಲಿದ್ದ ಹಸುಗಳಿಗೆ ಅವರು ಹುಲ್ಲು ತಿನ್ನಿಸುತ್ತಿದ್ದರು. ಅದಾದ ಬಳಿಕ, ಮೋದಿ ಅವರ ನಿವಾಸದಲ್ಲಿದ್ದ ಹಸುವಿನ ತಳಿ ಯಾವುದು ಎನ್ನುವ ಕುತೂಹಲ ಆರಂಭವಾಗಿರಬಹುದು. ಇದು ಪುಂಗನೂರು ಹಸುಗಳು. ವಿಶೇಷವೆಂದರೆ, ಈ ಹಸುಗಳನ್ನು ಸಾಕುವುದು ಬಹಳ ಕಷ್ಟದ ಕೆಲಸವಲ್ಲ. ಸಂಕ್ರಾಂತಿಯ ದಿನದಂದು ತಮ್ಮ ನವದೆಹಲಿಯ ನಿವಾಸದಲ್ಲಿದ್ದ, ಸಾಕಷ್ಟು ಪುಂಗನೂರು ಹಸುಗಳಿಗೆ ಮೋದಿ ಹುಲ್ಲು ತಿನ್ನಿಸಿದ್ದರು. ಇದು ಅಪರೂಪದ ಹಸುವಿನ ತಳಿ. ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯಲ್ಲಿರುವ ಇದೇ ಹೆಸರಿನ ಊರಿನಿಂದ ಈ ತಳಿಯ ಹಸುಗಳು ತಮ್ಮ ಹೆಸರು ಪಡೆದುಕೊಂಡಿವೆ. ವಿಶೇಷವೆಂದರೆ, ನಗರಗಳಲ್ಲಿ ಅದರಲ್ಲೂ ಅಪಾರ್ಟ್‌ಮೆಂಟ್‌ಗಳಲ್ಲೂ ಈ ತಳಿಯ ಹಸುಗಳನ್ನು ಸಾಕಬಹುದು. ಅದಲ್ಲದೆ, ಬಹಳ ಮುದ್ದಾಗಿ ಕೂಡ ಕಾಣುತ್ತವೆ. ಇದು ವಿಶ್ವದ ಅತ್ಯಂತ ಕುಬ್ಜ ಜಾನುವಾರು ತಳಿಗಳಲ್ಲಿ ಒಂದಾಗಿದೆ ಆದರೆ ತಜ್ಞರು ವಿವರಿಸಿರುವಂತೆ ಹೆಚ್ಚು ಪೌಷ್ಟಿಕಾಂಶದ ಹಾಲನ್ನು ಈ ತಳಿಯ ಹಸುಗಳು ನೀಡುತ್ತದೆ.
ಜಿಕೆವಿಕೆಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಪ್ರಾಣಿ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಎಲ್.ಚಿದಾನಂದ ಅವರು, ಪುಂಗನೂರು ತಳಿಯ ಹಸುಗಳು ‘ಚಿನ್ನದ ಗಣಿ’ ಎನ್ನುತ್ತಾರೆ. “ಈ ಹಸುವಿನ ಹಾಲಿನಲ್ಲಿ ಚಿನ್ನದ ರಾಸಾಯನಿಕ ಹೆಸರಾದ Au ಅಂಶವಿದೆ. ಇಂದಿಗೂ, ಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನ ಸೇರಿದಂತೆ ಆಂಧ್ರಪ್ರದೇಶದ ಅನೇಕ ದೇವಾಲಯಗಳು ಕ್ಷೀರಾಭಿಷೇಕಕ್ಕೆ (ದೇವತೆಗೆ ಹಾಲು ನೈವೇದ್ಯ) ಪುಂಗನೂರು ಹಸುವಿನ ಹಾಲನ್ನು ಬಳಸುತ್ತವೆ," ಎಂದು ತಿಳಿಸಿದ್ದಾರೆ. ಪುಂಗನೂರು ಹಸು ನೀಡುವ ಹಾಲು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿದೆ. ಒಮೆಗಾ ಕೊಬ್ಬಿನಾಮ್ಲಗಳು, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಹೆಚ್ಚಿನ ಕೊಬ್ಬಿನ ಅಂಶ A2 ಹಾಲಿಗೆ ಹೆಸರುವಾಸಿಯಾಗಿದೆ, ಇದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ ಎಂದು ತಿಳಿಸಿದ್ದಾರೆ.
ಪುಂಗನೂರು ಹಸು ದಿನಕ್ಕೆ ಸುಮಾರು 1 ರಿಂದ 3 ಲೀಟರ್ ನೀಡುತ್ತದೆ ಮತ್ತು ಹಾಲಿನ ಕೊಬ್ಬಿನಂಶವು ಇತರ ದೇಶೀಯ ತಳಿಗಳಲ್ಲಿ 3 ರಿಂದ 4 ಪ್ರತಿಶತಕ್ಕೆ ಹೋಲಿಸಿದರೆ ಶೇಕಡಾ 8 ರಷ್ಟಿದೆ. ಪುಂಗನೂರು ಹಸುವಿನ ತಳಿಯು ಸುಂದರವಾಗಿ ಕಾಣುತ್ತದೆ ಮತ್ತು 'ದೈವಿಕ' ಎಂದು ಪರಿಗಣಿಸಲ್ಪಟ್ಟಿದೆ, ಅದರ ಕಣ್ಣುಗಳಲ್ಲಿ ವಿಶೇಷ ಹೊಳಪು ಕಾಣುತ್ತದೆ ಈ ಅಪರೂಪದ ತಳಿಯನ್ನು ಸಾಕುವವರು ಹೇಳುತ್ತಾರೆ. ಅತ್ಯಂತ ಸ್ನೇಹಪರವಾಗಿರುವ ಈ ಹಸುಗಳು, ಸಾಕುಪ್ರಾಣಿಗಳಾಗಿ ಹೊಂದಲು ಬಹಳ ಸುಂದರ ಪ್ರಾಣಿಯಾಗಿದೆ ಎಂದು ತಜ್ಞರು ಹೇಳುತ್ತಾರೆ. ಹೆಚ್ಚಿನ ಕುಟುಂಬಗಳು ತಮ್ಮ ಮನೆಗಳಲ್ಲಿ ಪುಂಗನೂರು ಹಸುಗಳು ಸಾಕಲು ಆಸಕ್ತಿ ತೋರುತ್ತಿದ್ದಾರೆ ಎಂದು ಹೇಳಿದ್ದಾರೆ.
Punganur Cow: ಜಗತ್ತಿನ ಸ್ಪುರದ್ರೂಪಿ ಹಸು ಪುಂಗನೂರಿನ ಪುಟಾಣಿಗಳನ್ನು ನೋಡಿದ್ದೀರಾ?
ಪುಂಗನೂರು ಹಸುವನ್ನು ಹೊಂದುವುದು ಪ್ರತಿಷ್ಠೆಯ ವಿಷಯವಾಗಿದೆ. ಗೋವುಗಳನ್ನು ಹೆಚ್ಚಾಗಿ ದೇವಾಲಯಗಳು, ಗೋಶಾಲೆಗಳು ಮತ್ತು ಭೂಮಾಲೀಕರ ಮನೆಗಳಲ್ಲಿ ನಿರ್ವಹಿಸಲಾಗುತ್ತದೆ. ತಳಿಯ ಪರಿಶುದ್ಧತೆ ಮತ್ತು ಹಸುವಿನ ಆರೋಗ್ಯದ ಆಧಾರದ ಮೇಲೆ ಅವು 1 ಲಕ್ಷದಿಂದ 10 ಲಕ್ಷದವರೆಗೆ ಬೆಲೆ ಇದೆ ಎಂದು ತಿಳಿಸಿದ್ದಾರೆ.
ಮಕರ ಸಂಕ್ರಾಂತಿ ಪ್ರಯುಕ್ತ ಗೋವುಗಳಿಗೆ ಮೇವು ತಿನ್ನಿಸಿದ ಪ್ರಧಾನಿ ಮೋದಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ