ಮಕರ ಸಂಕ್ರಾಂತಿ ದಿನ ಶಬರಿಮಲೆ ಅಯ್ಯಪ್ಪ ಸನ್ನಿಧಿಯಲ್ಲಿ ಮಕರ ಜ್ಯೋತಿಯ ದರ್ಶನವಾಗಿದೆ. ಲಕ್ಷಾಂತರ ಮಂದಿ ಭಕ್ತರು ಅಯ್ಯಪನ್ನ ಸನ್ನಿಧಿಯಲ್ಲಿ ನಿಂತು ಮಕರ ಜ್ಯೋತಿ ದರ್ಶನ ಪಡೆದಿದ್ದಾರೆ.
ಶಬರಿಮಲೆ(ಜ.15) ಮಕರಸಂಕ್ರಾಂತಿ ಶುಭದಿನ ಶಬರಿಮಲೆ ಅಯ್ಯಪ್ಪ ಕ್ಷೇತ್ರದಲ್ಲಿ ಮಕರಜ್ಯೋತಿ ದರ್ಶನವಾಗಿದೆ. ಪೊನ್ನಂಬಲ ಬೆಟ್ಟದ ಮೇಲಿನಿಂದ ಮಕರ ಜ್ಯೋತಿ ಬೆಳಗಿದೆ. ಮೂರು ಬಾರಿ ಜ್ಯೋತಿ ದರ್ಶನವಾಗಿದ್ದು ಲಕ್ಷಾಂತರ ಭಕ್ತರು ದರ್ಶನ ಪಡೆದು ಪುನೀತರಾಗಿದ್ದಾರೆ. ಮಕರವಿಳಕ್ಕು ದರ್ಶನವಾಗುತ್ತಿದ್ದಂತೆ ಭಕ್ತರು ಸ್ವಾಮಿಯೇ ಶರಣಮಯಪ್ಪ ಷೋಷಣೆ ಮೊಳಗಿಸಿದ್ದಾರೆ.
ಪದಂಳಂ ಅರಮನೆಯಿಂದ ಹೊರಟ ತಿರುವಾಭರಣ ಸರಿಸುಮಾರಿ 6 ಗಂಟೆ ಹೊತ್ತಿಗೆ ಸಾರಂಗುದಿ ತಲುಪಿದೆ. ಬಳಿಕ ದೇವಸ್ವಂ ಮಂಡಳಿ ಸದಸ್ಯರು ದೇಗುದಲ್ಲಿ ಪೂಜೆ ಸಲ್ಲಿಸಿದ ಬಳಿಕ ತಿರುವಾಭರಣ ಸ್ವೀಕರಿಸಿದ್ದಾರೆ. ಬಳಿ ಮರೆವಣಿಗೆ ಮೂಲಕ ಅಯ್ಯಪ್ಪ ಸನ್ನಿಧಾನಕ್ಕೆ ಬಂದ ತಿರುವಾಭರಣಕ್ಕೆ ಪೂಜೆ ಸಲ್ಲಿಲಾಯಿತು. ಪೂಜೆ ನೇರವೇರಿದ ಬೆನ್ನಲ್ಲೇ ಪೊನ್ನಂಬಲ ಬೆಟ್ಟದ ಮೇಲಿನಿಂದ ಮಕರಜ್ಯೋತಿಯ ದರ್ಶನವಾಗಿದೆ.
ಅಯ್ಯಪ್ಪ ಸನ್ನಿಧಾನಕ್ಕೆ ಆಗಮಿಸಿದ ಲಕ್ಷಾಂತರ ಭಕ್ತರು ಸುಸೂತ್ರವಾಗಿ ಮಕರಜ್ಯೋತಿ ದರ್ಶನಕ್ಕೆ ಶಬರಿಮಲೆಯ ಹಲವೆಡೆಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಮಾಳಿಗಾಪ್ಪುರಂ ದೇವಸ್ಥಾನ ಆವರಣ, ಅನ್ನದಾನಮಂಟಪದ ಮುಂಭಾಗದಲ್ಲಿರುವ ಸಮತಟ್ಟು ಜಾಗ, ಮರಮಟ್ ಕಾಂಪ್ಲೆಕ್ ಟರೇಸ್, ವಾಟರ್ ಟ್ಯಾಂಕ್, ಪಂಡಿತಳವಳಂ ಸೇರಿದಂತೆ 10ಕ್ಕೂ ಹೆಚ್ಚು ಜಾಗದಲ್ಲಿ ಭಕ್ತರು ನಿಂತು ಮಕರಜ್ಯೋತಿ ದರ್ಶನ ಪಡೆಯಲು ದೇವಸ್ವಂ ಬೋರ್ಡ್ ವ್ಯವಸ್ಥೆ ಮಾಡಲಾಗಿದೆ.