
ಚೆನ್ನೈ(ಮಾ.04) ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಚಾಲನೆಗೆ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿಗೆ ತೆರಳಿದ್ದರು. ಚೆನ್ನೈ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯನ್ನು ಸ್ವಾಗತಿಸಲು ಬಿಜೆಪಿ ಸಂಪ್ರದಾಯದಂತೆ ಕಾರ್ಯಕರ್ತರು ಜೊತೆಗಿದ್ದರು. ಆಗಷ್ಟೆ ಹುಟ್ಟಿದ ಅವಳಿ ಮಕ್ಕಳ ಮುಖ ನೋಡಲು ಹೋಗದೆ ಪ್ರಧಾನಿ ಮೋದಿ ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕಾರ್ಯಕರ್ತನ ನೋಡಿ ಮೋದಿ ಹಿರಿ ಹಿರಿ ಹಿಗ್ಗಿದ್ದಾರೆ. ಇದೇ ವೇಳೆ ಇಂತಹ ಸಂದರ್ಭದಲ್ಲಿ ಇಲ್ಲಿಗೆ ಯಾಕೆ ಬಂದಿದ್ದೀರಿ ಎಂದು ಕಾರ್ಯಕರ್ತನ ಪ್ರಶ್ನಿಸಿದ ಮೋದಿ, ಅವಳಿ ಮಕ್ಕಳಿಗೆ ಶುಭಹಾರೈಸಿದ ಘಟನೆ ನಡೆದಿದೆ.
ಚೆನ್ನೈ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಸ್ವಾಗತಿಸಲು ಇತರ ನಾಯಕರ ಜೊತೆ ಬಿಜೆಪಿ ಕಾರ್ಯಕರ್ತ ಅಶ್ವಂತ್ ಪಿಜೈ ಕೂಡ ಆಗಮಿಸಿದ್ದರು. ಮೋದಿ ಸ್ವಾಗತಿಸಲು ಹೊರಡುತ್ತಿದ್ದಂತೆ ಅತ್ತ ಅಶ್ವಂತ್ ಪಿಜೈ ಪತ್ನಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ ಮೋದಿಯನ್ನು ಸ್ವಾಗತಿಸುವ ಅವಕಾಶವನ್ನು ಮಿಸ್ ಮಾಡಿಕೊಳ್ಳಲು ಬಯಸದ ಅಶ್ವಂತ್ ನೇರವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮೋದಿಗಾಗಿ ಕಾದು ಸ್ವಾಗತ ಮಾಡಿದ್ದಾರೆ.
ಮೋದಿ ಹಿಂದೂ ಅಲ್ಲ, ಪ್ರಧಾನಿ ಟೀಕಿಸಲು ತಾಯಿ ಹೀರಾಬೆನ್ ನಿಧನ ಬಳಸಿಕೊಂಡ ಲಾಲೂ ಯಾದವ್!
ಮೋದಿ ಆಗಮಿಸುತ್ತಿದ್ದಂತೆ ನನ್ನ ಪತ್ನಿ ಈಗಷ್ಟೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇದರ ಜೊತೆಗೆ ನಿಮ್ಮನ್ನು ಸ್ವಾಗತಿಸುವುದು ಮತ್ತಷ್ಟು ಖುಷಿ ನೀಡಿದೆ ಎಂದಿದ್ದಾರೆ. ಈ ಮಾತು ಕೇಳಿದ ಮೋದಿ, ಇಂತಹ ಸಂದರ್ಭದಲ್ಲಿ ನೀವು ಇಲ್ಲಿಗೆ ಬರವು ಬದಲು ಪತ್ನಿ ಜೊತೆ ಇರಬೇಕಿತ್ತು ಎಂದು ಸೂಚಿಸಿದ್ದಾರೆ. ಇಷ್ಟೇ ಅಲ್ಲ ಅವಳಿ ಮಕ್ಕಳು, ಕಾರ್ಯಕರ್ತನ ಪತ್ನಿಗೆ ಶುಭಹಾರೈಸಿದ್ದಾರೆ. ಕಾರ್ಯಕರ್ತನಿಗೆ ಅಭಿನಂದನೆ ಸಲ್ಲಿಸಿದ ಮೋದಿ, ಟ್ವೀಟ್ ಮೂಲಕ ಬಿಜೆಪಿ ಕಾರ್ಯಕರ್ತರ ನಿಸ್ವಾರ್ಥ ಸೇವೆಯನ್ನು ಪ್ರಶಂಸಿದ್ದಾರೆ.
ಚೆನ್ನೈ ವಿಮಾನ ನಿಲ್ದಾಣದಲ್ಲಿ ನಮ್ಮ ಕಾರ್ಯಕರ್ತರಲ್ಲಿ ಒಬ್ಬರಾದ ಅಶ್ವಂತ್ ಪಿಜೈ ನನ್ನನ್ನು ಸ್ವಾಗತಿಸಲು ಆಗಮಿಸಿದ್ದರು. ಅವರ ಪತ್ನಿ ಆಗಷ್ಟೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ ಕಾರ್ಯಕರ್ತ ಅವಳಿ ಮಕ್ಕಳನ್ನು, ಪತ್ನಿಯನ್ನು ಭೇಟಿ ಮಾಡಿರಲಿಲ್ಲ. ಈ ಸಂದರ್ಭದಲ್ಲಿ ಇಲ್ಲಿಗೆ ಬರಬಾರದಿತ್ತು ಎಂದು ನಾನು ಅವರಿಗೆ ಹೇಳಿದೆ. ಜೊತೆಗೆ ಕಾರ್ಯಕರ್ತನ ಕುಟುಂಬಕ್ಕೆ ನನ್ನ ಆಶೀರ್ವಾದ ತಿಳಿಸಿದ್ದೇನೆ. ನಮ್ಮ ಪಕ್ಷದಲ್ಲಿ ಇಂತಹ ಸಮರ್ಪಿತ, ನಿಸ್ವಾರ್ಥ ಮನೋಭಾವದಿಂದ ಕೂಡಿದ ಕಾರ್ಯಕರ್ತರನ್ನು ನೋಡಿದಾಗ ಸಂತೋಷವಾಗುತ್ತಿದೆ. ನಮ್ಮ ಕಾರ್ಯಕರ್ತರ ಪ್ರೀತಿ, ವಾತ್ಸಲ್ಯ ನನ್ನನ್ನು ಭಾವುಕರನ್ನಾಗಿ ಮಾಡಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಪಕ್ಷ ನಿಧಿಗೆ 2,000 ರೂ ಡೋನೇಶನ್ ನೀಡಿದ ಮೋದಿ, ದೇಶ ಕಟ್ಟಲು ದೇಣಿಗೆ ಸಂದೇಶ ಸಾರಿದ ಪ್ರಧಾನಿ!
ಚೆನ್ನೈ ವಿಮಾನ ನಿಲ್ದಾಣದಿಂದ ಮೋದಿ ನೇರವಾಗಿ ಕಲ್ಪಕ್ಕಂ ತೆರಳಿ 500 ಮೆಗಾವ್ಯಾಟ್ ಸಾಮರ್ಥ್ಯದ ಭಾರತದ ಸ್ಥಳೀಯ ಮೂಲಮಾದರಿ ಫಾಸ್ಟ್ ಬ್ರೀಡರ್ ರಿಯಾಕ್ಟರ್ (ಪಿಎಫ್ ಬಿಆರ್) ನ ಕೋರ್ ಲೋಡಿಂಗ್ ಗೆ ಚಾಲನೆ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ