ಪ್ರಧಾನಿ ಮೋದಿಗೆ ಖಡ್ಗದಿಂದ ಕೊಲೆ ಬೆದರಿಕೆ ಹಾಕಿದ ಮೊಹಮ್ಮದ್ ರಸೂಲ್; ಕೇಸ್ ದಾಖಲಾಗುತ್ತಿದ್ದಂತೆ ಪರಾರಿ!

Published : Mar 04, 2024, 08:26 PM IST
ಪ್ರಧಾನಿ ಮೋದಿಗೆ ಖಡ್ಗದಿಂದ ಕೊಲೆ ಬೆದರಿಕೆ ಹಾಕಿದ ಮೊಹಮ್ಮದ್ ರಸೂಲ್; ಕೇಸ್ ದಾಖಲಾಗುತ್ತಿದ್ದಂತೆ ಪರಾರಿ!

ಸಾರಾಂಶ

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರಧಾನಿ ಮೋದಿ ನಿನ್ನ ದೇಹದ ನರ ಕಟ್ ಮಾಡುತ್ತೇನೆ ಎಂದು ಖಡ್ಗ ಹಿಡಿದು ಕೊಲೆ ಬೆದರಿಕೆ ಹಾಕಿದ ವಿಡಿಯೋವನ್ನು ಮೊಹಮದ್ ರಸೂಲ್‌ ಎನ್ನುವವನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಯಾದಗಿರಿ (ಮಾ.04): ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರಧಾನಿ ಮೋದಿ ನಿನ್ನ ದೇಹದ ನರ ಕಟ್ ಮಾಡುತ್ತೇನೆ ಎಂದು ಖಡ್ಗ ಹಿಡಿದು ಕೊಲೆ ಬೆದರಿಕೆ ಹಾಕಿದ ವಿಡಿಯೋವನ್ನು ಮೊಹಮದ್ ರಸೂಲ್‌ ಎನ್ನುವವನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಅಮ್ಮ, ಅಕ್ಕನೆಂದು ತೀವ್ರ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಯಾದಗಿರಿ ಜಿಲ್ಲೆ ರಂಗಪೇಟೆ ನಿವಾಸಿ ರಸೂಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 505(1) (ಬಿ), 25(1)(ಬಿ) ಹಾಗೂ ಆರ್ಮ್ಸ್ ಕಾಯ್ದೆಯಡಿ ಕೇಸ್ ದಾಖಲು ಮಾಡಲಾಗಿದ್ದು, ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಎಫ್ಎಸ್ಎಲ್ ವರದಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಖಚಿತ; ಮೂವರನ್ನು ಬಂಧಿಸಿದ ಪೊಲೀಸರು!

ಪ್ರಧಾನಿ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಬಗ್ಗೆ ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೋ ಮಾಡಿದ ರಸೂಲ್ ಬಾಯಿಗೆ ಬಂದಂತೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ. ಮೋದಿ ನೀವು ಸರಿಯಾಗಿ ಆಡಳಿತ ಮಾಡುತ್ತಿಲ್ಲ. ದೇಶದ ಪ್ರಧಾನಮಂತ್ರಿಯಾಗಿ ನಾಟಕ ಮಾಡುತ್ತಿದ್ದೀಯ. ಸುಮ್ಮನೆ ಕಾಂಗ್ರೆಸ್‌ ಬಗ್ಗೆ ಬೈಯಬೇಡ. ಆ ಪಾರ್ಟಿಯನ್ನು ಬಿಟ್ಟು ನನ್ನ ಜೊತೆಗೆ ಜಗಳಕ್ಕೆ ಬಾ ಎಂದು ಹೇಳಿದ್ದಾನೆ. ಮುಂದುವರೆದು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಿಎಂ ಮೋದಿ ನಿನ್ನ ದೇಹದ ನರಗಳನ್ನು ಕಟ್ ಮಾಡುತ್ತೇನೆ ಎಂದು ಖಡ್ಗವನ್ನು ಹಿಡಿದು ಬೆದರಿಕೆ ಹಾಕಿರುವ ವಿಡಿಯೋ ಹಂಚಿಕೊಂಡಿದ್ದಾನೆ.

ಪ್ರಧಾನಿ ಮೋದಿ ಅವರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ವ್ಯಕ್ತಿಯನ್ನು ಮೊಹಮ್ಮದ್ ರಸೂಲ್ ಕಡ್ದಾರೆ ಎಂದು ಗುರುತಿಸಲಾಗಿದೆ. ಮೂಲತಃ ಯಾದಗಿರಿ ಜಿಲ್ಲೆಯ ಸುರಪುರದ ರಂಗಂಪೇಟೆಯ ನಿವಾಸಿ ಆಗಿರುವ ರಸೂಲ್ ಹೈದರಾಬಾದ್‌ನಲ್ಲಿ ಕೂಲಿ ಕೆಲಸ ಮಾಡಿಕೊಂಡಿ ಅಲ್ಲಿವೇ ವಾಸವಾಗಿದ್ದಾನೆ. ಈಗ ಮೋದಿಗೆ ಬೈಯುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಹರಿಬಿಟ್ಟಿದ್ದಾನೆ. ಆತನ ಮೇಲೆ ಈಗ ಸ್ಥಳೀಯ ಬಿಜೆಪಿ ನಾಯಕರು ಸುರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗಲಾಟೆ ಮಾಡಿ ಸಾಯಲು ಹೊರಟ ಮಗ ರಕ್ಷಿಸಲು ಹೋದ ತಾಯಿ ಕೂಡ ರೈಲಿಗೆ ಬಲಿ, ತಂಗಿ ಆತ್ಮಹತ್ಯೆ!

ಸ್ಥಳೀಯರ ದೂರನ್ನು ಆಧರಿಸಿ ಸುರಪುರ ಪೋಲಿಸ್ ಠಾಣೆಯಲ್ಲಿ ಮಹಮದ್ ರಸೂಲ್ ವಿರುದ್ಧ ಐಪಿಸಿ ಸೆಕ್ಷನ್ IPC 505(1) (ಬಿ), 25(1)(ಬಿ) ಹಾಗೂ ಆರ್ಮ್ಸ್ ಕಾಯ್ದೆಯಡಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಇನ್ನು ಆರೋಪಿಗಾಗಿ ಸುರಪುರ ಪೊಲೀಸರು ಹೈದರಾಬಾದ್ ಸೇರಿದಂತೆ ವಿವಿಧೆಡೆ ಶೋಧ ಕಾರ್ಯ ಆರಂಭಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ