ಸಿದ್ದೇಶ್ವರ ಶ್ರೀ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ, ಭೇಟಿ ನೆನೆದು ಭಾವುಕ!

By Suvarna News  |  First Published Jan 2, 2023, 11:55 PM IST

ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಕರ್ನಾಟಕಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಶ್ರೀಗಳ ಜೊತೆಗಿನ ಫೋಟೋಗಳನ್ನು ಟ್ವೀಟ್ ಮಾಡಿದ ಮೋದಿ, ಸಂತಾಪ ಸೂಚಿಸಿದ್ದಾರೆ.


ನವದೆಹಲಿ(ಜ.02): ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ವಿಧವಶರಾಗಿದ್ದಾರೆ. ವಯೋಸಹದ ಖಾಯಿಲೆಯಿಂದ ಬಳಲುತ್ತಿದ್ದ ಶ್ರೀಗಳು ಇಂದು ಸಂಜೆ 6 ಗಂಟೆಗೆ ನಿಧನಾಗಿದ್ದಾರೆ. ನಾಳೆ ಬೆಳಗ್ಗೆ 6 ಗಂಟೆಯಿಂದ 3 ಗಂಟೆ ವರೆಗೆ ವಿಜಯಪುರದ ಸೈನಿಕ್ ಸ್ಕೂಲ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನು ನಾಳೆ ಸಂಜೆ 5 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ. ಸಿದ್ದೇಶ್ವರ ಶ್ರೀಗಳ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಕಳೆದ ಬಾರಿ ಕರ್ನಾಟಕ ಭೇಟಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಿದ್ದೇಶ್ವರ ಶ್ರೀಗಳ ಭೇಟಿ ಮಾಡಿದ್ದರು. ಈ ವೇಳೆಯ ಫೋಟೋಗಳನ್ನು ಮೋದಿ ಹಂಚಿಕೊಂಡಿದ್ದಾರೆ. 

ಪರಮಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳು ಸಮಾಜಕ್ಕೆ ಸಲ್ಲಿಸಿದ ಅತ್ಯುತ್ತಮ ಸೇವೆಗಾಗಿ ಸ್ಮರಣೀಯರು. ಅವರು ಇತರರ ಶ್ರೇಯೋಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಿದ ಸಂತ. ಅಪಾರ ಪಾಂಡಿತ್ಯದಿಂದಲೇ  ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ನೋವಿನ ಸಂದರ್ಭದಲ್ಲಿ ನನ್ನ ಸಂತಾಪಗಳು ಸಿದ್ದೇಶ್ವರ ಶ್ರೀಗಳ ಅಸಂಖ್ಯಾತ ಭಕ್ತರೊಂದಿಗಿದೆ. ಓಂ ಶಾಂತಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಮೋದಿ ಟ್ವೀಟ್ ಮಾಡಿದ್ದಾರೆ. 

Latest Videos

undefined

 

ಪರಮಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರು ಸಮಾಜಕ್ಕೆ ನೀಡಿರುವ ಗಣನೀಯ ಸೇವೆಗಾಗಿ ಅವರನ್ನು ಸ್ಮರಿಸಲಾಗುತ್ತದೆ. ಅವರು ಇತರರ ಒಳಿತಿಗಾಗಿ ಅವಿಶ್ರಾಂತವಾಗಿ ಶ್ರಮಿಸಿದ್ದರು ಮತ್ತು ಅವರ ಜ್ಞಾನೋತ್ಸಾಹಕ್ಕಾಗಿ ಅವರು ಗೌರವಗಳಿಸಿದ್ದರು. ಈ ದುಃಖದ ಸಮಯದಲ್ಲಿ ಅವರ ಅಸಂಖ್ಯಾತ ಭಕ್ತರೊಂದಿಗೆ ನನ್ನ ಸಂವೇದನೆ ಇದೆ. ಓಂ. ಶಾಂತಿ pic.twitter.com/7svVGEdSje

— Narendra Modi (@narendramodi)

 

ಶ್ರೀಗಳ ಕಿರುಪರಿಚಯ
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿಯಲ್ಲಿ ಅಕ್ಟೋಬರ್‌ 24, 1940 ಹುಟ್ಟಿದ ಸಿದ್ದೇಶ್ವರ ಶ್ರೀಗಳು , ಬಿಜ್ಜರಗಿ ಗ್ರಾಮದಲ್ಲಿ 4ನೇ ತರಗತಿವರೆಗೆ ವ್ಯಾಸಂಗ. ವಿಜಯಪುರದಲ್ಲಿ ಕಾಲೇಜು ಶಿಕ್ಷಣ. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ. ಕೊಲ್ಹಾಪುರ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ವಿಷಯದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.

ವೈಕುಂಠ ಏಕಾದಶಿ ದಿನವೇ ವೈಕುಂಠ ಸೇರಿದ ಸಿದ್ದೇಶ್ವರ ಸ್ವಾಮಿಜಿ, ಸಿಎಂ ಸೇರಿ ಗಣ್ಯರ ಸಂತಾಪ!

ಕೃತಿಗಳು: ಸಿದ್ದಾಂತ ಶಿಖಾಮಣಿ, ಅಲ್ಲಮಪ್ರಭು ದೇವರ ವಚನ ನಿರ್ವಚನ ಕೃತಿ ಹಾಗೂ ಅವರ ಪ್ರವಚನ ಸಾರವುಳ್ಳ ಅನುಭವಾಮೃತ, ಆನಂದದ ಅನ್ವೇಷಣೆ, ಆನಂದ ಯೋಗ, ಈಶಾವಾಸ್ಯೋಪನಿಷತ್‌, ಈಶ ಪ್ರಸಾದ, ಈಶಯೋಗ, ಪೂರ್ಣಯೋಗ, ಪಾರಮಾರ್ಥ ಗೀತಾ, ಕಠೋಪನಿಷತ್‌, ಕೈವಲ್ಯ ಪದ್ಧತಿ, ಕೈವಲ್ಯ ಕುಸುಮ, ಕರ್ಮಯೋಗ, ಕಲ್ಯಾಣ ರಾಜ್ಯ, ಕಥಾಮೃತ, ಬದುಕು, ಬದುಕಿನ ದೀವಿಗೆ, ಭಕ್ತಿಪಥ, ಭಕ್ತಿಯ ಬೆಳೆ, ಭಕ್ತಿಯೋಗ, ಸತ್ಸಂಗ ಸೌರಭ, ಧರ್ಮಾಮೃತ ಹೀಗೆ 100 ಕ್ಕೂ ಅಧಿಕ ಪ್ರವಚನಗಳ ಸಾರವುಳ್ಳ ಪುಸ್ತಕಗಳು ಹೊರಬಂದಿವೆ, ಅದೇ ತೆರನಾಗಿ ಆಂಗ್ಲ ಭಾಷೆಯಲ್ಲಿ ನೀಡಿದ ಪ್ರವಚನ ಸಾರವಾದ ಗಾಡ್‌ ವಲ್ಡ್‌ರ್‍ ಆ್ಯಂಡ್‌ ಸೋಲ್‌, ಸಾಂಗ್‌್ಸ ಆಫ್‌ ಸೈನ್ಸ್‌ ಸಹ ಮುದ್ರಣ ಕಂಡಿವೆ.

click me!