ವಿದೇಶದಿಂದ ಮರಳಿದ ಬೆನ್ನಲ್ಲೇ ಪ್ರಧಾನಿ ಮೋದಿ ಮಹತ್ವದ ಸಭೆ; ಮಣಿಪುರ ಹಿಂಸಾಚಾರ, ಪ್ರವಾಹ ಚರ್ಚೆ!

By Suvarna NewsFirst Published Jun 26, 2023, 12:36 PM IST
Highlights

ಅಮೆರಿಕ ಹಾಗೂ ಈಜಿಪ್ಟ್ ಪ್ರವಾಸ ಮುಗಿಸಿ ತವರಿಗೆ ಮರಳಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಮಣಿಪುರು ಹಿಂಸಾಚಾರ ಸೇರಿದಂತೆ ಹಲವು ವಿಚಾರಗಳನ್ನು ಮೋದಿ ಚರ್ಚಿಸಿದ್ದಾರೆ. 
 

ನವದೆಹಲಿ(ಜೂ.26) ಪ್ರಧಾನಿ ನರೇಂದ್ರ ಮೋದಿಯ ಅಮೆರಿಕ ಹಾಗೂ ಈಜಿಪ್ಟ್ ಪ್ರವಾಸ ಅತ್ಯಂತ ಯಶಸ್ವಿಯಾಗಿದೆ. ಬಿಡುವಿಲ್ಲದ ಪ್ರಯಾಣ, ದ್ವಿಪಕ್ಷೀಯ ಮಾತುಕತೆ, ಸರಣಿ ಸಭೆಗಳನ್ನು ನಡೆಸಿದ ಪ್ರಧಾನಿ ಮೋದಿ ತವರಿಗೆ ಮರಳಿದ್ದಾರೆ. ತಾಯ್ನಾಡಿಗೆ ಮರಳಿದ ಬೆನ್ನಲ್ಲೇ ತಮ್ಮ ದಣಿವರಿಯದೇ ಕೆಲಸದಲ್ಲಿ ಮಗ್ನರಾಗಿದ್ದಾರೆ. ಇಂದು ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ಸಚಿವರು, ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. 

ಈಜಿಪ್ಟ್‌ನಿಂದ ನಿನ್ನೆ(ಜೂ.25) ರಾತ್ರಿ ದೆಹಲಿಗೆ ಬಂದಿಳಿದ ಪ್ರಧಾನಿ ಮೋದಿ ಇಂದು(ಜೂ.26) ಬೆಳಗ್ಗೆ ಮಹತ್ವದ ಸಭೆ ನಡೆಸಿದ್ದಾರೆ. ಮಣಿಪುರದ ಹಿಂಸಾಚಾರ, ಮುಂಗಾರು ಪ್ರವೇಶ, ಪ್ರವಾಹ, ಬರಗಾಲ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ. ಈಶಾನ್ಯ ಭಾರತದಲ್ಲಿನ ಮಳೆ ಪ್ರವಾಹ, ಹರ್ಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೃಷ್ಟಿಯಿಗಾರುವ ಪ್ರವಾಹ ಪರಿಸ್ಥಿತಿ ಕುರಿತು ಚರ್ಚೆ ನಡೆಸಲಾಗಿದೆ. 

Latest Videos

ಭಾರತಕ್ಕೆ ವಾಪಸಾದ ಪ್ರಧಾನಿ ಮೋದಿ: ಈಜಿಪ್ಟ್‌ ಪ್ರವಾಸದಲ್ಲಿ 4 ಪ್ರಮುಖ ಒಪ್ಪಂದಗಳಿಗೆ ಸಹಿ; ಹೈಲೈಟ್ಸ್‌ ಹೀಗಿದೆ..

ನಿನ್ನೆ ಈಜಿಪ್ಟ್‌ನಲ್ಲಿದ್ದ ಪ್ರಧಾನಿ ಮೋದಿ, ಅರಬ್ ರಿಪಬ್ಲಿಕ್ ಆಫ್ ಈಜಿಪ್ಟ್  ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಜೊತೆ ಮಾತುಕತೆ ನಡೆಸಿದ್ದರು. ಬಳಿಕ ಈಜಿಪ್ಟ್‌ನ ಪಿರಮಿಡ್‌ಗೆ ಬೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದರು. ಅಧ್ಯಕ್ಷರ ಜೊತೆಗನ ಮಾತುಕತೆಯಲ್ಲಿ ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಾಗಿದ. ವಿಶೇಷವಾಗಿ ವ್ಯಾಪಾರ ಮತ್ತು ಹೂಡಿಕೆ, ಮಾಹಿತಿ ತಂತ್ರಜ್ಞಾನ,ರಕ್ಷಣೆ ಮತ್ತು ಭದ್ರತೆ, ನವೀಕರಿಸಬಹುದಾದ ಇಂಧನ, ಕೃಷಿ, ಆರೋಗ್ಯ, ಸಂಸ್ಕೃತಿ ಮತ್ತು ಉಭಯ ದೇಶವಾಸಿಗಳ ನಡುವಿನ ಸಂಬಂಧಗಳಂತಹ ಕ್ಷೇತ್ರಗಳಲ್ಲಿ ಎರಡು ದೇಶಗಳ ನಡುವಿನ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಮಾರ್ಗಗಳ ಕುರಿತು ನಾಯಕರು ಚರ್ಚಿಸಿದರು.

ಪ್ರಧಾನಮಂತ್ರಿ ಮತ್ತು ಅಧ್ಯಕ್ಷ ಸಿಸಿ ಅವರು ಜಿ-20 ರಲ್ಲಿ ಹೆಚ್ಚಿನ ಸಹಕಾರವನ್ನು ಕುರಿತು ಸಹ ಚರ್ಚಿಸಿದರು, ಆಹಾರ ಮತ್ತು ಇಂಧನ ಅಭದ್ರತೆ, ಹವಾಮಾನ ಬದಲಾವಣೆ ಮತ್ತು ಗ್ಲೋಬಲ್ ಸೌತ್ (ಆರ್ಥಿಕವಾಗಿ ಹಿಂದುಳಿದ) ದೇಶಗಳು ಸಂಘಟಿತ ಧ್ವನಿಯನ್ನು ಹೊಂದುವ ಅಗತ್ಯವನ್ನು ಎತ್ತಿ ಅವರು ತೋರಿಸಿದರು. ಜಿ-20 ನಾಯಕರ ಶೃಂಗಸಭೆಗಾಗಿ ಸೆಪ್ಟೆಂಬರ್ 2023 ರಲ್ಲಿ ನವದೆಹಲಿಯಲ್ಲಿ ಅಧ್ಯಕ್ಷ ಸಿಸಿ ಅವರನ್ನು ಸ್ವಾಗತಿಸಲು ಪ್ರಧಾನಿಯವರು ಎದುರು ನೋಡುತ್ತಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಸಂಚಲನ, 13 ರಾಷ್ಟ್ರಗಳ ಅತ್ಯುನ್ನತ ನಾಗರೀಕ ಪ್ರಶಸ್ತಿ ಪಡೆದ ಪ್ರಧಾನಿ!

ದ್ವಿಪಕ್ಷೀಯ ಸಂಬಂಧವನ್ನು "ಕಾರ್ಯತಂತ್ರದ ಸಹಭಾಗಿತ್ವ" ಕ್ಕೆ ಏರಿಸುವ ಒಪ್ಪಂದಕ್ಕೆ ನಾಯಕರು ಸಹಿ ಹಾಕಿದರು. ಕೃಷಿ, ಪುರಾತತ್ವ ಮತ್ತು ಪ್ರಾಚ್ಯವಸ್ತು ಮತ್ತು ಸ್ಪರ್ಧಾತ್ಮಕ ಕಾನೂನು ಕ್ಷೇತ್ರಗಳಲ್ಲಿ ಮೂರು ತಿಳುವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಾಯಿತು.ಕೈರೋದ ಅರಮನೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ, ಅಬ್ದೆಲ್ ಫತ್ತಾಹ್ ಎಲ್-ಸಿಸಿ ಪ್ರಧಾನಿ ಮೋದಿಯವರಿಗೆ ಈಜಿಪ್ಟ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಆರ್ಡರ್ ಆಫ್ ದಿ ನೈಲ್’ ಪ್ರದಾನಿಸಿ ಗೌರವಿಸಿದರು. ಈ ವಿಶೇಷ ಗೌರವಕ್ಕಾಗಿ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರಿಗೆ ಭಾರತದ ಜನತೆಯ ಪರವಾಗಿ ಮೋದಿ ಧನ್ಯವಾದ ಅರ್ಪಿಸಿದ್ದಾರೆ. ಈ ಪ್ರಶಸ್ತಿ ಪಡೆದ ಮೊದಲ ಭಾರತದ ಪ್ರಧಾನಿ ಅನ್ನೋ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.  

click me!