ನವದೆಹಲಿ(ಫೆ.28): ಉಕ್ರೇನ್ ಮೇಲೆ ರಷ್ಯಾ ದಾಳಿ (Russia Ukraine war) ತೀವ್ರಗೊಳಿಸುತ್ತಿದ್ದಂತೆ ಇತ್ತ ಭಾರತ ಯುದ್ಧ ಭೂಮಿಯಲ್ಲಿರುವ ಭಾರತೀಯರ ರಕ್ಷಣೆಗೆ ಅವಿರತ ಶ್ರಮವಹಿಸುತ್ತಿದೆ. ಸತತ ಕಾರ್ಯಾಚರಣೆ, ಸಭೆ ನಡೆಸಲಾಗುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅಧ್ಯಕ್ಷತೆಯಲ್ಲಿ ಉಕ್ರೇನ್ ಪರಿಸ್ಥಿತಿ ಹಾಗೂ ಭಾರತೀಯ ರಕ್ಷಣೆ ಕುರಿತು ಉನ್ನತ ಮಟ್ಟದ ಸಭೆ ನಡೆಸಲಾಗಿದೆ.
ಈ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸಚಿವರಾದ ಜ್ಯೋತಿರಾಧಿತ್ಯ ಸಿಂಧಿಯಾ, ಹರ್ದಿಪ್ ಪುರಿ, ಕಿರಣ್ ರಿಜಿಜು ಹಾಗೂ ವಿಕೆ ಸಿಂಗ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ನಿನ್ನೆ(ಫೆ.27) ಪ್ರಧಾನಿ ಮೋದಿ ಯುಪಿ ಚುನಾವಣಾ ರ್ಯಾಲಿ ಮುಗಿಸಿದ ಬೆನ್ನಲ್ಲೇ ಉನ್ನತ ಮಟ್ಟದ ಸಭೆ ನಡೆಸಿ ಮಹತ್ವದ ಸೂಚನೆ ನೀಡಿದ್ದರು. ಇದೀಗ ಎರಡನೇ ಸಭೆ ನಡೆಸಿ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತರಲು ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
Russia Ukraine war ನಾಗರೀಕರ ರಕ್ಷಣೆಯಲ್ಲಿ ಭಾರತ ಯಶಸ್ವಿ ಕಾರ್ಯಾಚರಣೆ, ಕೈಚೆಲ್ಲಿ ಕೂತ ಅಮೆರಿಕ!
ಈ ಸಭೆಯಲ್ಲಿ ಉಕ್ರೇನ್‌ನಿಂದ ಭಾರತೀಯ ನಾಗರೀಕರು, ವಿದ್ಯಾರ್ಥಿಗಳನ್ನು ರಕ್ಷಿಸಿ ಸುರಕ್ಷಿತವಾಗಿ ಭಾರತಕ್ಕೆ ಕರೆತರುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಉಕ್ರೇನ್‌ನಲ್ಲಿನ ಭಾರತೀಯ ರಾಯಭಾರ ಕಚೇರಿ ಹಾಗೂ ಉಕ್ರೇನ್ ನೆರೆ ದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳಿಗೆ ಸೂಚನೆ ನೀಡಲಾಗಿದೆ.
ಈಗಾಗಲೇ ಭಾರತೀಯರ ರಕ್ಷಣಾ ಕಾರ್ಯ ಆಪರೇಶನ್ ಗಂಗಾ ಮಿಶನ್ ಮತ್ತಷ್ಟು ಯಶಸ್ವಿಗೊಳಿಸಲು ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾರನ್ನ ರೋಮೆನಿಯಾ ತೆರಳಲು ಸೂಚಿಸಿದೆ. ಹಂಗೇರಿಗೆ ಸಚಿವ ಹರ್ದಿಪ್ ಪುರಿ, ಪೊಲೆಂಡ್‌ಗೆ ವಿಕೆ ಸಿಂಗ್, ಸ್ಲೋವಾಕಿಯಾಗೆ ಕಿರಣ್ ರಿಜಿಜುಗೆ ತೆರಳಲು ಸೂಚಿಸಲಾಗಿದೆ.
ರಷ್ಯಾ ಯುದ್ಧ ಟ್ಯಾಂಕರ್‌ಗೆ ಅಡ್ಡಲಾಗಿ ನಿಂತ ಉಕ್ರೇನ್ ನಾಗರಿಕರು: ವಿಡಿಯೋ ವೈರಲ್
ಆಪರೇಷನ್ ಗಂಗಾ’ಗೆ ಪ್ರತ್ಯೇಕ ಟ್ವೀಟರ್ ಖಾತೆ!
ಉಕ್ರೇನ್‌ನಿಂದ ಭಾರತಕ್ಕೆ ಭಾರತೀಯರನ್ನು ಕರೆತರುವ ಕಾರಾರಯಚರಣೆಗೆ ವಿದೇಶಾಂಗ ಇಲಾಖೆ ಪ್ರತ್ಯೇಕ ಟ್ವೀಟರ್ ಹ್ಯಾಂಡಲ್ ಆರಂಭಿಸಿದೆ.ಈ ಟ್ವೀಟರ್ ಖಾತೆಯಲ್ಲಿ ತೆರವು ಕಾರ್ಯಾಚರಣೆ ಕುರಿತ ಮಾಹಿತಿ ನೀಡಿ ಸಹಾಯ ಮಾಡಲಾಗುತ್ತದೆ.
ಪ್ರತಿ ವಿಮಾನ ಹಾರಾಟಕ್ಕೆ 1.10 ಕೋಟಿ ರು. ಖರ್ಚು
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ‘ಆಪರೇಷನ್ ಗಂಗಾ’ ಹೆಸರಿನಲ್ಲಿ ಏರ್‌ಲಿಫ್ಟ್ ಆರಂಭಿಸಿರುವ ಸರ್ಕಾರ ಏರ್ ಇಂಡಿಯಾದ ಪ್ರತಿ ವಿಮಾನ ಹಾರಾಟಕ್ಕೆ 1.10 ಕೋಟಿ ರು.ಗೂ ಅಧಿಕ ಹಣವನ್ನು ನೀಡಬೇಕಾಗಿದೆ.
ಏರ್ ಇಂಡಿಯಾದ ಡ್ರೀಮ್‌ಲೈನರ್ ವಿಮಾನಗಳನ್ನು ಹಾರಾಟ ಮಾಡಲು ಗಂಟೆಗೆ 7ರಿಂದ 8 ಲಕ್ಷ ರು. ಖರ್ಚು ಬರುತ್ತದೆ. ದೂರ, ಪ್ರಯಾಣ ಅವಧಿಯನ್ನು ಆಧರಿಸಿ ಹೋಗಿ ಬರುವ ವೆಚ್ಚ ನಿರ್ಧಾರವಾಗಲಿದೆ. ಅದರ ಆಧಾರದಲ್ಲಿ ಕೇಂದ್ರ ಸರ್ಕಾರ ಪ್ರತಿ ವಿಮಾನಕ್ಕೆ 1.10 ಕೋಟಿ ರು.ಗೂ ಅಧಿಕ ಹಣ ನೀಡುತ್ತಿದೆ. ಡ್ರೀಮ್‌ಲೈನರ್ ವಿಮಾನಗಳ ಸಂಚಾರಕ್ಕೆ ಪ್ರತಿ ಗಂಟೆಗೆ 5 ಟನ್ ಇಂಧನ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಕ್ರೇನ್‌ನಿಂದ ಆಗಮಿಸುತ್ತಿರುವ ಭಾರತೀಯರಿಂದ ಸರ್ಕಾರ ಹಣ ಪಡೆಯುತ್ತಿಲ್ಲ.