ನವದೆಹಲಿ(ಫೆ.28): ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ಒಂದೊಂದೆ ನಗರಗಳನ್ನು ವಶಪಡಿಸಿಕೊಳ್ಳುತ್ತಿದೆ. ಸರ್ಕಾರಿ ಕಚೇರಿ, ಮಿಲಿಟರಿ ಬಂಕರ್ ಸೇರಿದಂತೆ ಜನವಸತಿ ಪ್ರದೇಶಗಳ ಮೇಲೂ ರಷ್ಯಾ ಸೇನೆ ದಾಳಿ ಮಾಡುತ್ತಿದೆ. ಇದರಿಂದ ಉಕ್ರೇನ್‌ನಲ್ಲಿ ನೆಲೆಸಿರುವ ವಿವಿಧ ದೇಶದ ನಾಗರೀಕರ ರಕ್ಷಣೆ ಅತ್ಯಂತ ಸವಾಲಿನಿಂದ ಕೂಡಿದೆ. ಹೀಗಾಗಿ ಅಮೆರಿಕ, ಚೀನಾ, ಯುಕೆ ಸೇರಿದಂತೆ ಕೆಲ ದೇಶಗಳು ಉಕ್ರೇನ್‌ನಲ್ಲಿರುವ ತಮ್ಮ ನಾಗರೀಕರ ರಕ್ಷಣೆ ಅಸಾಧ್ಯ ಎಂದು ಕೈಚೆಲ್ಲಿ ಕೂತಿದೆ. ಇದರ ನಡುವೆ ಭಾರತ ವಿಶ್ವದ ಗಮನ ಸೆಳೆದಿದೆ. ಆಪರೇಶನ್ ಗಂಗಾ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಭಾರತ ಯಶಸ್ವಿಯಾಗಿ ಉಕ್ರೇನ್‌ನಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಕರೆ ತರುತ್ತಿದೆ.
ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು, ಭಾರತೀಯ ನಾಗರೀಕರ ಕರೆತರಲು ಪ್ರಧಾನಿ ನರೇಂದ್ರ ಮೋದಿ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇದಕ್ಕಾಗಿ ಹಲವು ಸುತ್ತಿನ ಸಭೆ ನಡೆಸಿ ವಿಶೇಷ ತಂಡ ರಚಿಸಿದ್ದಾರೆ. ಪರಿಣಾಮ ವಿಶ್ವವೇ ಇದೀಗ ಭಾರತದತ್ತ ತಿರುಗಿ ನೋಡುತ್ತಿದೆ. ಅಮೆರಿಕ ತನ್ನ ಅಧೀಕೃತ ಹೇಳಿಕೆಯಲ್ಲಿ ಅಮರಿಕ ನಾಗರೀಕರ ರಕ್ಷಣೆ ಉಕ್ರೇನ್‌ನಲ್ಲಿ ಪ್ರತಿಕೂಲ ವಾತಾವರಣವಿಲ್ಲ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ರಕ್ಷಣೆ ಸಾಧ್ಯವಿಲ್ಲ ಎಂದು ಬಹಿರಂಗವಾಗಿ ಹೇಳಿದೆ. ಆದರೆ ಭಾರತ ನಾಲ್ವರು ಕೇಂದ್ರ ಸಚಿವರನ್ನು ಉಕ್ರೇನ್ ಗಡಿ ರಾಷ್ಟ್ರಗಳಿಗೆ ಕಳುಹಿಸಿ ಆಪರೇಶನ್ ಗಂಗಾ ಕಾರ್ಯಾಚರಣೆ ಯಶಸ್ವಿಯಾಗುವಂತೆ ನೋಡಿಕೊಂಡಿದೆ.
undefined
Russia- Ukraine Crisis: ಭಾರತೀಯರ ಏರ್‌ಲಿಫ್ಟ್‌ಗೆ ನಾಲ್ವರು ಸಚಿವರಿಗೆ ಹೊಣೆ
ಉಕ್ರೇನ್ ನೆರೆಯ ದೇಶ ರೋಮೆನಿಯಾಗೆ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾರನ್ನ ಕೇಂದ್ರ ಸರ್ಕಾರ ಕಳುಹಿಸಿದೆ ಇನ್ನು ಸಚಿವ ಕರಿಣ್ ರಿಜಿಜು ಸ್ಲೋವಾಕಿಯಾಗೆ ತೆರಳಲು ಸೂಚನೆ ನೀಡಲಾಗಿದೆ. ಸಚಿವ ಹರ್ದಿಪ್ ಪುರಿ ಹಂಗೇರಿಗೆ ತೆರಳಲಿದ್ದರೆ, ವಿಕೆ ಸಿಂಗ್ ಪೊಲೆಂಡ್ ತೆರಳಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ಮೂಲಕ ಉಕ್ರೇನ್‌ನಿಂದ ಈ ನಾಲ್ಕು ದೇಶಗಳ ಗಡಿಗೆ ಭಾರತೀಯ ನಾಗರೀಕನ್ನು ಸುರಕ್ಷಿತವಾಗಿ ಕರೆತಂದು ಅಲ್ಲಿಂದ ಆಪರೇಶನ್ ಗಂಗಾ ವಿಮಾನದ ಮೂಲಕ ಭಾರತಕ್ಕೆ ಕರೆತರುವ ಕಾರ್ಯಾಚರಣೆ ಯಶಸ್ವಿಯಾಗಿ ನಡೆಯುತ್ತಿದೆ.
ಈಗಾಗಲೇ ಆಪರೇಶನ್ ಗಂಗಾ ಕಾರ್ಯಾಚರಣೆಯಲ್ಲಿ ಉಕ್ರೇನ್ ಯುದ್ಧಭೂಮಿಯಿಂದ 1684 ಭಾರತೀಯರನ್ನು ತಾಯ್ನಾಡಿಗೆ ಕರೆತರಲಾಗಿದೆ. ಇದರಲ್ಲಿ 116 ಮಕ್ಕಳೂ ಸೇರಿದ್ದಾರೆ. ಉಕ್ರೇನ್‌ನಿಂದ ನೆರೆಯ ದೇಶದ ಗಡಿಗೆ ತೆರಳುತ್ತಿರುವ ವಿದ್ಯಾರ್ಥಿಗಳಿಗೆ ವೀಸಾ ಸೇರಿದಂತೆ ಇತರ ಯಾವುದೇ ಸಮಸ್ಯೆಯಾಗದಂತೆ ಭಾರತದ ರಾಯಭಾರ ಕಚೇರಿ ನೋಡಿಕೊಂಡಿದೆ. ಪೊಲೆಂಡ್‌ನಲ್ಲಿ ವೀಸಾ ಇಲ್ಲದೆ ಪ್ರವೇಶಕ್ಕೂ ಅನುಮತಿ ನೀಡಲಾಗಿದೆ.
Russia-Ukraine Crisis: 'ಆಪರೇಶನ್ ಗಂಗಾ' ಕಾರ್ಯಾಚರಣೆ, ಈವರೆಗೆ 1158 ಜನ ವಾಪಸ್
ಕೆಲವೇ ಗಂಟೆಗಳಲ್ಲಿ ಬಚರೆಸ್ಟ್‌ನಿಂದ ಎರಡು ಹಾಗೂ ಬಡಾಪೆಸ್ಟ್‌ನಿಂದ 1 ವಿಮಾನ ಭಾರತದತ್ತ ಪ್ರಯಾಣ ಬೆಳೆಸಲಿದೆ. ಉಕ್ರೇನ್‌ನಿಂದ ಭಾರತೀಯರನ್ನು ಕರೆತರುವ ಈ ವಿಮಾನ ದೆಹಲಿ ಹಾಗೂ ಮುಂಬೈನಲ್ಲಿ ಇಳಿಯಲಿದೆ. ಭಾರತ ವ್ಯವಸ್ಥಿತವಾಗಿ ನಾಗರೀಕರ ರಕ್ಷಣೆ ಮಾಡುತ್ತಿದೆ.
ಅಮೆರಿಕ ಮಾತ್ರವಲ್ಲ, ಚೀನಾ ಹಾಗೂ ಯುಕೆ ಕೂಡ ಉಕ್ರೇನ್‌ನಲ್ಲಿರುವ ತನ್ನ ನಾಗರೀಕರ ರಕ್ಷಣೆ ಜಾವಾಬ್ದಾರಿಯನ್ನು ಅವರ ಮೇಲೆ ಹೊರಿಸಿದೆ. ಉಕ್ರೇನ್ ಪರಿಸ್ಥಿತಿ ಗಂಭೀರವಾಗಿರುವ ಕಾರಣ ಅಮೆರಿಕ ನಾಗರೀಕರು ಸುರಕ್ಷಿತ ಎಂದೆನಿಸಿದರೆ ಖಾಸಗಿ ವಾಹನಗಳಲ್ಲಿ ಉಕ್ರೇನ್ ತೊರೆಯಿರಿ. ಹೀಗೆ ಪ್ರಯಾಣ ಮಾಡುವಾಗ ಮಿಲಿಟರಿ ಕಾರ್ಯಾಚರಣೆ, ಜನ ದಟ್ಟಣೆ ಇರುವ ಪ್ರದೇಶಗಳ ಮೂಲಕ ಸಾಗಬೇಡಿ. ಕೆಲವು ಪ್ರದೇಶಗಳು ಸಂಪೂರ್ಣ ಧ್ವಂಸಗೊಂಡಿದೆ ಎಂದು ಅಮೆರಿಕ ರಾಯಭಾರ ಕಚೇರಿ ತನ್ನ ನಾಗರೀಕರಿಗೆ ನೊಟೀಸ್ ನೀಡಿದೆ.
Ukraine: We urge U.S citizens to depart now by private options, if safe. Consider routes & risk. Many Polish land border crossings & main Moldavian crossings have long waits. We recommend Hungary, Romania & Slovakia border crossings. Waits may be hours. https://t.co/HrERGevtVz pic.twitter.com/oRJdmIxf9k
— Travel - State Dept (@TravelGov)ಭಾರತದ ರಾಯಭಾರ ಕಚೇರಿ ನೀಡಿರುವ ನೊಟೀಸ್ ಹೋಲಿಕೆ ಮಾಡಿದರೆ ಭಾರತ ಹಾಗೂ ಅಮೆರಿಕ ಸರ್ಕಾರದ ನಡೆ ಹಾಗೂ ಕಾರ್ಯಗಳ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತಿದೆ. ಭಾರತದ ನಾಗೀರಕರನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ಉಕ್ರೇನ್ ಅಧಿಕಾರಿಗಳು ಉಕ್ರೇನ್ ನಾಗರೀಕರು ಹಾಗೂ ಖುದ್ದು ಭಾರತೀಯ ನಾಗರೀಕರು ಅಭೂತಪೂರ್ವ ಬೆಂಬಲ ನೀಡಿದ್ದಾರೆ. ರಕ್ಷಣಾ ಕಾರ್ಯ ಮುಂದುವರಿದಿದೆ. ಎಲ್ಲಾ ಭಾರತೀಯ ನಾಗರೀಕರು ಶಾಂತಿಯಿಂದ ಒಗ್ಗಟ್ಟಿನಿಂದ ಇರಬೇಕಾಗಿ ವಿನಿಂತಿಸುತ್ತೇವೆ ಎಂದು ಭಾರತೀಯ ರಾಯಭಾರ ಕಚೇರಿ ಹೇಳಿದೆ.
ಕೀವ್ ನಗರದಲ್ಲಿ ಸಾಲು ಗಟ್ಟಿ ಜನ ನಿಂತಿರುವ ಕಾರಣ ಪ್ರಯಾಣ ವಿಳಂಭವಾಗಬಹುದು. ರೈಲು ವಿಳಂಭವಾಗುವ ಸಾಧ್ಯತೆ ಇದೆ. ಆದರೆ ಭಾರತೀಯ ನಾಗರೀಕರು ತಾಳ್ಮೆ ಕಳೆದುಕೊಳ್ಳಬೇಡಿ. ರೈಲು ನಿಲ್ದಾಣದಲ್ಲಿ ಆಕ್ರಮಣಕಾರಿಯಾಗಿ ವರ್ತಿಸಬೇಡಿ. ಈಗಾಗಲೇ ಉಚಿತ ರೈಲುಗಳನ್ನು ನಿಯೋಜಿಸಲಾಗಿದೆ ಎಂದು ಭಾರತೀಯ ಧೂತವಾಸ ಕಚೇರಿ ಉಕ್ರೇನ್ ನಾಗರೀಕರಲ್ಲಿ ಮನವಿ ಮಾಡಿದೆ.