PoK retrieve;ಪಾಕ್ ಆಕ್ರಮಿತ ಕಾಶ್ಮೀರ ಹಿಂಪಡೆಯುವುದೇ ಮುಂದಿನ ಅಜೆಂಡಾ; ಕೇಂದ್ರದ ಹೇಳಿಕೆಗೆ ಪಾಕಿಸ್ತಾನ ತಲ್ಲಣ!

By Suvarna News  |  First Published Nov 22, 2021, 12:45 AM IST
  • ದೇಶದಲ್ಲಿ ಸಂಚಲನ ಮೂಡಿಸಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿಕೆ
  • ಮೀರಪುರ ಬಲಿದಾನ ದಿವಸ್ ಕಾರ್ಯಕ್ರಮದಲ್ಲಿ ಸ್ಫೋಟಕ ಹೇಳಿಕೆ
  • ಪಾಕ್ ಆಕ್ರಮಿತ ಕಾಶ್ಮೀರ ವಾಪಸ್ ಪಡೆಯುತ್ತೇವೆ ಎಂದ ಸಚಿವ

ನವದೆಹಲಿ(ನ.21):  ರಕ್ಷಣಾ ಕ್ಷೇತ್ರದಲ್ಲಿನ(Defence sector) ಮಹತ್ತರ ಬದಲಾವಣೆ, ಶಸ್ತ್ರಾಸ್ತ್ರ ಖರೀದಿ ಹಾಗೂ ಗಡಿ ವಿಚಾರದಲ್ಲಿ ನರೇಂದ್ರ ಮೋದಿ(PM Narendra modi) ನೇತೃತ್ವದ ಕೇಂದ್ರ ಸರ್ಕಾರ ತೋರಿದ ಧೈರ್ಯ ಶತ್ರುದೇಶಗಳಲ್ಲಿ ನಡುಕ ಹುಟ್ಟಿಸಿದೆ. ಇದೀಗ ಕೇಂದ್ರ ಸಚಿವ ಜಿತೇಂದ್ರ ಸಿಂಗ್(Jitendra Singh) ನೀಡಿರುವ ಹೇಳಿಕೆ ಭಾರತ ಮಾತ್ರವಲ್ಲ ಪಾಕಿಸ್ತಾನದಲ್ಲೂ ಸಂಚಲನ ಮೂಡಿಸಿದೆ. ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರವನ್ನು(PoK) ಹಿಂಪಡೆಯುವುದೇ ಕೇಂದ್ರ ಸರ್ಕಾರದ ಮುಂದಿನ ಅಜೆಂಡಾ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಮೀರಪುರ್ ಬಲಿದಾನ ದಿವಸ(Mirpur Balidan Diwas) ಕಾರ್ಯಕ್ರಮದಲ್ಲಿ ಮಾತನಾಡಿದ ಜಿತೇಂದ್ರ ಸಿಂಗ್, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನ ಆರ್ಟಿಕಲ್ 370 ರದ್ದು(Article 370) ಮಾಡುವ ಸಾಮರ್ಥ್ಯವಿದ್ದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯುತ್ತೇವೆ ಎಂದು ಸಿಂಗ್ ಹೇಳಿದ್ದಾರೆ. ಇದೇ ವೇಳೆ ಸರ್ದಾರ್ ವಲ್ಲಭಾಯಿ ಪಟೇಲ್‌ಗೆ ಮುಕ್ತ ನಿರ್ಧಾರಕ್ಕೆ ಅವಕಾಶ ನೀಡಿದ್ದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸಮಸ್ಯೆ ಸೃಷ್ಟಿಯಾಗುತ್ತಿರಲಿಲ್ಲ ಎಂದು ಕಾಂಗ್ರೆಸ್ ಸರ್ಕಾರ ಹಾಗೂ ಜವಾಹರ್ ಲಾಲ್ ತೆಗೆದುಕೊಂಡು ತಪ್ಪು ನಿರ್ಧಾರವನ್ನು ಕುಟಕಿದ್ದಾರೆ.

Tap to resize

Latest Videos

undefined

ಮುಂದೊಂದು ದಿನ ಸಂಪೂರ್ಣ ಕಾಶ್ಮೀರ ನಮ್ಮ ವಶವಾಗಲಿದೆ: ವಾಯುಪಡೆ ಅಧಿಕಾರಿ!

ಪಾಕ್ ಆಕ್ರಮಿತ ಕಾಶ್ಮೀರ ಹಿಂಪಡೆಯುವ ಅವಶ್ಯಕತೆ ಇದೆ. ಕಾರಣ ನಮ್ಮ ಸಹೋದರರು PoKಯಲ್ಲಿ ಅಮಾನವೀಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ವಸತಿ, ಆಹಾರ, ಶಿಕ್ಷಣ, ಆಸ್ಪತ್ರೆ ಸೌಲಭ್ಯಗಳಿಲ್ಲದೆ ನರಳಾಡುತ್ತಿದ್ದಾರೆ. ಅವರಿಗೆ ಮೂಲಭೂತ ಸೌಕರ್ಯಗಳನ್ನು ನಿರಾಕರಿಸಲಾಗಿದೆ. ಭಯೋತ್ಪಾದಕರು, ಪಾಕಿಸ್ತಾನ ಸೇನೆ, ಪಾಕಿಸ್ತಾನ(Pakistan) ಸರ್ಕಾರದ ಕ್ರೂರ ಆಡಳಿತಕ್ಕೆ ನಲುಗಿ ಹೋಗಿದ್ದಾರೆ. ಅವರ ಬದುಕು ಹಸನಾಗಿಸಬೇಕಿದೆ. ಅವರಿಗೆ ಎಲ್ಲಾ ಸೌಲಭ್ಯಗಳು ಸಿಗಬೇಕಿದೆ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ(Jammu and Kashmir) ವಿಶೇಷ ಸ್ಥಾನಮಾನ ಆರ್ಟಿಕಲ್ 370 ತೆಗೆಯಲು ಸಾಧ್ಯವೇ ಇಲ್ಲ. ಸಂವಿಧಾನ, ಕಾನೂನು ಅನುಮತಿಸುವಿದಿಲ್ಲ. ಈಗೇನಿದ್ದರೂ ಅನುಭವಿಸಲೇಬೇಕು ಅನ್ನೋ ಮಾತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ತೋರಿದ ಧೈರ್ಯ ಸ್ವತಂತ್ರ ಭಾರತದಲ್ಲಿ ಯಾವ ಪ್ರಧಾನಿ ಹಾಗೂ ಸರ್ಕಾರ ತೋರಿಲ್ಲ. ಅಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಆರ್ಟಿಕಲ್ 370 ರದ್ದು ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದಾರೆ. ಅಸಾಧ್ಯ ಎಂಬುದು ಸಾಧ್ಯವಾಗಿದ್ದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಕೂಡ ಭಾರತದ ಭಾಗ ಆಗಲಿದೆ. ಅನುಮಾನ ಬೇಡ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.

Terror Attack: ಶ್ರೀನರದಲ್ಲಿ ಉಗ್ರರ ಗುಂಡಿನ ದಾಳಿಗೆ 29 ವರ್ಷದ ಪೊಲೀಸ್ ಹುತಾತ್ಮ!

ಭಾರತ ವಿಭಜನೆ ಅತೀ ದೊಡ್ಡ ದುರಂತ. ಈ ವಿಭಜನೆಯಲ್ಲಿ ಭಾರತ ಅನುಭವಿಸಿದ ನೋವು ಮಾತಿನಲ್ಲಿ ಕಟ್ಟಿಕೊಡಲು ಅಸಾಧ್ಯ. ಇನ್ನು ಜಮ್ಮು ಮತ್ತು ಕಾಶ್ಮೀರದ ಎರಡನೇ ದುರಂತ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಕೈವಶ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.  ಜಮ್ಮು ಮತ್ತು ಕಾಶ್ಮೀರದ ಉಧಮಪುರ ಕ್ಷೇತ್ರದ ಸಂಸದ ಜಿತೇಂದ್ರ ಸಿಂಗ್, ಸ್ವಾತಂತ್ರ ಭಾರತದಲ್ಲಿ ಕಾಂಗ್ರೆಸ್ ಮಾಡಿದ ಮಹಾ ಎಡವಟ್ಟುಗಳನ್ನು ಹೇಳಿದ್ದಾರೆ.  

ಸ್ವಾತಂತ್ರ್ಯ ಭಾರತದಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ 560ಕ್ಕೂ ಹೆಚ್ಚು ರಾಜಪ್ರಭುತ್ವ ರಾಜ್ಯ ಹಾಗೂ ಪ್ರದೇಶಗಳನ್ನು ಯಶಸ್ವಿಯಾಗಿ ಭಾರತಕ್ಕೆ ಸೇರಿಸಿದರು.  ಆದರೆ ಜಮ್ಮ ಮತ್ತು ಕಾಶ್ಮೀರದ ವಿಚಾರದಲ್ಲಿ ಸರ್ದಾರ್ ವಲ್ಲಬಾಯಿ ಪಟೇಲರನ್ನು ದೂರವಿರಿಸಿದರು. ಎಲ್ಲಾ ಕ್ರೆಡಿಟ್ ತನಗೆ ಬೇಕು ಎಂದ ನೆಹರೂ ಧೈರ್ಯದಿಂದ ಏನೂ ಮಾಡಲಾಗದೆ ಕೈಕಟ್ಟಿ ಕುಳಿತರು. 1947ರಲ್ಲಿ ಪಾಕಿಸ್ತಾನ ದಾಳಿ ಮಾಡಿದಾಗಲೂ ನೆಹರೂ ಸೇನೆ ಕಳುಹಿಸಲು ಹಿಂದೇಟು ಹಾಕಿದ್ದರು. ಆದರೆ ದಿಟ್ಟ ಪೇಟಲ್ ನಿರ್ಧಾರದಿಂದ ಸಿಖ್ ರೆಜಿಮೆಂಟ್ ಶ್ರೀನಗರಕ್ಕೆ ಬಂದಿಳಿಯಿತು. ಮತ್ತೆ ನಡೆಸಿದಿದ್ದು ಇತಿಹಾಸ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.

click me!