Saayoni Ghosh Arrest: ಕೊಲೆ ಯತ್ನ ಆರೋಪದಡಿ ತೃಣಮೂಲ ಯೂಥ್ ಕಾಂಗ್ರೆಸ್ ಅಧ್ಯಕ್ಷೆ ಬಂಧನ!

By Suvarna NewsFirst Published Nov 21, 2021, 7:54 PM IST
Highlights
  • ಕೊಲೆ ಯತ್ನ ಆರೋಪ, ತೃಣಮೂಲಕ ನಾಯಕಿಗೆ ಸಂಕಷ್ಟ
  • ತೃಣಮೂಲ ಯೂಥ್ ಕಾಂಗ್ರೆಸ್ ಅಧ್ಯಕ್ಷೆ ಸಾಯೋನಿ ಘೋಷ್ ಅರೆಸ್ಟ್
  • ಘೋಷ್ ಬಂಧಿಸಿದ ತ್ರಿಪುರಾ ಪೊಲೀಸ್, ರಾಜಕೀಯ ಕಚ್ಚಾಟ ಆರಂಭ

ತ್ರಿಪುರ(ನ.21):  ತೃಣಮೂಲ ಯೂಥ್ ಕಾಂಗ್ರೆಸ್ ಅಧ್ಯಕ್ಷೆ(Trinamool Youth Congress ), ಬಂಗಾಳಿ ನಟಿ ಸಾಯೋನಿ ಘೋಷ್‌(Saayoni Ghosh) ಅರೆಸ್ಟ್ ಆಗಿದ್ದಾರೆ. ಕೊಲೆ ಯತ್ನ ಆರೋಪಗಡಿ ತ್ರಿಪುರಾ ಪೊಲೀಸರು(Tripura Police) ಸಾಯೋನಿ ಘೋಷ್ ಬಂಧಿಸಿದ್ದಾರೆ. ಅರೆಸ್ಟ್ ಆಗಿರುವ ಸಾಯೋನಿ ಘೋಷ್ ಅವರನ್ನು ಸೋಮವಾರ(ನ.22) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತ್ರಿಪುರಾ ಪೊಲೀಸರು ಹೇಳಿದ್ದಾರೆ.

ಪ್ರಾಥಮಿಕ ಸಾಕ್ಷ್ಯಗಳ ಆಧಾರದಲ್ಲಿ ಸಾಯೋನಿ ಘೋಷ್ ಅವರನ್ನು ಬಂಧಿಸಲಾಗಿದೆ.  ಐಪಿಸಿ ಸೆಕ್ಷನ್ 307, 153ರ ಅಡಿ ಪ್ರಕರಣ ದಾಖಲಿಸಿದ್ದೇವೆ ಎಂದು ಪಶ್ಚಿಮ ತ್ರಿಪುರಾ SP ಬಿಜೆ ರೆಡ್ಡಿ ಹೇಳಿದ್ದಾರೆ. ಕೊಲೆ ಯತ್ನ ಆರೋಪ(Attempt to murder charges) ಸಾಯೋನಿ ಘೋಷ್ ಮೇಲಿದೆ. ಈ ಪ್ರಕರಣ ಇದೀಗ ರಾಜಕೀಯ(Politics) ಬಣ್ಣ ಪಡೆದುಕೊಂಡಿದೆ. ತ್ರಿಪುರಾದಲ್ಲಿ ನಡೆದ ಬಿಜೆಪಿ(BJP) ಹಾಗೂ ಟಿಎಂಸಿ(TMC) ಕಾರ್ಯಕರ್ತರ ನಡುವಿನ ಜಟಾಪಟಿ ಬೆನ್ನಲ್ಲೇ ಇದೀಗ ತ್ರಿಪುರ ಬಿಜೆಪಿ(Tripura Bjp) ಈ ನಡೆ ರಾಜಕೀಯ ಪ್ರೇರಿತ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.

RSS ಅವಹೇಳನ, ಕಲ್ಲು ತೂರಾಟ: ಸವಣೂರು ಉದ್ವಿಗ್ನ

ಸಾಯೋನಿ ಘೋಷ್ ಬಂಧನ ಕುರಿತು ಟಿಎಂಸಿ(TMC) ಹೇಳುತ್ತಿರುವುದೇ ಬೇರೆ.  ತ್ರಿಪುರ ಟಿಎಂಸಿ ರ್ಯಾಲಿ ಬಳಿಕ ಹೊಟೆಲ್ ರೂಂನಲ್ಲಿ ತಂಗಿದ್ದ ಸಾಯೋನಿ ಘೋಷ್ ವಿಚಾರಿಸಿ ಕೆಲ ಮಹಿಳಾ ಪೊಲೀಸರು ಆಗಮಿಸಿದ್ದಾರೆ. ರ್ಯಾಲಿ ವೇಳೆ ನಡೆದಿದ್ದ ಸಂಘರ್ಷ ಕುರಿತು ವಿಚಾರಣೆ ನಡೆಸಬೇಕಿದೆ ಎಂದಿ ಮಹಿಳಾ ಪೊಲೀಸರು ಸಾಯೋನಿ ಘೋಷ್ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ ವಾಪಸ್ ಬರದ ಕಾರಣ ಕಾರ್ಯಕರ್ತರು ಪೊಲೀಸ್ ಠಾಣೆ ತಲುಪಿದಾಗ ಸಾಯೋನಿ ಘೋಷ್ ಅವರನ್ನು ಅರೆಸ್ಟ್(Arrest) ಮಾಡಲಾಗಿದೆ ಎಂಬುದು ತಿಳಿದಿದೆ. ಕೊಲೆ ಯತ್ನ ಆರೋಪ, ಬಿಜೆಪಿ ಕಾರ್ಯಕರ್ತರ ವಿರುದ್ಧ ನಿಂದನೆ, ಕಾರ್ಯಕರ್ತರನ್ನು ಓಡಿಸುವ ಯತ್ನ ಸೇರಿದಂತೆ ಹಲವು ಆರೋಪಗಳು ಇದೀಗ ಸಾಯೋನಿ ಘೋಷ್ ಮೇಲಿದೆ ಎಂದು ಟಿಎಂಸಿ ಹೇಳಿದೆ.

ಶನಿವಾರ(ನ.20) ಸಾಯೋನಿ ಘೋಷ್ ತ್ರಿಪುರಾದಲ್ಲಿ ತಮ್ಮ ವಾಹನದ ಮೂಲಕ ತೆರಳಿದ್ದಾರೆ. ಈ ವೇಳೆ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್(Biplab deb) ಅವರ ಸಮಾವೇಶ ನಡೆಯುತ್ತಿದ್ದ ದಾರಿಯಲ್ಲಿ ಸಾಗಿದ್ದಾರೆ. ದೇಬ್ ಭಾಷಣ ನಡೆಯುತ್ತದ್ದ ವೇಳೆ ಹೊರಗಡೆ ನಿಂತಿದ್ದ ಕಾರ್ಯಕರ್ತರನ್ನು ಘೋಷ್ ನಿಂದಿಸಿದ್ದಾರೆ. ಕಾರ್ಯಕರ್ತರನ್ನು ಅಪಹಾಸ್ಯ ಮಾಡಿದ ಸಾಯೋನಿ ಘೋಷ್ ವಿರುದ್ಧ ಕಾರ್ಯಕರ್ತ ಅಸಮಾಧಾನಗೊಂಡಿದ್ದಾರೆ.

ಪೊಲೀಸ್ ಠಾಣೆಗೆ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಟಿಎಂಸಿ ಕಾರ್ಯಕರ್ತರು ಗಾಯಗೊಂಡಿದ್ದಾರೆ. ದಾಳಿ ವೇಳೆ ಸಾಯೋನಿ ಘೋಷ್ ಕೂಡ ಠಾಣೆಯಲ್ಲಿದ್ದರು. ಇದು ಗೂಂಡಾ ರಾಜ್ಯ ಎಂದು ಟಿಎಂಸಿ ಆರೋಪಿಸಿದೆ. ಪೊಲೀಸರ ಮುಂದೆ ಬಿಜೆಪಿ ಕಾರ್ಯಕರ್ತರು ಈ ರೀತಿ ಅಕ್ರಮ ಮಾಡಿದ್ದಾರೆ. ಹಲ್ಲೆ ಮಾಡಿದ್ದಾರೆ. ಆದರೆ ಪೊಲೀಸರು ಹಾಗೂ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳುವ ಬದಲು ಬೆಂಬಲಕ್ಕೆ ನಿಂತಿದೆ ಎಂದು ಟಿಎಂಸಿ ಆರೋಪಿಸಿದೆ.

Tripura Violence; ಅಮರಾವತಿಯಲ್ಲಿ ಮತ್ತೆ ಹಿಂಸಾಚಾರ : 4 ದಿನಗಳ ಕರ್ಫ್ಯೂ,ಇಂಟರ್‌ನೆಟ್ ಬಂದ್!

ಇತ್ತ ಬಿಜೆಪಿ ಹಾಗೂ ಪೊಲೀಸರು ಹೇಳುತ್ತಿರುವುದೇ ಬೇರೆ. ಸಾಯೋನಿ ಘೋಷ್ ಅವರನ್ನು ಅರೆಸ್ಟ್ ಮಾಡಿದ ಕಾರಣ ರ್ಯಾಲಿಗೆ ಆಗಮಿಸಿದ ಟಿಎಂಸಿ ಕಾರ್ಯಕರ್ತರು ನೇರವಾಗಿ ಠಾಣೆಗ ಆಗಮಿಸಿ ಹಲ್ಲೆಗೆ ಮುಂದಾಗಿದ್ದಾರೆ. ಟಿಎಂಸಿ ಕಾರ್ಯಕರ್ತರನ್ನು ಪೊಲೀಸರು ಲಾಠಿ ಬೀಸುವ ಮೂಲಕ ಚದುರಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.  ಈಘಟನೆ ಬೆನ್ನಲ್ಲೇ ತ್ರಿಪುರಾದಲ್ಲಿ ಹಂಗಾಮ ಸೃಷ್ಟಿಸಲು ಟಿಎಂಸಿ ಸಜ್ಜಾಗಿದೆ. ಆದರೆ ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿಗೆ ತ್ರಿಪುರ ಪ್ರೇವಶ ನಿರಾಕರಿಸಲಾಗಿದೆ. ಇದೀಗ ಬಿಜೆಪಿ ಹಾಗೂ ಟಿಎಂಸಿ ನಡುವೆ ಬಾರಿ ರಾಜಕೀಯ ಕಚ್ಚಾಟಕ್ಕೆ ಕಾರಣವಾಗಿದೆ.
 

click me!