Mann ki Baat; ಕೋಲಾರದ ಬೃಹತ್ ತ್ರಿವರ್ಣ ಧ್ವಜ ಬಗ್ಗೆ ಮೋದಿ ಶ್ಲಾಘನೆ

By Gowthami K  |  First Published Aug 28, 2022, 2:26 PM IST

ಮೋದಿ ಅವರು ಆಗಸ್ಟ್ 28 ರಂದು ದೇಶವನ್ನು ಉದ್ದೇಶಿಸಿ ಮನ್ ಕೀ ಬಾತ್ ನ 92 ನೇ ಆವೃತ್ತಿಯಲ್ಲಿ ಮಾತನಾಡಿದ್ದಾರೆ. ಸ್ವಾತಂತ್ರ್ಯದ  ಅಮೃತಮಹೋತ್ಸವ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಅನಾವರಣಗೊಳಿಸಿದ ತ್ರಿವರ್ಣ ಧ್ವಜ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 28 ರಂದು ದೇಶವನ್ನು ಉದ್ದೇಶಿಸಿ ಮನ್ ಕೀ ಬಾತ್ ನ 92 ನೇ ಆವೃತ್ತಿಯಲ್ಲಿ ಮಾತನಾಡಿದ್ದಾರೆ. ಸ್ವಾತಂತ್ರ್ಯದ  ಅಮೃತಮಹೋತ್ಸವ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಅನಾವರಣಗೊಳಿಸಿದ ತ್ರಿವರ್ಣ ಧ್ವಜ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕೋಲಾರದಲ್ಲಿ ಆ.15 ಕ್ಕೆ ದೇಶದಲ್ಲೇ ಅತಿದೊಡ್ಡ 1.30 ಲಕ್ಷ ಚದರಡಿಯ ಬೃಹತ್ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಲಾಗಿತ್ತು.  ಕೋಲಾರ ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ಮೂಡಿದ‌ ತ್ರಿವರ್ಣ ಧ್ವಜ. 204 ಅಡಿ ಉದ್ದ 630 ಅಡಿ ಅಗಲ ಇತ್ತು. ಜೊತೆಗೆ  ಲಿಮ್ಕಾ‌ ದಾಖಲೆ ಸಹ ಬರೆದಿತ್ತು. ಮೋದಿ ಈ ಕುರಿತು ತಮ್ಮ‌ ಮನ್‌ ಕೀ ಬಾತ್ ನಲ್ಲಿ  ಮಾತನಾಡಿದ್ದು, ಮೋದಿಯ ಶ್ಲಾಘನೆಗೆ  ಸಂಸದ‌ ಎಸ್. ಮುನಿಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.  ಸುಮಾರು 25ಕ್ಕೂ ಹೆಚ್ಚಿನ ಕಾರ್ಮಿಕರು ಈ ಧ್ವಜ ನಿರ್ಮಾಣ ಮಾಡಿದ್ದಾರೆ. ಒಂದಲ್ಲ ಎರಡಲ್ಲಾ ಹತ್ತಾರು ವಿಶೇಷಗಳನ್ನು ಹೊಂದಿರುವ ಈ ಬೃಹತ್​ ತ್ರಿವರ್ಣ ಧ್ವಜ ಒಟ್ಟು 1.30 ಲಕ್ಷ ಚದರಡಿ ವಿಸ್ತೀರ್ಣ ಹೊಂದಿದೆ. ಇನ್ನು ಧ್ವಜ ಮೇಲಿನ ಅಶೋಕ ಚಕ್ರ 60-60 ಅಂದರೆ 3400 ಚದರಡಿ ವಿಸ್ತೀರ್ಣ ಹೊಂದಿದೆ.

ಇನ್ನು ಈ ಧ್ವಜ ನಿರ್ಮಾಣಕ್ಕಾಗಿ ಸುಮಾರು 13,000 ಮೀಟರ್ ಬಟ್ಟೆ ಬಳಸಲಾಗಿದೆ. ಸುಮಾರು 3 ಟನ್​ ನಷ್ಟ ತೂಕ ಹೊಂದಿರುವ ಈ ಧ್ವಜ ದೇಶದಲ್ಲೇ ಅತಿ ದೊಡ್ಡದಾದ ತ್ರಿವರ್ಣ ಧ್ವಜ ಎಂಬ ಹೆಗ್ಗಳಿಕೆ ಹೊಂದಿದೆ, ಅಷ್ಟೇ ಅಲ್ಲದೆ ಇದು ಕೈಯಿಂದ ನಿರ್ಮಾಣ ಮಾಡಲಾಗಿರುವ ರಾಷ್ಟ್ರಧ್ವಜ ಎಂಬ ಹೆಗ್ಗಳಿಕೆ ಕೂಡಾ ಇದಕ್ಕಿದೆ. ಹಾಗಾಗಿಯೇ ಇದನ್ನು  ಲಿಮ್ಕಾ ಬುಕ್​ ಆಫ್​ ರೆಕಾರ್ಡ್​ಗೂ ಸೇರಿಸಲಾಗಿದೆ. ಆಗಸ್ಟ್​-15 ರಂದು ಕೋಲಾರದ ಸರ್​.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಈ ಬೃಹತ್​ ಧ್ವಜವನ್ನು ಅನಾವರಣ ಮಾಡಲಾಗಿತ್ತು, ಈ ಧ್ವಜ ಹಿಡಿದುಕೊಳ್ಳಲು 2000 ಜನರನ್ನು ನೇಮಿಸಲಾಗಿತ್ತು.

Latest Videos

undefined

ಮಿಕ್ಕಂತೆ ಮನ್ ಕೀ ಬಾತ್ ನಲ್ಲಿ   ಪ್ರಧಾನಿ ಮೋದಿ,   ಅಪೌಷ್ಟಿಕತೆಯನ್ನು ಹೋಗಲಾಡಿಸಲು ಪ್ರಯತ್ನಿಸುವಂತೆ ದೇಶದ ಜನರಲ್ಲಿ ಮನವಿ ಮಾಡಿಕೊಂಡರು. ಮತ್ತು ಸಾಮಾಜಿಕ ಜಾಗೃತಿ ಈ ಹೋರಾಟದ ನಿರ್ಣಾಯಕ ಅಂಶವಾಗಿದೆ ಎಂದು ಒತ್ತಿ ಹೇಳಿದರು. ತಮ್ಮ ಮಾಸಿಕ 'ಮನ್ ಕಿ ಬಾತ್' ರೇಡಿಯೋ ಪ್ರಸಾರದಲ್ಲಿ, ಶ್ರೀ ಮೋದಿ ಅವರು ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ಗುರುತಿಸುವ 'ಅಮೃತ ಮಹೋತ್ಸವ'ದ 'ಅಮೃತ್ ಧಾರ' ಈ ತಿಂಗಳಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ಹರಿಯುತ್ತಿದೆ ಎಂದು ಹೇಳಿದರು. ಅಮೃತ ಮಹೋತ್ಸವ ಮತ್ತು ಸ್ವಾತಂತ್ರ್ಯ ದಿನದ ವಿಶೇಷ ಸಂದರ್ಭದಲ್ಲಿ ನಾವು ದೇಶದ ಸಾಮೂಹಿಕ ಶಕ್ತಿಯನ್ನು ನೋಡಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

ಕನ್ನಡಪ್ರಭ ಬಿಸಿನೆಸ್‌ ಅವಾರ್ಡ್‌ ವಿಜೇತ, ಶಿರಸಿಯ ಜೇನು ಕೃಷಿಕನಿಗೆ ಮೋದಿ ಪ್ರಶಂಸೆ

ಹಬ್ಬಗಳ ಜೊತೆಗೆ, ಸೆಪ್ಟೆಂಬರ್ ಅನ್ನು ಪೌಷ್ಟಿಕಾಂಶಕ್ಕೆ ಸಂಬಂಧಿಸಿದ ದೊಡ್ಡ ಅಭಿಯಾನಕ್ಕೆ ಸಮರ್ಪಿಸಲಾಗಿದೆ. ನಾವು ಸೆಪ್ಟೆಂಬರ್ 1 ಮತ್ತು 30 ರ ನಡುವೆ ‘ಪೋಶನ್ ಮಾ’ ಅಥವಾ ಪೌಷ್ಟಿಕಾಂಶದ ತಿಂಗಳು ಆಚರಿಸೋಣ ಎಂದು ಮೋದಿ ಹೇಳಿದರು. ಅಪೌಷ್ಟಿಕತೆಯ ವಿರುದ್ಧ ಅನೇಕ ಸೃಜನಶೀಲ ಮತ್ತು ವೈವಿಧ್ಯಮಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ತಂತ್ರಜ್ಞಾನದ ಉತ್ತಮ ಬಳಕೆ ಮತ್ತು ಸಾರ್ವಜನಿಕ ಸಹಭಾಗಿತ್ವವು ‘ಪೋಷನ್ ಅಭಿಯಾನ’ದ ಪ್ರಮುಖ ಭಾಗವಾಗಿದೆ. ಭಾರತವನ್ನು ಅಪೌಷ್ಟಿಕತೆ ಮುಕ್ತ ಮಾಡುವಲ್ಲಿ ‘ಜಲ್ ಜೀವನ್’ ಮಿಷನ್ ದೊಡ್ಡ ಪರಿಣಾಮ ಬೀರಲಿದೆ ಎಂದು ಅವರು ಹೇಳಿದರು.

India@75: ಕೋಲಾರದಲ್ಲಿ ಲಿಮ್ಕಾ ದಾಖಲೆ ಸೇರಿದ ರಾಷ್ಟ್ರಧ್ವಜ

ದೂರದರ್ಶನದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳನ್ನು ಎತ್ತಿ ತೋರಿಸುವ ‘ಸ್ವರಾಜ್’ ಧಾರಾವಾಹಿಯನ್ನು ವೀಕ್ಷಿಸುವಂತೆ ಪ್ರಧಾನಿ ಜನರಲ್ಲಿ ಮನವಿ ಮಾಡಿಕೊಂಡರು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಅಪ್ರತಿಮ ವೀರರ ಶ್ರಮವನ್ನು ದೇಶದ ಯುವ ಪೀಳಿಗೆಗೆ ಪರಿಚಯಿಸಲು ಇದು ಉತ್ತಮ ಉಪಕ್ರಮವಾಗಿದೆ ಎಂದು ಅವರು ಹೇಳಿದರು.

click me!