ತುರ್ತು ಪರಿಸ್ಥಿತಿಯಲ್ಲಿ ನುಂಗಲಾರದ ತುತ್ತಾದ ಸಂಜಯ್ ಗಾಂಧಿ !

By Suvarna NewsFirst Published Jun 27, 2020, 10:37 PM IST
Highlights

ಕಾಂಗ್ರೆಸ್ ಹಾಗೂ ಸರ್ಕಾರವನ್ನು ನಿಯಂತ್ರಿಸುತ್ತಿದ್ದ ಪ್ರಧಾನಿ ಇಂದಿರಾ ಗಾಂಧಿಗೆ ಪುತ್ರ ಸಂಜಯ್ ಗಾಂಧಿ ಕೂಡ ಸಾಥ್ ನೀಡಿದ್ದರು. ಸಂಜಯ್ ಗಾಂಧಿ ರಾಜಕೀಯದಲ್ಲಿ ಬಹುದೊಡ್ಡ ಶಕ್ತಿಯಾಗಿ ಬೆಳೆಯಲು ಆರಂಭಿಸಿದರು. ಆದರೆ ಅನುಭವ ಪಕ್ವತೆ ಇಲ್ಲದ ಸಂಜಯ್ ಗಾಂಧಿ ಮಾಡಿದ ಹಲವು ತಪ್ಪುಗಳು ಕಾಂಗ್ರೆಸ್‌ಗ ಮುಳ್ಳಾಯಿತು. ಇಂದಿರಾ ಹೇರಿದ್ದ ತುರ್ತು ಪರಿಸ್ಥಿತಿಯಲ್ಲಿ ಸಂಜಯ್ ಗಾಂಧಿ ಮಾಡಿದ ನರಮೇಧ ಎಲ್ಲೂ ಸುದ್ದಿಯಾಗದೇ ಇತಿಹಾಸ ಪುಟ ಸೇರಿತು.
 

ಸ್ವಾತಂತ್ರ್ಯ ನಂತರ ದೇಶದ ಚುಕ್ಕಾಣಿ ಹಿಡಿದ ಕಾಂಗ್ರೆಸ್, ಹಳ್ಳ ಹಿಡಿದಿದ್ದ ದೇಶದ ಆರ್ಥಿಕ ಪರಿಸ್ಥಿತಿ, ಬಡತನ, ಸಾಮಾಜಿಕ ಪಿಡುಗು, ಮೂಡನಂಬಿಕೆ ಸೇರಿದಂತೆ ಸಾಲು ಸಾಲು ಸವಾಲುಗಳನ್ನು ಹೊಡೆದೊಡಿಸುವ ಬದಲು ಪಕ್ಷ ಹಾಗೂ ತಮ್ಮ ಅಧಿಕಾರ ಉಳಿಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಿತು.  ಹೀಗಾಗಿ ಮೂಲಭೂತ ಸೌಕರ್ಯ, ಅಭಿವೃದ್ಧಿ ಸೇರಿದಂತೆ ಹೊಸ ಭಾರತ ಪುಟಿದೇಳಲೇ ಇಲ್ಲ. 1970ರ ದಶಕದ ಆರಂಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಇಂದಿರಾ ಗಾಂಧಿಯವರ ಪ್ರಾಬಲ್ಯ ಹೆಚ್ಚಾಗಿತ್ತು. ಸರ್ಕಾರದ ಜೊತೆಗೆ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಿದ್ದ ಇಂದಿರಾಗೆ, ಪುತ್ರ ಸಂಜಯ್ ಗಾಂಧಿ ಕೂಡ ಸಾಥ್ ನೀಡಿದ್ದರು.

ವಿಧಿಯ ಕೈವಾಡ ಆ ವರ್ಷ 2 ದುರಂತ ನಡೆಯಿತು; ಶಾಸ್ತ್ರಿ ನಿಧನರಾದರು, ಇಂದಿರಾ ಪ್ರಧಾನಿಯಾದರು!

ಕಾಂಗ್ರೆಸ್ ಪಕ್ಷದಲ್ಲಿ ಇಂದಿರಾ ಗಾಂಧಿ ಪ್ರಭಾವ ಹೆಚ್ಚಾಗುತ್ತಿದ್ದಂತೆ, ಪುತ್ರ ಸಂಜಯ್ ಗಾಂಧಿ ಕೂಡ ರಾಜಕೀಯದತ್ತ ಚಿತ್ತ ಹರಿಸಿದರು. ಇಷ್ಟೇ ಅಲ್ಲ ಆಡಳಿತದಲ್ಲಿ ಮೂಗು ತೂರಿಸಲು ಆರಂಭಿಸಿದರು. ಇತ್ತ ಇಂದಿರಾ ಗಾಂಧಿ ಕೈಗೆಟುಕುವ ದರದಲ್ಲಿ ಭಾರತೀಯರಿಗೆ ಕಾರು ಅನ್ನೋ ಹೊಸ ಯೋಜನೆಗೆ ಚಾಲನೆ ನೀಡಿದರು. ಇದಕ್ಕಾಗಿ ಮಾರುತಿ ಮೋಟಾರ್ಸ್(ಈಗಿನ ಮಾರುತಿ ಸುಜುಕಿ) ಜೊತೆ ಒಪ್ಪಂದ ಮಾಡಿಕೊಳ್ಳಲಾಯಿತು.  ರಾಜಕೀಯದಲ್ಲಿ ಸಕ್ರಿಯವಾದ ಸಂಜಯ್ ಗಾಂಧಿಯನ್ನು ಮಾರುತಿ ಯೋಜನೆಯ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.  

ಲಾಕ್‌ಡೌನ್ ನಿರ್ಬಂಧವೇ ಕಹಿಯಾಗಿದ್ದ ನಮಗೆ, 1975ರ ತುರ್ತು ಪರಿಸ್ಥಿತಿ ಊಹಿಸಲು ಸಾಧ್ಯವೇ?.

ರಾಜಕೀಯದಾಟ ಆರಂಭಿಸಿದ ಸಂಜಯ್
ಆಟೋಮೊಬೈಲ್ ಕ್ಷೇತ್ರದಲ್ಲಿ ಯಾವುದೇ ಅನುಭವ ಇಲ್ಲದ ಸಂಜಯ್ ಗಾಂಧಿ, ದೇಶದ ಜನರಿಗೆ ಕಾರು ತಲುಪಿಸುವ ಬದಲು ತನ್ನ ಸಂಬಂಧಿಕರನ್ನು, ಆಪ್ತರನ್ನು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ, ಪ್ರಮುಖ ಹುದ್ದೆಗಳಿಗೆ ನೇಮಿಸಲು ತಮ್ಮ ರಾಜಕೀಯ ಪ್ರಭಾವ ಬಳಸಿದರು. ಭೂಮಿ ಕಸಿದು ಕೊಳ್ಳಲು ಆರಂಭಿಸಿದರು.  ಸಂಜಯ್ ಗಾಂಧಿ ರಾಜಕೀಯದಲ್ಲಿ ಹಿಡಿತ ಸಾಧಿಸಲು ಆರಂಭಿಸಿದರು. ಪ್ರಧಾನಿ ಇಂದಿರಾ ಗಾಂಧಿ ನಿರ್ಧಾರಗಳ ಮೇಲೂ ಸಂಜಯ್ ಪ್ರಭಾವ ಬೀರಲು ಆರಂಭಿಸಿದರು. ಹೀಗಾಗಿ ಇಂದಿರಾ ಉತ್ತರಾಧಿಕಾರಿ ಎಂದೇ ಗುರುತಿಸಿಕೊಂಡಿದ್ದರು. 

ತುರ್ತುಸ್ಥಿತಿ ಘೋಷಣೆಗೆ 45 ವರ್ಷ: ಇಂದಿರಾಗೆ ಎಮರ್ಜೆನ್ಸಿ ಹೇರುವ ಸಲಹೆ ನೀಡಿದ್ದು ಯಾರು?..

ತುರ್ತು ಪರಿಸ್ಥಿತಿ ವೇಳೆ ಅಧಿಕಾರವನ್ನು ಆನಂದಿಸಿದ ಇಂದಿರಾ ಗಾಂಧಿ ಹಾಗೂ ಸಂಜಯ್ ಗಾಂಧಿ, ಸರ್ವಾಧಿಕಾರವನ್ನು ಭಾರತದಲ್ಲಿ ಶಾಶ್ವತವಾಗಿ ಜಾರಿಗೊಳಿಸಲು ಉದ್ದೇಶಿಸಿದ್ದರು. ಈ ಕುರಿತು ಕುಲದೀಪ್ ನಾಯರ್ ಜೊತೆಗಿನ ಸಂದರ್ಶನದಲ್ಲಿ ಸಂಜಯ್ ಗಾಂಧಿ ಬಹಿರಂಗ ಪಡಿಸಿದ್ದರು. ತಾತ್ಕಾಲಿಕವಾಗಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ವಿಸ್ತರಿಸಲು, ಪ್ರಜಾಪ್ರಭುತ್ವ ಸಂಸ್ಥೆಗಳನ್ನು ತೊಡೆದುಹಾಕಲು ಮತ್ತು ಇಂದಿರಾ ಅವರ ಸರ್ವಾಧಿಕಾರವನ್ನು ಶಾಶ್ವತವಾಗಿ ಸ್ಥಾಪಿಸಲು ಯೋಜನೆ ರೂಪಿಸಿರುವುದನ್ನು ಒಪ್ಪಿಕೊಂಡಿದ್ದರು.

fact Check: ಸೈನಿರನ್ನು ಉದ್ದೇಶಿಸಿ ಗಲ್ವಾನ್‌ನಲ್ಲಿ ಇಂದಿರಾ ಭಾಷಣ ಮಾಡಿದ್ರಾ?

ಯೂಥ್ ಕಾಂಗ್ರೆಸ್ ಸ್ಥಾಪಿಸಿದ ಸಂಜಯ್ ಗಾಂಧಿ
ಇಂದಿರಾ ಗಾಂಧಿ ಪ್ರಭಾವ ಬಳಸಿಕೊಂಡು ಸಂಜಯ್ ಗಾಂಧಿ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಹಿಡಿತ ಸಾಧಿಸಲು ಆರಂಭಿಸಿದರು. ಇದು ಕಾಂಗ್ರೆಸ್‌ನಲ್ಲಿ ಅಸಮಾಧಾನದ  ಕಿಡಿ ಹೊತ್ತಿಸಿತು. ಹೀಗಾಗಿ ಸಂಜಯ್ ಗಾಂಧಿ ಯುವ ಕಾಂಗ್ರೆಸ್ ಆರಂಭಿಸಿದರು. ಈ ಮೂಲಕ ಸಂಜಯ್ ಬಣ ಅಧೀಕೃತವಾಗಿ ಅಸ್ಥಿತ್ವಕ್ಕೆ ಬಂದಿತು.   ಇಂದಿರಾ ಗಾಂಧಿ ಒಲೈಕೆಯಲ್ಲಿ ಮುಳುಗಿದ್ದ ಕಾಂಗ್ರೆಸ್ ಹಿರಿಯ ನಾಯಕರು ತಮ್ಮ ನಿಷ್ಠೆಯನ್ನು ಬದಲಿಸಲಿಲ್ಲ. ಸಂಜಯ್ ಗಾಂಧಿ ಯೂಥ್ ಕಾಂಗ್ರೆಸ್ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳಲು ಆರಂಭಿಸಿದರು. ತುರ್ತು ಪರಿಸ್ಥಿತಿ ವೇಳೆ ಯೂಥ್ ಕಾಂಗ್ರೆಸ್ ರೌಡಿ ಕಾಂಗ್ರೆಸ್ ಎಂದೇ ಕುಖ್ಯಾತಿ ಪಡೆದಿತ್ತು. ಇದೇ ಯುವ ಶಕ್ತಿ ನಡತೆ ಇಂದಿರಾ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿತು.

ಮಾಜಿ ಪ್ರಧಾನಿ ಇಂದಿರಾರನ್ನು ಬಂಧಿಸಿದ್ದ ಮಾಜಿ IPS ಅಧಿಕಾರಿ ನಿಧನ!

ರಾಜಕೀಯದಲ್ಲಿ ತಾನು ಪ್ರಬಲ ಶಕ್ತಿಯಾಗಿ ಬೆಳೆಯಲು ಸಂಜಯ್ ಮಾಸ್ಟರ್ ಪ್ಲಾನ್ ಮಾಡಿದ್ದರು. ದಿಢೀರ್ ಆಗಿ ದೇಶದಲ್ಲಿ ಯೂತ್ ಕಾಂಗ್ರೆಸ್ ಗಟ್ಟಿಗೊಳಿಸಲು ರಾಷ್ಟ್ರವ್ಯಾಪಿ ಸದಸ್ಯರ ನೋಂದಣಿ ಆರಂಭಿಸಿದರು. ಯಾವುದೇ ಅರ್ಹತೆ ಇಲ್ಲ, ಮಾನದಂಡವಿಲ್ಲ, ಎಲ್ಲವೂ ಉಚಿತ ನೋಂದಣಿ ಅನ್ನೋ ಘೋಷಣೆಯಿಂದ ಕೆಲ ತಿಂಗಳಲ್ಲಿ ಯೂಥ್ ಕಾಂಗ್ರೆಸ್ ಸದಸ್ಯರ ಸಂಖ್ಯೆ 60 ಲಕ್ಷಕ್ಕೆ ಏರಿಕೆಯಾಯಿತು. 

ಯೂಥ್ ಕಾಂಗ್ರೆಸ್ ತಂಡ ಕಟ್ಟಿಕೊಂಡು ಹಿಂಸಾ ಮಾರ್ಗ ಹಿಡಿದರು. ಇತ್ತ ಇಂದಿರಾ ಗಾಂಧಿ ತಮ್ಮ ಅಧಿಕಾರ ಉಳಿಸಿಕೊಳ್ಳುವುದರಲ್ಲೇ ಮಗ್ನರಾಗಿದ್ದರು. ಇಷ್ಟೇ ಅಲ್ಲ ಸಂಜಯ್ ಗಾಂಧಿ ಹಿಂದೆ ಬಹುದೊಡ್ಡ ಯುವಶಕ್ತಿ ಇದೆ ಎಂದರಿತ ಇಂದಿರಾ ಗಾಂಧಿ, ಪುತ್ರನ ಅಡ್ಡದಾರಿಗಳಿಗೆ ಮೌನಿಯಾದರು. ಇತ್ತ ಕಾಂಗ್ರೆಸ್ ಹಾಗೂ ಯೂಥ್ ಕಾಂಗ್ರೆಸ್ ಎರಡು ಬೇರೆ ಬೇರೆ ದಿಕ್ಕಿನಲ್ಲಿ ಸಂಚರಿಸಲು ಆರಂಭಿಸಿತು. ಕಾಂಗ್ರೆಸ್ 20 ಅಂಶಗಳ ಕಾರ್ಯಕ್ರಮ ಘೋಷಿಸಿದ ಬೆನ್ನಲ್ಲೇ ಸಂಜಯ್ ಗಾಂಧಿ 5 ಅಂಶಗಳ ಯೋಜನೆ ಘೋಷಿಸಿದರು.

70 ದಶಕದಲ್ಲಿ ಇಂದಿರಾಗಾಂಧಿ ಎಂದರೆ ದೇವಿ, ನಾಯಕಿ, ಮಹಿಷಾಸುರ ಮರ್ಧಿನಿ!...

ಸಾಕ್ಷರತೆ
ಕುಟುಂಬ ಯೋಜನೆ
ಗಿಡ ನೆಡುವುದು
ಜಾತಿವಾದದ ನಿರ್ಮೂಲನೆ
ವರದಕ್ಷಿಣೆ ನಿರ್ಮೂಲನೆ

ಯೂಥ್ ಕಾಂಗ್ರೆಸ್ ಘೋಷಣೆ ಭಾರಿ ಜನಪ್ರಿಯ ಪಡೆದುಕೊಂಡಿತು. ಆದರೆ 4 ಅಂಶಗಳತ್ತ ತಲೆಕೆಡಿಸಿಕೊಳ್ಳದ ಸಂಜಯ್ ಗಾಂಧಿ ಕುಟುಂಬ ಯೋಜನೆಯತ್ತ ಗಮನ ಕೇಂದ್ರೀಕರಿಸಿದರು.   ಕುಟುಂಬ ಯೋಜನೆ ಕಡೆಗಣಿಸಿದರೆ ಸರ್ಕಾರಿ ಸೌಲಭ್ಯಗಳನ್ನು ಕಡಿತಗೊಳಿಸಲು ಸಂಜಯ್ ಗಾಂಧಿ ಮುಂದಾದರು. ಇಷ್ಟೇ ಅಲ್ಲ ಕುಟುಂಬ ಯೋಜನೆ ಪಾಲಿಸದ ಸರ್ಕಾರಿ ನೌಕರನಿಗೆ ಬಡ್ತಿ ಇಲ್ಲ ಎಂದು ಘೋಷಿಸಿದರು. 

ಇಂದಿರಾ ಮತ್ತು ಪ್ರಿಯಾಂಕಾ: ಕಾಂಗ್ರೆಸ್‌ಗೆ ಇದೆಲ್ಲಾ ಬೇಕಾ?..

ಕಾಂಗ್ರೆಸ್ ಮತ ಬ್ಯಾಂಕ್ ಆಗಿದ್ದ ಮುಸ್ಲಿಂ ಸಮುದಾಯ ಕುಟುಂಬ ಯೋಜನೆಯ ಸಂತಾನ ಹರಣ ನೀತಿಯನ್ನು ವಿರೋಧಿಸಿತು. ಈ ಕುರಿತು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ, ದಂಗೆಗಳು ಆರಂಭಗೊಂಡಿತು. ಇಷ್ಟೇ ಅಲ್ಲ ಕಾಂಗ್ರೆಸ್ ವಿರುದ್ಧ ಅಲೆಯೊಂದು ಸೃಷ್ಟಿಯಾಯ್ತು. ಆರೋಗ್ಯ ಇಲಾಖೆ ಹಮ್ಮಿಕೊಳ್ಳುತ್ತಿದ್ದ ಆರೋಗ್ಯ ತಪಾಸಣೆ, ಸೇರಿದಂತೆ ಹಲವು ಆರೋಗ್ಯ ಸಂಬಂಧಿ ಕ್ಯಾಂಪ್‌ಗಳಿಂದ ಜನರು ದೂರ ಉಳಿದರು. ಇಷ್ಟೇ ಅಲ್ಲ ಪುರಷತ್ವ ಕಾಪಾಡಿಕೊಳ್ಳಿ ಎಂದು ಜನ ಸರ್ಕಾರದ ವಿರುದ್ಧ ತಿರುಗಿಬಿದ್ದರು.

ರಾಜಕಾರಣಿಗಳಿಗೆ ಕಾದಿದೆ ಚಿನ್ನದ ಗಣಿ!

ಒಂದೆಡೆ ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿ ಮತ್ತೊಂದೆಡೆ ಸಂಜಯ್ ಗಾಂಧಿಯ ಆಡಳಿತ ಅನುಭವದ ಕೊರತೆ ದೇಶವನ್ನು ಮತ್ತಷ್ಟು ದುಸ್ಥಿತಿಗೆ ತಳ್ಳಿತು.  ಸಂತಾನ ಹರಣದಿಂದ ತೀವ್ರ ಟೀಕೆಗೆ ಗುರಿಯಾದ ಸಂಜಯ್ ಗಾಂಧಿ, ಸ್ಲಂ ಏರಿಯಾ ಕ್ಲೀನ್ ಅನ್ನೋ ಘೋಷಣೆಯೊಂದಿಗೆ ಮತ್ತೆ ರಾಜಕೀಯದಲ್ಲಿ ಸಂಚಲನ ಮೂಡಿಸಲು ಮುಂದಾದರು. ಸ್ಲಂ ನಿವಾಸಿಗಳಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೇ ಸ್ಲಂ ನಿವಾಸಿಗಳನ್ನು ಒಕ್ಕಲೆಬ್ಬಿಸಿ ಭಾರತವನ್ನು ಸಿಂಗಾಪುರ ರೀತಿ ಮಾಡಲು ಬಯಸಿದ್ದರು. 

ಆದರೆ ಸ್ಲಂ ನಿವಾಸಿಗಳು ತೀವ್ರ ಪ್ರತಿಭಟನೆ ಮಾಡತೊಡಗಿದರು. ತುಕರಾಂ ಗೇಟ್ ಸ್ಲಂ ನಿವಾಸಿಗಳ ಮನೆಯನ್ನು ಬುಲ್ಡೋಜರ್ ಮೂಲಕ ಧ್ವಂಸ ಮಾಡಲಾಯಿತು. ಪ್ರತಿಭಟನೆ ಮಾಡಿದ ಸ್ಲಂ ನಿವಾಸಿಗಳ ಮೇಲೆ ಪೊಲೀಸರ ಮೂಲಕ ಗುಂಡಿನ ಮಳೆಗೆರೆಯಲಾಯಿತು. ಆದರೆ ಇದ್ಯಾವುದು ಮಾಧ್ಯಮದಲ್ಲಿ ಸುದ್ದಿಯಾಗಲಿಲ್ಲ. ಕಾರಣ ಇಂದಿರಾ ಹೇರಿದ್ದ ತುರ್ತು ಪರಿಸ್ಥಿತಿ. 

ದೇಶವನ್ನು ಅಪಾಯಿಂದ ಪಾರುಮಾಡಲು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದಾರೆ ಎಂದು ಪ್ರಚಾರ ಮಾಡಿದ ಕಾಂಗ್ರೆಸ್, ತನ್ನ ನೀಚ ಕೃತ್ಯಗಳನ್ನು ಮುಚ್ಚಿಟ್ಟಿತು. ತುರ್ತು ಪರಿಸ್ಥಿತಿ ವೇಳೆ ಮಾಧ್ಯಮ ಸ್ವಾತಂತ್ರ್ಯ ಸೇರಿದಂತೆ ಎಲ್ಲವೂ ಇಂದಿರಾ ಗಾಂಧಿ ಕೈಯಲ್ಲಿದ್ದ ಕಾರಣ ಯಾವುದೂ ಬೆಳಕಿಗೆ ಬರಲಿಲ್ಲ.

click me!