ದೇಶಾದ್ಯಂತ ಕೊರೋನಾ ಹಾವಳಿ| ಕೊರೋನಾತಂಕ ನಡುವೆ ಆಮ್ಲಜನಕ ಕೊರತೆ| ಆಮ್ಲಜನಕ ಪೂರೈಕೆ ವಿಚಾರವಾಗಿ ಚರ್ಚಿಸಲು ಉನ್ನತ ಮಟ್ಟದ ಸಭೆ ಕರೆದ ಪಿಎಂ ಮೋದಿ
ಬೆಂಗಳೂರು(ಏ.22): ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಭಾರೀ ಆತಂಕ ಹುಟ್ಟಿಸಿದೆ. ಈ ನಡುವೆ ಸೋಂಕಿತರಿಗೆ ಆಮ್ಲಜನಕ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗುತ್ತಿದ್ದು, ಈಗಾಗಲೇ ಆಕ್ಸಿಜನ್ ಸೂಕ್ತ ಸಮಯಕ್ಕೆ ಸಿಗದೆ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆಕ್ಸಿಜನ್ ಇಲ್ಲದೇ ಪರದಾಡುತ್ತಿರುವ ರಾಜ್ಯಗಳು, ಶೀಘ್ರವಾಗಿ ಈ ಕೊರತೆ ನೀಗಿಸುವಂತೆ ಕೇಂದ್ರದ ಮೊರೆ ಹೋಗಿವೆ. ಹೀಗಿರುವಾಗ ಆಮ್ಲಜನಕ ಕೊರೆತೆ ನೀಗಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಇಂದು, ಗುರುವಾರ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಹೌದು ದೇಶದಲ್ಲಿ ಕೊರೋನಾತಂಕ ನಡುವೆ ಎದುರಾಗಿರುವ ಆಮ್ಲಜನಕ ಕೊರತೆ ನೀಗಿಸುವ ಬಗ್ಗೆ ಉನ್ನತ ಮಟ್ಟದ ಸಭೆ ಆರಂಭಿಸಿದ್ದಾರೆ. ಈ ಸಭೆಯಲ್ಲಿ ದೇಶಾದ್ಯಂತ ಎದುರಾಗಿರುವ ಆಮ್ಲಜನಕದ ಕೊರತೆ ನೀಗಿಸುವುದು ಹೇಗೆ? ಯಾವ ರೀತಿ ಆಕ್ಸಿಜನ್ ಪೂರೈಕೆ ಮಾಡುವುದು? ಈವರೆಗೂ ಆಮ್ಲಜನಕ ಪೂರೈಕೆ ಹೇಗೆ ನಡೆಸಿದ್ದೀರಿ? ಎಂಬಿತ್ಯಾದಿಗಳ ಬಗ್ಗೆ ಪಿಎಂ ಮೋದಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.
undefined
ಆಕ್ಸಿಜನ್ ಸೋರಿಕೆ: ತಮ್ಮವರ ಜೀವ ಉಳಿಸಲು ಸತ್ತವರ ಸಿಲಿಂಡರ್ ಕೊಂಡೋಯ್ದರು
ಇನ್ನು ಈ ಸಭೆಯಲ್ಲಿ ಪ್ರಧಾನ ಮಂತ್ರಿ ಮೋದಿ, ಆಮ್ಲಜನಕದ ಉತ್ಪಾದನೆ ಹೆಚ್ಚಿಸುವ ಹಾಗೂ ಅತ್ಯಂತ ಶೀಘ್ರವಾಗಿ ಅದನ್ನು ಬೇರೆ ಬೇರೆ ರಾಜ್ಯಗಳಿಗೆ ಕೊಂಡೊಯ್ಯುವುದು ಹೇಗೆ ಎಂಬ ಬಗ್ಗೆಯೂ ಚರ್ಚಿಸಿದ್ದಾರೆನ್ನಲಾಗಿದೆ. ಅಲ್ಲದೇ ಇದನ್ನು ಶೀಘ್ರವಾಗಿ ತಲುಪಿಸಲು ಕಂಡುಕೊಳ್ಳಬೇಕಾದ ಹೊಸ ಮಾರ್ಗದ ಬಗ್ಗೆಯೂ ಉಲ್ಲೇಖಿಸಿದ್ದಾರೆ.
ಈ ವೇಳೆ ಅಧಿಕಾರಿಗಳು ಕೂಡಾ ಯಾವ ರೀತಿ ಸದ್ಯ ಆಮ್ಲಜನಕ ಪೂರೈಸಲಾಗುತ್ತಿದೆ ಹಾಗೂ ಶೀಘ್ರವಾಗಿ ಇದನ್ನು ತಲುಪಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸಿದ್ದಾರೆ. ಆಮ್ಲಕಜನಕ ಕೊರತೆ ಎದುರಾದಾಗಿನಿಂದ ದೇಶದಲ್ಲಿ ಇದರ ಉತ್ಪಾದನೆ ಭಾರಈ ಪ್ರಮಾಣದಲ್ಲಿ ಏರಿಸಲಾಗಿದೆ.
ಕೊರೋನಾ ರೋಗಿಗಳಿಗೆ ಆಕ್ಸಿಜನ್ ಪೂರೈಸಲು ದುಬಾರಿ ಕಾರು ಮಾರಿದ ಯುವಕ
ಶುಕ್ರವಾರ ಮಹತ್ವದ ವಿಚಾರ; ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಸಭೆ ಕರೆದಿದ್ದು ಕೋವಿಡ್ 19 ಪರಿಸ್ಥಿತಿ ಅವಲೋಕನ ಮಾಡಲಿದ್ದಾರೆ. ಇದಾದ ನಂತರ 10 ಗಂಟೆಗೆ ಅತಿ ಹೆಚ್ಚು ಕೊರೋನಾ ಪೀಡಿತ ರಾಜ್ಯಗಳ ಸಿಎಂ ಜತೆ ಸಭೆ ನಡೆಸಲಿದ್ದಾರೆ. 12:30 ಕ್ಕೆ ಆಮ್ಲಜನಕ ತಯಾರಕರೊಂದಿಗೆ ಮಾತನಾಡಲಿದ್ದಾರೆ.