
ರಾಯ್ಪುರ(ಏ,.22): ದೇಶದಲ್ಲಿ ಮತ್ತೊಮ್ಮ ಕೊರೋನಾ ಸೋಂಕು ಆವರಿಸಿದೆ. ಸದ್ಯ ಲಕ್ಷಾಂತರ ಸಂಖ್ಯೆಯಲ್ಲಿ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಇದರ ಪರಿಣಾಮ ಎಂಬಂತೆ ಮತ್ತೊಮ್ಮೆ ರಾಜ್ಯ ಸರ್ಕಾರ ಕರ್ಫ್ಯೂ ಹಾಗೂ ಲಾಕ್‌ಡೌನ್ ಮೊರೆ ಹೋಗಿವೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರ ವಹಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಕೊರೊನಾಗೆ ಸಂಬಂಧಿಸಿದ ಶಾಕಿಂಗ್ ವಿಡಿಯೋಗಳೂ ಹರಿದಾಡಲಾರಂಭಿಸಿವೆ. ಹೀಗಿರುವಾಗಲೇ ಸದ್ಯ ಮಹಿಳಾ ಡಿಎಸ್‌ಪಿಯೊಬ್ಬರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇದು ಅನೇಕ ಅಧಿಕಾರಿ ಹಾಗೂ ಜನ ಸಾಮಾನ್ಯರಿಗೆ ಪ್ರೇರಣೆಯಾಗಿದೆ.
ಹೌದು ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಿರುವ ಬೆನ್ನಲ್ಲೇ ಎಲ್ಲಾ ಕಡೆ ಎಚ್ಚರಿಕೆ ವಹಿಸಲಾಗುತ್ತಿದೆ. ಪೊಲೀಸರು ಹಾಆಗೂ ಆಸಳಿತಾಧಿಕಾರಿಗಳೂ ತೀವ್ರ ನಿಗಾ ಇರಿಸುತ್ತಿದ್ದಾರೆ. ಹೀಗಿರುವಾಗ ಛತ್ತೀಸ್‌ಗಢದ ದುರ್ಗ್ ನಿವಾಸಿ, ದಂತೇವಾಡಾದ ಡಿಎಸ್‌ಪಿ ಶಿಲ್ಪಾ ಸಾನೂ ತಮ್ಮ ಕೆಲಸದ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ.
ಲಭ್ಯವಾದ ಮಾಹಿತಿ ಅನ್ವಯ ಡಿಎಸ್‌ಪಿ ಶಿಲ್ಪಾ ಗರ್ಭಿಣಿಯಾಗಿದ್ದಾರೆ. ಹೀಗಿದ್ದರೂ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸದ್ಯ ವೈರಲ್ ಆದ ಫೋಟೋದಲ್ಲೂ ಅವರು ಕೈಯ್ಯಲ್ಲಿ ಲಾಠಿ ಹಿಡಿದು ಜನರ ಬಳಿ ಏನೋ ಹೇಳುತ್ತಿರುವುದು ಸ್ಪಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಕರ್ತವ್ಯಕ್ಕೆ ಹಾಜರಾಗಿ, ಕೊರೋನಾ ಕಾಲದಲ್ಲಿ ಎಚ್ಚರ ಬಹಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ.
ಅವರ ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಐಪಿಎಸ್ ಆಫೀಸರ್ ದೀಪಾಂಶು ಕಾಬ್ರಾ ಶೇರ್ ಮಾಡಿದ್ದಾರೆ. ಜೊತೆಗೆ ಅವರ ಧೈರ್ಯ ಹಾಗೂ ಕರ್ತವ್ಯಪ್ರಜ್ಞೆಗೆ ಸಲಾಂ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ