
ಚೆನ್ನೈ (ಮಾ.31): ಸಂವಿಧಾನ ನಮಗೆ ಸ್ವಾತಂತ್ರ್ಯ ನೀಡಿದೆ ಎನ್ನುವ ಮಾತಿನೊಂದಿಗೆ ಹಿಂದೂ ದೇವತೆಗಳನ್ನು ಅವಮಾನಿಸುವ, ಹಿಂದುಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಸಾಕಷ್ಟು ವಿಚಾರಗಳು ನಡೆದಿವೆ. ಕೆಲ ದಿನಗಳ ಹಿಂದೆ ವಿಶ್ವವಿದ್ಯಾಲಯವೊಂದು ಸೀತಾದೇವಿ ಸಿಗರೇಟ್ ಸೇದುತ್ತಿರುವ ನಾಟಕವನ್ನು ಪ್ರದರ್ಶನ ಮಾಡಿತ್ತು. ಈಗ ಪುದುಚೇರಿ ವಿವಿಯ ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳು ರಾಮಾಯಣ, ಸೀತಾಮಾತೆ, ಹನುಮಾನ್ ಸೇರಿದಂತೆ ಹಿಂದೂ ದೇವತೆಗಳನ್ನು ಅವಮಾನಿಸುವಂಥ ನಾಟಕವನ್ನು ಪ್ರದರ್ಶನ ಮಾಡಿದ್ದಾರೆ. ತನ್ನ ವಾರ್ಷಿಕ ಸಾಂಸ್ಕೃತಿಕ ಉತ್ಸವ ಎಜಿನಿ 2K24 ಸಂದರ್ಭದಲ್ಲಿ ರಾಮಾಯಣ ಕುರಿತಾದ ನಾಟವನ್ನು ಪ್ರದರ್ಶನ ಮಾಡಿತ್ತು. ಇದರಲ್ಲಿ ಹಿಂದು ದೇವರನ್ನು ಮನಸ್ಸಿಗೆ ಬಂದಂತೆ ಅವಮಾನಿಸಲಾಗಿದೆ. ಇದರ ಬೆನ್ನಲ್ಲಿಯೇ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಶನಿವಾರ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದು, ವಿದ್ಯಾರ್ಥಿ ಸಂಘಟನೆ ಈ ಕುರಿತಾಗಿ ಪ್ರಕಟಣೆಯನ್ನೂ ನೀಡಿದೆ.
ಈ ನಾಟಕದಲ್ಲಿ ಸೀತಾ ಮಾತೆ ರಾವಣನಿಗೆ ದನದ ಮಾಂಸವನ್ನು ನೀಡುವಂತೆ ಚಿತ್ರಿಸಲಾಗಿದೆ. ಅದರೊಂದಿಗೆ ಭಗವಾನ್ ಹನುಮಂತನ ಚಾರಿತ್ರ್ಯ ವಧೆ ಮಾಡಲಾಗಿದೆ. ಇದೇ ನಾಟಕದಲ್ಲಿ ಸೀತಾ ಮಾತೆ ರಾವಣ ಅಪಹರಣ ಮಾಡುವಾಗ ಯಾವುದೇ ರೀತಿಯಲ್ಲೂ ವಿರೋಧ ವ್ಯಕ್ತಪಡಿಸಿಲ್ಲ ಎನ್ನುವಂತೆ ತೋರಿಸಲಾಗಿದೆ. ಅದಲ್ಲದೆ, ರಾವಣನ ಜೊತೆ ಡಾನ್ಸ್ ಮಾಡುವಂತೆ ಚಿತ್ರಿಸಲಾಗಿದೆ' ಎಂದು ಎಕ್ಸ್‌ನಲ್ಲಿ ತಮಿಳುನಾಡು ಎಬಿವಿಪಿ ಪೋಸ್ಟ್ ಮಾಡಿದೆ.
ಈ ನಾಟಕ ವಿರುದ್ಧ ವಿವಿ ಆವರಣದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿದೆ. 'ಎಬಿವಿಪಿ ಪಿಯು ವಿದ್ಯಾರ್ಥಿಗಳು 29 ಮಾರ್ಚ್ರಂದು ಡಿಪಿಎ, ಪಾಂಡಿಚೇರಿ ವಿಶ್ವವಿದ್ಯಾನಿಲಯ ಎಜಿನಿ 2 ಕೆ 24 ಆಯೋಜಿಸಿದ್ದ ಫೆಸ್ಟ್‌ನಲ್ಲಿ ಇತ್ತೀಚೆಗೆ ನಡೆದ ಘಟನೆಯ ವಿರುದ್ಧ ಪ್ರತಿಭಟಿಸಿದರು, ಇದರಲ್ಲಿ ಸೀತಾ ಮಾತೆ ರಾವಣನಿಗೆ ಗೋಮಾಂಸ ನೀಡುವುದನ್ನು ಮತ್ತು ಹನುಮಂತನ ಪಾತ್ರವನ್ನು ವಿರೂಪಗೊಳಿಸುವುದು ಸೇರಿದಂತೆ ರಾಮಾಯಣದ ಅಣಕವಾಡುವ ಅಂಶವಿದೆ' ಎಂದು ಬರೆದಿದೆ.
ಪ್ರದರ್ಶನ ಕಲೆ ವಿಭಾಗದ ನಾಟಕ 'ಸೋಮಾಯಣಂ' ನಲ್ಲಿ ರಾಮಾಯಣವನ್ನು ಅಣಿಕಿಸುವ ಅಂಶಗಳನ್ನು ಪ್ರದರ್ಶನ ಮಾಡಲಾಗಿದೆ. ಇದನ್ನು ಪುದುಚೇರಿ ಎಬಿವಿಪಿ ಕಟು ಶಬ್ದಗಳಿಂದ ಟೀಕೆ ಮಾಡುತ್ತದೆ ಎಂದು ಬರೆದುಕೊಂಡಿದೆ. ಈ ನಾಟಕದಲ್ಲಿ ಸೀತಾ ಪಾತ್ರದ ಹೆಸರನ್ನು ಗೀತಾ ಎಂದು ಬದಲಿಸಲಾಗಿದೆ. ರಾವಣ ಪಾತ್ರದ ಹೆಸರನ್ನು ಭಾವನಾ ಎಂದು ಮಾಡಲಾಗಿದೆ. ಇದರಲ್ಲಿ ಸೀತೆ, ರಾವಣನಿಗೆ ಗೋಮಾಂಸ ನೀಡುತ್ತಿರುವಂತೆ ಚಿತ್ರಿಸಲಾಗಿದೆ. ಸೀತೆಯ ಅಪರಹಣವಾಗುವ ವೇಳೆ, 'ನಾನು ಮದುವೆಯಾಗಿದ್ದೇನೆ. ಆದರೆ, ಸ್ನೇಹಿತರಾಗಿ ಇರಬಹುದು' ಎನ್ನುವ ಮಾತನ್ನು ಹೇಳಿಸಲಾಗಿದೆ.
ಪುದುಚೇರಿ ವಿವಿಯಲ್ಲಿರುವ ಕಮ್ಯುನಿಸ್ಟ್ ಹಾಗೂ ಎಡಪಂಥೀಯ ವಿಚಾರಧಾರೆಯ ವಿದ್ಯಾರ್ಥಿಗಳು ಮಾಡಿರುವ ಹುನ್ನಾರ ಎಂದು ಎಬಿವಿಪಿ ಹೇಳಿದೆ. ಕಮ್ಯುನಿಸ್ಟ್ ಹಾಗೂ ಎಡಪಂಥೀಯರು ರಾಮನ ಹೆಸರಿಗೆ ಕಳಂಕ ತರುವ, ಸೀತಾ ಮಾತೆಯ ಪಾವಿತ್ರ್ಯವನ್ನೇ ಪ್ರಶ್ನೆ ಮಾಡುವಂಥ ವಿಚಾರಗಳನ್ನು ನಾಟಕದಲ್ಲಿ ಪ್ರದರ್ಶನ ಮಾಡಿದ್ದಾರೆ. ಹನುಮಂತನನ್ನು ಇಲ್ಲಿ ಕಾಂಜೀನೇಯ ಎಂದು ಚಿತ್ರಿಸಲಾಗಿದೆ. ಹನುಮಂತನ ಬಾಲವನ್ನು ಆಂಟೆನಾದ ರೀತಿಯಲ್ಲಿ ಚಿತ್ರಿಸಲಾಗಿದ್ದು, ಇದರಿಂದಲೇ ರಾಮನೊಂದಿಗೆ ಸಂವಹನ ನಡೆಸುತ್ತಿದ್ದ ಎನ್ನುವಂತೆ ವಿರೂಪ ಮಾಡಲಾಗಿದೆ ಎಂದು ತಿಳಿಸಿದೆ.
ಸೀತಾ ದೇವಿ ಬಾಯಲ್ಲಿ ಸಿಗರೇಟು, ರಾಮಾಯಣ ಅಣಕಿಸಿದ ವಿದ್ಯಾರ್ಥಿಗಳ ನಾಟಕ ವಿರುದ್ಧ ಭಾರಿ ಆಕ್ರೋಶ!
“ಎಬಿವಿಪಿ ಅಭಿವ್ಯಕ್ತಿ ಸ್ವಾತಂತ್ರ್ಯದ ತತ್ವವನ್ನು ದೃಢವಾಗಿ ನಂಬುತ್ತದೆ ಆದರೆ ಧಾರ್ಮಿಕ ನಂಬಿಕೆಗಳು ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗಳಿಗೆ ಸರಿಯಾದ ಗೌರವದೊಂದಿಗೆ ಈ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ಚಲಾಯಿಸಬೇಕು ಎನ್ನುವುದನ್ನೂ ಪ್ರತಿಪಾದಿಸುತ್ತದೆ. ಸೃಜನಾತ್ಮಕ ಅಭಿವ್ಯಕ್ತಿಯನ್ನು ಪ್ರೋತ್ಸಾಹಿಸಲಾಗಿದ್ದರೂ, ಅದು ಎಂದಿಗೂ ಧಾರ್ಮಿಕ ಭಾವನೆಗಳನ್ನು ನೋಯಿಸುವ ಅಥವಾ ಕೋಮು ವೈಷಮ್ಯವನ್ನು ಬೆಳೆಸುವ ವೆಚ್ಚದಲ್ಲಿರಬಾರದು' ಎಂದು ಹೇಳಿದೆ.
ಧರ್ಮ, ಪ್ರೇಮ ಮತ್ತು ಸಮರ್ಪಣೆಯ 'ರಾಮಾಯಣ' ಪ್ರಸಾರದ ದಿನಾಂಕ ಘೋಷಿಸಿದ ಡಿಡಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ