
ನವದೆಹಲಿ(ಅ.03): ಸಚಿವ ಡಿ.ವಿ. ಸದಾನಂದಗೌಡರ ಉಸ್ತುವಾರಿಯ ರಸಗೊಬ್ಬರ ಇಲಾಖೆಯು ಕೇಂದ್ರ ಸರ್ಕಾರದ ಒಟ್ಟಾರೆ 65 ಇಲಾಖೆಗಳ ರಾರಯಂಕಿಂಗ್ನಲ್ಲಿ 3ನೇ ಸ್ಥಾನ ಪಡೆದಿದೆ. ಇದೇ ವೇಳೆ, ವಿವಿಧ 16 ಆರ್ಥಿಕ ಸಚಿವಾಲಯಗಳಲ್ಲಿ 2ನೇ ಸ್ಥಾನ ಗಳಿಸಿದೆ.
ನೀತಿ ಆಯೋಗದ ಅಭಿವೃದ್ಧಿ ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ ಕಚೇರಿ (ಡಿಇಎಂಒ), ಕೇಂದ್ರ ಸರ್ಕಾರದ ಯೋಜನೆಗಳನ್ನು ಇಲಾಖೆಗಳು ಹೇಗೆ ಅನುಷ್ಠಾನ ಮಾಡುತ್ತಿವೆ ಎಂಬ ಪ್ರಶ್ನಾವಳಿ ಆಧರಿತ ಆನ್ಲೈನ್ ಸಮೀಕ್ಷೆ ನಡೆಸಿತ್ತು. ಇದರ ಫಲಿತಾಂಶ ಆಧರಿಸಿ ಶ್ರೇಯಾಂಕ ಪ್ರಕಟಿಸಿದೆ. ಶ್ರೇಯಾಂಕವು ಸದಾನಂದಗೌಡರ ಇಲಾಖೆ ಉತ್ತಮ ಕಾರ್ಯನಿರ್ವಹಣೆ ತೋರುತ್ತಿದೆ ಎಂಬುದನ್ನು ಸಾಬೀತುಪಡಿಸಿದೆ.
ಈ ಬಗ್ಗೆ ಖುಷಿ ವ್ಯಕ್ತಪಡಿಸಿರುವ ರಸಗೊಬ್ಬರ ಹಾಗೂ ರಾಸಾಯನಿಕ ಸಚಿವ ಸದಾನಂದಗೌಡ, ‘ನೀತಿ ಆಯೋಗವು ವಿವಿಧ ಸಚಿವಾಲಯಗಳ ಕಾರ್ಯವೈಖರಿ ಪರಾಮರ್ಶಿಸಿ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡುತ್ತಿರುವುದು ಸಂತಸದ ವಿಚಾರ. ಇದರಿಂದ ಯೋಜನೆಗಳ ಪರಿಣಾಮಕಾರಿ ಜಾರಿ ಹಾಗೂ ಗುರಿ ಮುಟ್ಟಲು ಸಹಾಯವಾಗುತ್ತದೆ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ