ಪಿಎನ್‌ಬಿ ಆರೋಪಿ ಮೂಲ್ಕಿ ಶೆಟ್ಟಿ ಬಳಿ ಅಕ್ರಮ ಆಸ್ತಿ: ಸಿಬಿಐ!

By Kannadaprabha NewsFirst Published Oct 3, 2020, 8:05 AM IST
Highlights

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13 ಸಾವಿರ ಕೋಟಿ ರು. ವಂಚಿಸಿ ಪರಾರಿಯಾಗಿರುವ ಉದ್ಯಮಿಗಳು| ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13 ಸಾವಿರ ಕೋಟಿ ರು. ವಂಚಿಸಿ ಪರಾರಿಯಾಗಿರುವ ಉದ್ಯಮಿಗಳಾದ

ನವ​ದೆ​ಹ​ಲಿ(ಅ.03): ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13 ಸಾವಿರ ಕೋಟಿ ರು. ವಂಚಿಸಿ ಪರಾರಿಯಾಗಿರುವ ಉದ್ಯಮಿಗಳಾದ ನೀರವ್‌ ಮೋದಿ-ಮೆಹುಲ್‌ ಚೋಕ್ಸಿಗೆ ಸಹ​ಕಾರ ನೀಡಿದ ಆರೋಪ ಹೊತ್ತಿ​ರುವ ಅದೇ ಬ್ಯಾಂಕ್‌ನ ನಿವೃ​ತ್ತ ಉಪ ವ್ಯವ​ಸ್ಥಾ​ಪಕ, ಕರ್ನಾ​ಟ​ಕದ ದಕ್ಷಿಣ ಕನ್ನಡ ಜಿಲ್ಲೆ ಮೂಲ​ದ ಗೋಕು​ಲ​ನಾಥ್‌ ಶೆಟ್ಟಿಹಾಗೂ ಅವರ ಪತ್ನಿ ವಿರುದ್ಧ ಸಿಬಿಐ .2.63 ಕೋಟಿ ಅಕ್ರಮ ಆಸ್ತಿ ಸಂಪಾ​ದನೆ ಕುರಿತು ಆರೋ​ಪ​ಪಟ್ಟಿದಾಖ​ಲಿ​ಸಿ​ದೆ.

ಶೆಟ್ಟಿಹಾಗೂ ಅವರ ಪತ್ನಿ, ಇಂಡಿ​ಯನ್‌ ಬ್ಯಾಂಕ್‌ ಗುಮಾಸ್ತೆ ಆಶಾಲತಾ ಶೆಟ್ಟಿಅವರು 2011ರಿಂದ 2017ರ ನಡುವೆ 4.28 ಕೋಟಿ ರು. ಮೌಲ್ಯದ ಆಸ್ತಿ ಸಂಪಾ​ದನೆ ಮಾಡಿ​ದ್ದಾರೆ. ಈ ಪೈಕಿ 2.63 ಕೋಟಿ ರು.ಗಳ ಆಸ್ತಿ ಬಗ್ಗೆ ಅವರು ಸಮ​ರ್ಪ​ಕ ಉತ್ತರ ನೀಡಿಲ್ಲ. ಇದು ಅವರ ಆದಾ​ಯ​ಕ್ಕಿಂತ 2.38 ಪಟ್ಟು ಹೆಚ್ಚು ಗಳಿಕೆ. ಅವರು ನಿಯ​ತ್ತಾಗಿ ಈ 6 ವರ್ಷದ ಅವ​ಧಿ​ಯಲ್ಲಿ ಗಳಿ​ಸಿದ ಆದಾಯ 72.52 ಲಕ್ಷ ರು. ಮಾತ್ರ ಎಂದು ಕೋರ್ಟ್‌​ಗೆ ಸಲ್ಲಿ​ಸಿದ ಚಾಜ್‌ರ್‍​ಶೀ​ಟ್‌​ನಲ್ಲಿ ಸಿಬಿಐ ಹೇಳಿ​ದೆ.

ನೀರವ್‌ ಮೋದಿ-ಮೆಹುಲ್‌ ಚೋಕ್ಸಿ ಪ್ರಕ​ರ​ಣದ ತನಿಖೆ ವೇಳೆ ಶೆಟ್ಟಿಜತೆ ಅವರು ಹೊಂದಿದ್ದ ಸಂಬಂಧ, ಸಾಲದ ವಹಿ​ವಾ​ಟಿನ ಬಗ್ಗೆ ಸಿಬಿಐ ಗಹನ ಅವ​ಲೋ​ಕನ ನಡೆ​ಸಿತ್ತು. ಆಗ ಶೆಟ್ಟಿಅವರು ಗಳಿ​ಸಿದ್ದ ಅಕ್ರಮ ಆಸ್ತಿ ಬಯ​ಲಿಗೆ ಬಂತು. ಅಕ್ರ​ಮ​ವಾಗಿ ಮುಂಬೈ​ನಲ್ಲಿ ಹಲ​ವಾರು ಕಡೆ ಫ್ಲ್ಯಾಟ್‌​ಗ​ಳನ್ನು ಅವರು ಖರೀ​ದಿ​ಸಿ​ದ್ದಾ​ರೆ ಎಂದು ಅಧಿ​ಕಾ​ರಿ​ಗಳು ಹೇಳಿ​ದ್ದಾ​ರೆ.

ಗೋಕು​ಲ​ನಾಥ ಶೆಟ್ಟಿಮೂಲ್ಕಿ​ಯ​ವ​ರಾ​ಗಿದ್ದು, ಅಲ್ಲಿ​ನ ವಿಜಯಾ ಕಾಲೇ​ಜಿ​ನಲ್ಲಿ ಅಧ್ಯ​ಯನ ನಡೆ​ಸಿ​ದ್ದರು. ನಂತರ ಉನ್ನತ ವಿದ್ಯಾ​ಭ್ಯಾ​ಸಕ್ಕೆ ಮುಂಬೈಗೆ ತೆರಳಿ, ಪಂಜಾಬ್‌ ನ್ಯಾಷ​ನಲ್‌ ಬ್ಯಾಂಕ್‌​ನಲ್ಲಿ ನಿವೃ​ತ್ತಿ​ಯ​ವ​ರೆಗೆ ಕಾರ್ಯ​ನಿ​ರ್ವ​ಹಿ​ಸಿ​ದ್ದ​ರು.

click me!