ಮಧ್ಯಪ್ರದೇಶಲ್ಲಿ ವಿಚಿತ್ರ ಮಗುವೊಂದು ಜನಿಸಿದೆ. ಕಾಲುಗಳಿರುವ ಜಾಗದಲ್ಲಿ ಈ ಮಗುವಿಗೆ ಕೊಂಬಿನಾಕೃತಿಯ ರಚನೆ ಇದೆ. ಹೀಗೆ ವಿಚಿತ್ರ ಮಗು ಜನಿಸಿದ ವಿಚಾರ ಈಗ ಊರಿನಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಈ ವಿಚಿತ್ರ ಮಗುವನ್ನು ನೋಡಲು ಜನ ತಂಡೋಪತಂಡವಾಗಿ ಗ್ರಾಮಕ್ಕೆ ಆಗಮಿಸುತ್ತಿದ್ದಾರಂತೆ.
ಭೋಪಾಲ್: ಮಧ್ಯಪ್ರದೇಶಲ್ಲಿ ವಿಚಿತ್ರ ಮಗುವೊಂದು ಜನಿಸಿದೆ. ಕಾಲುಗಳಿರುವ ಜಾಗದಲ್ಲಿ ಈ ಮಗುವಿಗೆ ಕೊಂಬಿನಾಕೃತಿಯ ರಚನೆ ಇದೆ. ಹೀಗೆ ವಿಚಿತ್ರ ಮಗು ಜನಿಸಿದ ವಿಚಾರ ಈಗ ಊರಿನಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಈ ವಿಚಿತ್ರ ಮಗುವನ್ನು ನೋಡಲು ಜನ ತಂಡೋಪತಂಡವಾಗಿ ಗ್ರಾಮಕ್ಕೆ ಆಗಮಿಸುತ್ತಿದ್ದಾರಂತೆ.
ಪ್ರಕೃತಿಯ ಸೃಷ್ಟಿ ನಿಜಕ್ಕೂ ವೈವಿಧ್ಯ ಹಾಗೂ ನಿಗೂಢವಾದುದು. ಕೆಲವೊಮ್ಮೆ ಕೆಲ ನಿಗೂಢಗಳನ್ನು ಪವಾಡಗಳನ್ನು ನಮ್ಮ ಕಣ್ಣುಗಳು ನಂಬಲೇಬೇಕಾದಂತಹ ಸ್ಥಿತಿ ನಿರ್ಮಾಣವಾಗಿರುತ್ತದೆ. ಸಾಮಾನ್ಯವಾಗಿ ವಿಚಿತ್ರ ಕಲ್ಪನೆಗಳನ್ನು ನಾವು ಸಿನಿಮಾಗಳಲ್ಲಿ ನೋಡಿರುತ್ತೇವೆ. ಮಗುವಿನ ಮುಖದೊಂದಿಗೆ ಪ್ರಾಣಿಗಳಂತಹ ದೇಹ, ಮನುಷ್ಯರ ಕೈ ಕಾಲುಗಳ ಬದಲು ಪ್ರಾಣಿಗಳ ಕೈಕಾಲು ಕೊಂಬು ಹೊಂದಿರುವ ಹೈಬ್ರೀಡ್ ಮಗು ಜನಿಸುವುದು ಮುಂತಾದ ರೋಚಕ ದೃಶ್ಯಗಳನ್ನು ಕಾರ್ಟೂನ್ ಸಿರೀಸ್‌ಗಳಲ್ಲಿ ಹಾಲಿವುಡ್ ಸಿನಿಮಾಗಳಲ್ಲಿ(Hollywood movies) ನೋಡಿರುತ್ತೇವೆ. ಆದರೆ ಮಧ್ಯಪ್ರದೇಶದಲ್ಲಿ ಈ ಇಂತಹ ಕಲ್ಪನೆಯನ್ನು ನಿಜವಾಗಿಸುವ ಘಟನೆಯೊಂದು ನಡೆದಿದೆ.
ಮಹಿಳೆಯೊಬ್ಬರು ಕಾಲುಗಳ ಜಾಗದಲ್ಲಿ ಕೊಂಬುಗಳ (horn) ಆಕಾರವಿರುವ ಮಗುವಿಗೆ ಜನ್ಮ ನೀಡಿದ್ದಾರೆ. ಮಧ್ಯಪ್ರದೇಶದ ಶಿವಪುರ ಜಿಲ್ಲೆಯಲ್ಲಿ ಬರುವ, ಮಣಿಪುರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಗಸ್ಟ್ 26ರಂದು ಈ ಮಗು ಜನಿಸಿದೆ. ಈ ವಿಚಿತ್ರ ಮಗುವನ್ನು ನೋಡಿ ಮಗುವಿನ ತಾಯಿಯ ಜೊತೆ ವೈದ್ಯಕೀಯ ಸಿಬ್ಬಂದಿಯೇ ದಂಗಾಗಿದ್ದಾರೆ. ಈ ಮಗುವಿಗೆ ಕಾಲುಗಳಿರಲಿಲ್ಲ. ಬದಲಾಗಿ ಸೊಂಟದ ಕೆಳಭಾಗದಲ್ಲಿ ಕೊಂಬಿನ ರೀತಿಯ ಆಕಾರದ ರಚನೆ ಇದೆ.
ನವರಾತ್ರಿಗೂ ಮುನ್ನ ಹುಟ್ಟಿದ ಕಂದ, ಬೆರಳುಗಳನ್ನು ನೋಡಿ ದುರ್ಗೆಯ ಅವತಾರ ಎಂದ ಜನ, ಇಲ್ಲಿದೆ ವಿಡಿಯೋ
ಈ ಮಗು ಸರಿಯಾದ ಬೆಳವಣಿಗೆ ಇಲ್ಲದೇ ಹುಟ್ಟಿದ್ದು, ಕೇವಲ ಒಂದು ಕೆಜಿ 100 ಗ್ರಾಂ ತೂಗುತ್ತಿತ್ತು. ಈ ಮಗುವನ್ನು ಪ್ರಸ್ತುತ ಶಿವಪುರದ ಜಿಲ್ಲಾ ಆಸ್ಪತ್ರೆಗೆ (Shivpuri District Hospital) ದಾಖಲಿಸಲಾಗಿದ್ದು, ನವಜಾತ ಶಿಶುಗಳ ಘಟಕದ ವಿಶೇಷ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ. ಮಗು ವಿಚಿತ್ರವಾಗಿ ಜನಿಸಿದರು, ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ದ ಮಿರರ್ (The Mirror) ವರದಿ ಮಾಡಿದೆ. ಇತ್ತ ಈ ಸುದ್ದಿ ಎಲ್ಲೆಡೆ ಕಾಡ್ಗಿಚ್ಚಿನಂತೆ ಹರಡಿದ್ದು, ಇದು ಮಾಧ್ಯಮಗಳ ಗಮನವನ್ನು ಸೆಳೆದಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ವೈದ್ಯರು ಮಗುವಿನ ಈ ವಿರೂಪತೆಗೆ ಕಾರಣ ಎನಿರಬಹುದು ಎಂಬ ಬಗ್ಗೆ ವಿಶ್ಲೇಷಣೆ ನಡೆಸುತ್ತಿದ್ದಾರೆ. ಆದಾಗ್ಯೂ ಮಗು ಯಾವುದೇ ಪ್ರತಿಕೂಲ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇಂತಹ ವಿಚಿತ್ರ ಮಕ್ಕಳು ಜನಿಸಿದ್ದು ಇದೇ ಮೊದಲೇನಲ್ಲ. ಕಳೆದ ಜೂನ್‌ನಲ್ಲಿ ಉತ್ತರಪ್ರದೇಶದ ಹರ್ದೊಯಿಯಲ್ಲಿ ವಿಚಿತ್ರ ಮಗುವೊಂದು ಜನಿಸಿತ್ತು. ನಾಲ್ಕು ಕಾಲು ಹಾಗೂ ನಾಲ್ಕು ತೋಳುಗಳನ್ನು ಹೊಂದಿದ ಈ ಮಗು ಜನಿಸಿದ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಮಗು ದೇವಿಯ ಪ್ರತಿರೂಪ ಎಂದು ಭಾವಿಸಿ ಮಗುವನ್ನು ನೋಡಲು ಸುತ್ತಮುತ್ತಲಿನ ಜನ ಆಗಮಿಸಿದ್ದರು. ಹೆಣ್ಣು ಮಗು ಇದಾಗಿದ್ದು, ಅರೋಗ್ಯವಾಗಿತ್ತು. ಉತ್ತರ ಪ್ರದೇಶ (Uttar Pradesh) ರಾಜ್ಯದ ಹರ್ದೋಯಿ (Hardoyi) ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರೀನಾ (Kareena) ಹಾಗೂ ಸಂಜಯ್(Sanjay) ಎಂಬ ದಂಪತಿಗೆ ಈ ಮಗು ಜನಿಸಿತ್ತು.
Fact Check: ಮೂರು ಕಣ್ಣಿನ ಮಗು ಜನನ, ಸ್ವಾಮೀಜಿಯ ಕಾಲಜ್ಞಾನ ನಿಜವಾಯ್ತಾ?
ಭಾರತದಲ್ಲಿ ಈ ರೀತಿ ಮಗು ಜನಿಸಿದ್ದು ಇದೇ ಮೊದಲಲ್ಲ, ಈ ವರ್ಷದ ಆರಂಭದಲ್ಲಿ, ನಾಲ್ಕು ಕೈಗಳು ಮತ್ತು ಕಾಲುಗಳೊಂದಿಗೆ ಜನಿಸಿದ ಮತ್ತೊಂದು ಪುಟ್ಟ ಮಗುವನ್ನು ದೇವರ ಅವತಾರವೆಂದು ಭಾವಿಸಿ ಸ್ಥಳೀಯರು ಆರಾಧಿಸಲು ಆರಂಭಿಸಿದ್ದರು. ಜನವರಿ 17 ರಂದು ಮಹಿಳೆಯೊಬ್ಬರು ವಿಚಿತ್ರ ಮಗುವಿಗೆ ಜನ್ಮ ನೀಡಿದ್ದರು. ಹಾಗೆಯೇ 2019ರಲ್ಲಿ ಮತ್ತೊಬ್ಬ ಮಹಿಳೆ ನಾಲ್ಕು ಕಾಲುಗಳು ಹಾಗೂ ಮೂರು ಕೈಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.