Jackfruits Export ಸಿಪ್ಪೆ ಸುಲಿದ ಹಲಸಿನ ಹಣ್ಣು ಕೇರಳದಿಂದ ಲಂಡನ್‌ಗೆ ರಫ್ತು!

Published : Apr 29, 2022, 07:54 PM IST
Jackfruits Export ಸಿಪ್ಪೆ ಸುಲಿದ ಹಲಸಿನ ಹಣ್ಣು ಕೇರಳದಿಂದ ಲಂಡನ್‌ಗೆ ರಫ್ತು!

ಸಾರಾಂಶ

ಸಿಹಿ ಹಲಸಿನ ಹಣ್ಣನ್ನು ಇಡುಕ್ಕಿಯಿಂದ ರಫ್ತು ಆಮದು ಮಾಡಿಕೊಳ್ಳುವ ದೇಶಗಳ ಮಾನದಂಡಗಳ ಪಾಲನೆ ಅತ್ಯಂತ ಕಾಳಜಿಯಿಂದ ಸಿಪ್ಪೆ ತೆಗೆಯಲಾದ ಹಲಸಿನ ಹಣ್ಣು

ಕೇರಳ(ಏ.29):  ಭಾರತದಿಂದ ಹಣ್ಣುಗಳಿಗೆ ವಿದೇಶಗಳಿಂದ ಭಾರಿ ಬೇಡಿಕೆ ವ್ಯಕ್ತವಾಗಿದೆ. ರಾಸಾಯನಿಕ ಸಂಪಡಿಸದೆ, ಅತ್ಯುತ್ತಮ ಗುಣಮಟ್ಟದ ಹಣ್ಣು ಇದೀಗ ವಿದೇಶಗಳಿಗೆ ರಫ್ತಾಗುತ್ತಿದೆ. ಈಗಾಗಲೇ ಭಾರತದ ರಸಭರಿತ ಮಾವಿನ ಹಣ್ಣು ಹಲವು ದೇಶದ ಜನರ ಮನ ತಣಿಸಿದೆ. ಇದೀಗ ಹಸಲಿನ ಹಣ್ಣಿನ ಸರದಿ ಕೇರಳದ ಇಡುಕ್ಕಿಯಿಂದ ಲಂಡನ್‌ಗೆ ಸಿಪ್ಪೆ ಸುಲಿದ ಹಲಸಿನ ಹಣ್ಣನ್ನು ರಫ್ತು ಮಾಡಲಾಗಿದೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಜ್ಯ ತೋಟಗಾರಿಕೆ ಮಿಷನ್ ನೆರವಿನಿಂದ ರೈತರು ಮಹತ್ವದ ಸಾಧನೆ ಮಾಡಿದ್ದಾರೆ. ಇಡುಕ್ಕಿಯಿಂದ ಹಸಲು ರಫ್ತಿಗೆ ಫ್ಲ್ಯಾಗ್ ಆಫ್ ಮಾಡಲಾಗಿದೆ.

Health Tips: ಹಲಸಿನ ಹಣ್ಣು ಥೈರಾಯ್ಡ್ ಸಮಸ್ಯೆ ಹೇಗೆ ನಿವಾರಿಸುತ್ತೆ ಗೊತ್ತಾ?

ಲಂಡನ್‌ಗೆ ರಫ್ತಾದ ಹಲಸಿನ ಹಣ್ಣುಗಳನ್ನು ಆಮದುದಾರರ ಮಾನದಂಡಗಳಿಗೆ ಅನುಗುಣವಾಗಿ ಪೂರೈಸಲಾಗಿದೆ. ಸಿಪ್ಪಿ ಸುಲಿದ ಹಲಸಿನ ಹಣ್ಣುಗಳನ್ನು ನೈರ್ಮಲ್ಯದ ಪರಿಸರದಲ್ಲಿ ಅತ್ಯಂತ ಕಾಳಜಿಯಿಂದ ಸಿಪ್ಪೆ ತೆಗದು ಪ್ಯಾಕ್ ಮಾಡಲಾಗಿದೆ. ಈ ಪ್ಯಾಕ್ ಮಾಡಿದ ಹಲಸಿನ ಹಣ್ಣುಗಳು 12 ರಿಂದ 14 ದಿನ ವ್ಯಾಲಿಡಿಟಿ ಹೊಂದಿದೆ.

ಭಾರತದಲ್ಲಿ ಹಲಸನ್ನು ಮಾಂಸಕ್ಕೆ ಪರ್ಯಾಯ ಎಂದೇ ಕರೆಯುತ್ತಾರೆ. ಪ್ರೋಟಿನ್ ಅಂಶ ಹೆಚ್ಚಿರುವ ಸಸ್ಯಾಹಾರ ಆಹಾರ ಇದಾಗಿದೆ. ಭಾರತದ ಪಶ್ಚಿಮ ಘಟ್ಟಗಳಲ್ಲಿ ಹಲಸು ಯಥೇಚ್ಚವಾಗಿ ಕಾಣಸಿಗುತ್ತದೆ.  ಕೇರಳದ ಅಧಿಕೃತ ಹಣ್ಣು ಪೌಷ್ಟಿಕಾಂಶದ ಪ್ರಯೋಜನ ಹೊಂದಿದೆ. ಹಲಸಿನ ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ವಿಟಮಿನ್‌ಗಳು, ಖನಿಜಗಳು ಮತ್ತು ಫೈಟೊಕೆಮಿಕಲ್‌ಗಳು ಸೇರಿದಂತೆ ಪೋಷಕಾಂಶಗಳು ಸಮೃದ್ಧವಾಗಿವೆ.

ಹಲಸಿನ ಸೀಸನ್‌ ಶುರುವಾಯ್ತು, Jackfruitನಿಂದ ಆರೋಗ್ಯಕ್ಕೇನು ಲಾಭ ತಿಳ್ಕೊಳ್ಳಿ

ಓಟೆ ಹುಳು ಇಲ್ಲದ 25 ಟನ್‌ ಮಾವು ರಫ್ತು!
ರಾಜ್ಯದಲ್ಲಿ ಇದೇ ಮೊದಲ ಬಾರಿ ಸರ್ಕಾರಿ ಸ್ವಾಮ್ಯದಲ್ಲಿ ಪ್ರಾರಂಭವಾಗಿರುವ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸುಸಜ್ಜಿತ ‘ಮಾವು ಸಂಸ್ಕರಣಾ ಘಟಕ’ ಮೊದಲ ವರ್ಷವೇ 25 ಟನ್‌ ಮಾವಿನ ಹಣ್ಣು ಸಂಸ್ಕರಿಸಿ ವಿವಿಧ ದೇಶಗಳಿಗೆ ರಫ್ತು ಮಾಡಿದೆ.

ರಾಜ್ಯ ಮಾವು ಅಭಿವೃದ್ಧಿ ಮಂಡಳಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಮಾಡಿಕೆರೆಯಲ್ಲಿ ಸುಮಾರು 1.10 ಕೋಟಿ ರು. ವೆಚ್ಚದಲ್ಲಿ ಪ್ರಾರಂಭಿಸಿರುವ ಸಂಸ್ಕರಣಾ ಘಟಕವು ಫರೀದಾಬಾದ್‌ನ ರಾಷ್ಟ್ರೀಯ ಸಸ್ಯ ಉತ್ಪನ್ನ ಮತ್ತು ಸಂಸ್ಕರಣ ಕೇಂದ್ರ, ರಾಜ್ಯದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದಿಂದ ಮಾನ್ಯತೆ ಪಡೆದುಕೊಂಡಿದೆ.

ರಾಜ್ಯದ ಮಾವಿನ ಓಟೆಯಲ್ಲಿ ಹುಳ ಕಂಡು ಬರುತ್ತಿತ್ತು. ಇದೇ ಕಾರಣದಿಂದಾಗಿ ಭಾರತದಲ್ಲಿ ಬೆಳೆಯುತ್ತಿರುವ ಮಾವಿನ ಹಣ್ಣುಗಳಿಗೆ ಹೊರ ರಾಷ್ಟ್ರಗಳು ನಿಷೇಧ ಹೇರಿದ್ದವು. ಇದರಿಂದ ಮಾವಿನ ರಫ್ತಿನ ಮೇಲೆ ಪರಿಣಾಮ ಬೀರಿತ್ತು. ಹಾಗಾಗಿ ವಿದೇಶಗಳಿಗೆ ಗುಣಮಟ್ಟದ ಮಾವು ರಫ್ತು ಮಾಡಲು ಸಂಸ್ಕರಣಾ ಘಟಕ ಪ್ರಾರಂಭಿಸಲಾಗಿದೆ. ಈ ಘಟಕದಿಂದ ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಮಾವು ಬೆಳೆಗಾರರು ತಮ್ಮ ಉತ್ಪನ್ನಗಳ ಸಂಸ್ಕರಣೆ ಮಾಡಿ ರಫ್ತು ಮಾಡಲು ನೆರವಾಗಲಿದೆ ಎಂದು ಮಾವು ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅರುಣಾಚಲದ ಮೇಲೆ ಚೀನಾ ಕಣ್ಣು : ಅಮೆರಿಕ
370ನೇ ವಿಧಿ ರದ್ದತಿ ಬಿಜೆಪಿಯ ಹೆಮ್ಮೆ : ಪ್ರಧಾನಿ ಮೋದಿ ಹರ್ಷ