
ಶ್ರೀನಗರ (ಅ.21): ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಶ್ರೀನಗರದಲ್ಲಿರುವ ಅವರ ಅಧಿಕೃತ ಸರ್ಕಾರಿ ವಸತಿ ಫೇರ್‌ವ್ಯೂ ನಿವಾಸವನ್ನು ತೆರವು ಮಾಡುವಂತೆ ನೋಟಿಸ್ ನೀಡಲಾಗಿದೆ ಎಂದು ಶುಕ್ರವಾರ ಖಚಿತಪಡಿಸಿದ್ದಾರೆ. ಮೂಲಗಳ ಪ್ರಕಾರ, ಮುಫ್ತಿ ಅವರಿಗೆ ಶ್ರೀನಗರದಲ್ಲಿ ಪರ್ಯಾಯ ಬಂಗಲೆಯನ್ನು ನೀಡಲಾಗಿದೆ. 2019 ರಲ್ಲಿ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸಿದ ನಂತರ, ಜೆ-ಕೆ ಯ ಎಲ್ಲಾ ಮಾಜಿ ಮುಖ್ಯಮಂತ್ರಿಗಳಿಗೆ ಖಾತರಿಪಡಿಸಿದ ಜೀವಾವಧಿಯ ಸವಲತ್ತುಗಳನ್ನು ಸಹ ಹಿಂಪಡೆಯಲಾಗಿದೆ. 2020 ರಲ್ಲಿ, ಜಮ್ಮು ಮತ್ತು ಕಾಶ್ಮೀರದ ಇಬ್ಬರು ಮಾಜಿ ಸಿಎಂಗಳಾದ ಒಮರ್ ಅಬ್ದುಲ್ಲಾ ಮತ್ತು ಗುಲಾಂ ನಬಿ ಆಜಾದ್ ಈಗಾಗಲೇ ತಮ್ಮ ಅಧಿಕೃತ ನಿವಾಸಗಳನ್ನು ತೊರೆದಿದ್ದರು.
ಮುಫ್ತಿ ಅವರ ತಂದೆ ದಿವಂಗತ ಮುಹಮ್ಮದ್ ಸಯೀದ್ ಅವರು 2005 ರಲ್ಲಿ ಜಮ್ಮು ಮತ್ತು ಕಾಶ್ಮೀರ ಸಿಎಂ ಆಗಿದ್ದರು. ಮೊಹಮದ್ ಸಯೀದ್ ನಿಧನರಾದ ಬಳಿಕವೂ ಮೆಹಬೂಬಾ ಮಫ್ತಿ ಇಲ್ಲಿ ವಾಸಿಸುತ್ತಿದ್ದರು, ಇತರ ರಾಜ್ಯಗಳಿಗಿಂತ ಭಿನ್ನವಾಗಿ, ಜೆ-ಕೆ ಮುಖ್ಯಮಂತ್ರಿಗಳು ತಮ್ಮ ಅಧಿಕಾರಾವಧಿ ಮುಗಿದಾಗ ಅಥವಾ ಅವರು ಅಧಿಕಾರದಿಂದ ಹೊರಹಾಕಲ್ಪಟ್ಟಾಗ ತಮ್ಮ ಸರ್ಕಾರಿ ನಿವಾಸವನ್ನು ಖಾಲಿ ಮಾಡುವ ಜವಾಬ್ದಾರಿಯನ್ನು ಹೊಂದಿಲ್ಲ.
ಮೆಹಬೂಬಾ ಮಫ್ತಿ (Mehbooba Mufti) ಇರುವ ಫೇರ್‌ವ್ಯೂ ನಿವಾಸವು (PDP,Mehbooba Mufti, Srinagar, jammu and kashmir, vacate official bungalow,) ಹಿಂದೆ PAPA-II ಎಂದು ಕರೆಯಲ್ಪಡುವ ಒಂದು ವಿಚಾರಣಾ ಕೇಂದ್ರವಾಗಿತ್ತು ಮತ್ತು ಇದು 1989 ರವರೆಗೆ ಅಧಿಕೃತ ಅತಿಥಿ ಗೃಹವಾಗಿ ಕಾರ್ಯನಿರ್ವಹಿಸಿತು. 1990 ರಲ್ಲಿ ಗಡಿ ಭದ್ರತಾ ಪಡೆ ಇದನ್ನು ಆಕ್ರಮಿಸಿಕೊಂಡ ನಂತರ ಇದನ್ನು ಹೆಸರಿಸಲಾಯಿತು. ವರದಿಗಳ ಪ್ರಕಾರ, ಜೆ-ಕೆ ಹಿರಿಯ ಅಧಿಕಾರಿ ಅಶೋಕ್ ಜೇಟ್ಲಿ ಅವರು 1996 ರಲ್ಲಿ ಇದಕ್ಕೆ ಸ್ಥಳಾಂತರಗೊಂಡು ಅದನ್ನು ತಮ್ಮ ನಿವಾಸವಾಗಿ ಬಳಸುವವರೆಗೂ ಈ ಕೇಂದ್ರವನ್ನು ವಿಚಾರಣೆ ನಡೆಸಲು ಸಾಮಾನ್ಯ ಕೇಂದ್ರವಾಗಿ ಬಳಸಲಾಗುತ್ತಿತ್ತು.
ತ್ರಿವರ್ಣ ಧ್ವಜವನ್ನು ಕೇಸರಿ ಮಾಡಲು ಬಿಜೆಪಿ ಪ್ರಯತ್ನ: ಮೆಹಬೂಬಾ ಮುಫ್ತಿ
"ಫೇರ್ ವ್ಯೂನಿಂದ ಹೊರಹಾಕುವ ಸೂಚನೆಯನ್ನು ಕೆಲವು ದಿನಗಳ ಹಿಂದೆ ನನಗೆ ನೀಡಲಾಗಿತ್ತು. ಇದು ಆಶ್ಚರ್ಯವೇನಿಲ್ಲ ಮತ್ತು ನಿರೀಕ್ಷಿತವಾಗಿಯೇ ಇತ್ತು; ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ. ಈ ಬಂಗಲೆಯು ಜಮ್ಮು ಮತ್ತು ಕಾಶ್ಮೀರದ (jammu and kashmir) ಮುಖ್ಯಮಂತ್ರಿಗಾಗಿ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆಯಾದರೂ, ಅದು ನಿಜವಲ್ಲ ಎಂದು ಅವರು ಹೇಳಿದರು.
Kashmiri Pandits ಜೀವಂತವಿರುಗಾಲೇ ಪಂಡಿತ್ ಸಹೋದರಿಯನ್ನು ಕತ್ತರಿಸಿ ಕೊಂದರು, ಕರಾಳ ಸತ್ಯ ಬಿಚ್ಚಿಟ್ಟ ಪಿಡಿಪಿ ನಾಯಕ!
"ನನ್ನ ತಂದೆಗೆ (ಮುಫ್ತಿ ಮೊಹಮ್ಮದ್ ಸಯೀದ್) ಡಿಸೆಂಬರ್ 2005 ರಲ್ಲಿ ಅವರು ಮುಖ್ಯಮಂತ್ರಿ (CM Office) ಕಚೇರಿಯನ್ನು ಬಿಟ್ಟುಕೊಟ್ಟ ನಂತರ ಈ ಸ್ಥಳವನ್ನು ಹಂಚಲಾಯಿತು. ಆದ್ದರಿಂದ ಆಡಳಿತವು ಉಲ್ಲೇಖಿಸಿದ ಆಧಾರಗಳು ಸರಿಯಾಗಿಲ್ಲ" ಎಂದು ಮುಫ್ತಿ ಹೇಳಿದ್ದಾರೆ. ನೋಟಿಸ್ ಅನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೀರಾ ಅವರನ್ನು ಈ ವೇಳೆ ಕೇಳಲಾಗಿದೆ. ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಈ ವೇಳೆ, ತಮ್ಮ ಕಾನೂನು ತಂಡವನ್ನು ಸಂಪರ್ಕಿಸಿದ ಬಳಿಕ ನಿರ್ಧರಿಸುವುದಾಗಿ ತಿಳಿಸಿದ್ದಾರೆ. "ನಾನು ಉಳಿದುಕೊಳ್ಳಬಹುದಾದ ಸ್ಥಳವನ್ನು ನಾನು ಹೊಂದಿಲ್ಲ. ಆದ್ದರಿಂದ ನಾನು ನಿರ್ಧಾರ ತೆಗೆದುಕೊಳ್ಳುವ ಮೊದಲು ನನ್ನ ಕಾನೂನು ತಂಡವನ್ನು ಸಂಪರ್ಕಿಸಬೇಕು" ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ