ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ದೆಹಲಿಯನ್ನು 'ಎಎಪಿ ಅವಲಂಬಿತ' (ಆಪ್ ನಿರ್ಭರ) ಎಂದು ಬಿಂಬಿಸಲು ಬಯಸುತ್ತದೆ, ಆದರೆ ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಷ್ಟ್ರ ರಾಜಧಾನಿ 'ಸ್ವಾವಲಂಬಿ'ಯಾಗಬೇಕೆಂದು (ಆತ್ಮನಿರ್ಭರ) ಬಯಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನವದೆಹಲಿ (ಅ.21): ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಅಥವಾ ಆಮ್ ಆದ್ಮಿ ಪಕ್ಷವು, ರಾಷ್ಟ್ರ ರಾಜಧಾನಿ 'ಎಎಪಿ ನಿರ್ಭರ್' ಆಗಬೇಕೆಂದು ಬಯಸುತ್ತದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ, ಆದರೆ ಬಿಜೆಪಿಯು ನವದೆಹಲಿಯು ಆತ್ಮನಿರ್ಭರ್ ಆಗಬೇಕೆಂದು ಬಯಸಿದೆ, ಎಂಸಿಡಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಎಪಿ ನಡುವೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದು ನಿಮಗೆ ಬಿಟ್ಟಿದ್ದು ಎಂದು ಅವರು ಹೇಳಿದ್ದಾರೆ. ತೆಹ್ಖಂಡ್‌ನಲ್ಲಿ ತ್ಯಾಜ್ಯದಿಂದ ಇಂಧನ (ಡಬ್ಲ್ಯುಟಿಇ) ಘಟಕದ ಉದ್ಘಾಟನಾ ಸಮಾರಂಭದಲ್ಲಿ, ಕೇಜ್ರಿವಾಲ್ ಆಡಳಿತವು ಹಿಂದಿನ ಮೂರು ನಾಗರಿಕ ಸಂಸ್ಥೆಗಳನ್ನು ಮಲತಾಯಿಗಳಂತೆ ನಡೆಸಿಕೊಂಡಿದೆ ಮತ್ತು ಅದು ಮುನ್ಸಿಪಲ್ ಕಾರ್ಪೊರೇಷನ್‌ಗಳಿಗೆ 40,000 ಕೋಟಿ ರೂ ಬಾಕಿ ಇರಿಸಿಕೊಂಡಿದೆ ಎಂದು ಶಾ ಆರೋಪಿಸಿದರು. ದಕ್ಷಿಣ ದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ ಅವರು, "ಕೇಜ್ರಿವಾಲ್ ನೇತೃತ್ವದ ಪಕ್ಷ ದೆಹಲಿ ಎಎಪಿ ನಿರ್ಭರ್ ಆಗಬೇಕೆಂದು ಬಯಸುತ್ತದೆ. ನಾವು ದೆಹಲಿ ಆತ್ಮನಿರ್ಭರ್ ಆಗಬೇಕೆಂದು ಬಯಸುತ್ತೇವೆ. ಮುಂದಿನ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಚುನಾವಣೆಯಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂದು ಜನರು ನಿರ್ಧರಿಸಬೇಕು. ಅವರು ಆಪ್ ನಿರ್ಭರ್ ಅಥವಾ ಆತ್ಮನಿರ್ಭರ್ ಏನಾಗಬೇಕು ಅನ್ನೋದನ್ನು ನಿರ್ಧರಿಸಬೇಕು" ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಜಾಹೀರಾತುಗಳು ಅಭಿವೃದ್ಧಿಯನ್ನು ತರುತ್ತವೆ ಮತ್ತು ಎಎಪಿ ಸರ್ಕಾರವು ಪ್ರಚಾರಕ್ಕಾಗಿ ವ್ಯಾಪಕವಾಗಿ ಖರ್ಚು ಮಾಡುತ್ತಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ನಂಬಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಟೀಕಿಸಿದ್ದಾರೆ. ಈ ಭ್ರಮೆ ಐದರಿಂದ ಏಳು ವರ್ಷಗಳವರೆಗೆ ಮಾತ್ರ ಇರುತ್ತದೆ’ ಎಂದು ಅವರು ಇನ್ನೊಮ್ಮೆ ಒತ್ತಿ ಹೇಳಿದರು. "ಜನರು 'ವಿಗ್ಯಾಪನ್ ಕೀ ರಾಜನೀತಿ' (ಜಾಹೀರಾತು ರಾಜಕೀಯ) ಮತ್ತು 'ವಿಕಾಸ್ ಕೀ ರಾಜನೀತಿ' (ಅಭಿವೃದ್ಧಿಯ ರಾಜಕೀಯ) ನಡುವೆ ಆಯ್ಕೆ ಮಾಡಬೇಕಾಗುತ್ತದೆ" ಎಂದು ಶಾ ಹೇಳಿದರು.
ಎಂಸಿಡಿ ಗಡಿಗಳ ಅಡಿಯಲ್ಲಿ ವಾರ್ಡ್‌ಗಳನ್ನು ಬದಲಾಯಿಸಲು ಡಿಲಿಮಿಟೇಶನ್ ಪ್ರಕ್ರಿಯೆಯ (delimitation procedure ) ಮುಕ್ತಾಯದೊಂದಿಗೆ ಬಂದ ಅಂತಿಮ ಕರಡು ಪ್ರತಿಗೆ ಕೇಂದ್ರದ ಅನುಮೋದನೆಯು ಸಿಕ್ಕಿದೆ. ಆ ಮೂಲಕ ನಾಗರಿಕ ಸಂಸ್ಥೆ ಚುನಾವಣೆಯನ್ನು ನಡೆಸಲು ಇದ್ದ ಅಂತಿಮ ತಡೆ ಕೂಡ ಈಗ ಸರಿದು ಹೋಗಿದೆ. ಮಾರ್ಚ್‌ನಲ್ಲಿ ನಗರದ ಮೂರು ನಾಗರಿಕ ಸಂಸ್ಥೆಗಳು ಒಂದಾಗಲಿವೆ ಎಂದು ಕೇಂದ್ರವು ಘೋಷಿಸಿದಾಗ ಎಂಸಿಡಿ ಚುನಾವಣೆಯನ್ನು ರದ್ದುಗೊಳಿಸಲಾಯಿತು. ಮೇ ತಿಂಗಳಲ್ಲಿ, ಏಕೀಕೃತ ಎಂಸಿಡಿಯನ್ನು (MCD) ಸ್ಥಾಪಿಸಲಾಯಿತು.
ಭಾಷಾ ನಾಶಕ್ಕೆ ಅಮಿತ್ ಶಾ ಯತ್ನ: ಕುಮಾರಸ್ವಾಮಿ ಕಿಡಿ
ಈಗ ಡಿಲಿಮಿಟೇಶನ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಚುನಾವಣಾ (MCD Election) ದಿನಾಂಕಗಳನ್ನು ಘೋಷಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಆಡಳಿತವು ರಾಜ್ಯ ಚುನಾವಣಾ ಆಯೋಗವನ್ನು (State Election Commision) ಒತ್ತಾಯಿಸಿದೆ. ವರದಿಗಳ ಪ್ರಕಾರ, ಎಂಸಿಡಿ ಚುನಾವಣೆಯು ಈ ವರ್ಷದ ಕೊನೆಯಲ್ಲಿ ಅಥವಾ 2023 ರ ಆರಂಭದಲ್ಲಿ ನಡೆಯಬಹುದು.
ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ ಶಾ, “ಪತ್ರಿಕಾ ಸಂದರ್ಶನಗಳು ಬದಲಾವಣೆಗಳನ್ನು ಸೃಷ್ಟಿಸುತ್ತವೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಜಾಹೀರಾತುಗಳು ಸಾರ್ವಜನಿಕರನ್ನು ದಾರಿ ತಪ್ಪಿಸಬಹುದು ಎಂದು ಅವರು ಹೇಳಿದರು. ಜನರನ್ನು ಒಂದೆರಡು ಬಾರಿ ದಾರಿ ತಪ್ಪಿಸಬಹುದು, ಮೂರನೇ ಬಾರಿ ದಾರಿ ತಪ್ಪಿಸಲು ಬಂದರೆ ಅವರೇ ಪಾಠ ಕಲಿಸುತ್ತಾರೆ ಎಂದು ಹೇಳಿದರು.
Lok Sabha Elections 2024: ಬಿಜೆಪಿ ಸೋತ 144 ಕ್ಷೇತ್ರ ಗೆಲ್ಲಲು ಮೋದಿ, ಶಾ ಪಣ
ಎಂಸಿಡಿಗಳನ್ನು ಏಕೀಕರಿಸಿದ ಹಿಂದಿನ ಕಾರಣ ಏನು ಎಂದು ನಾನು ಸಿಎಂ ಕೇಜ್ರಿವಾಲ್ ಅವರನ್ನು ಕೇಳಲು ಬಯಸುತ್ತೇನೆ. 40 ಸಾವಿರ ಕೋಟಿ ಬಾಕಿಯನ್ನು ಕೇಜ್ರಿವಾಲ್ (Delhi government) ಸರ್ಕಾರ ಪಾವತಿಸಿಲ್ಲ ಎಂದು ಅವರು ಈ ವೇಳೆ ಹೇಳಿದರು. "ಎಎಪಿ ಸರ್ಕಾರವು ಎಂಸಿಡಿಗೆ ಮಲತಾಯಿ ಧೋರಣೆ ನೀಡಿತ್ತು ಎಂದರು. ದೆಹಲಿಯಲ್ಲಿ ಎಎಪಿ ಅಧಿಕಾರದಲ್ಲಿರಬಹುದೆಂದು ನಾವು ಜನರಿಗೆ ಭರವಸೆ ನೀಡಲು ಬಯಸುತ್ತೇವೆ, ಆದರೆ ಕೇಂದ್ರದಲ್ಲಿ ನಾವು ಅಧಿಕಾರದಲ್ಲಿದ್ದೇವೆ. ಅಭಿವೃದ್ಧಿ ಯೋಜನೆಗಳನ್ನು ನೀಡುತ್ತೇವೆ ( amit shah) ಎಂದರು.