
ಇಂಟರ್‌ನೆಟ್‌ನಲ್ಲಿ ಆಗಾಗ ನಮ್ಮ ಪೂರ್ವಜರು ಬಳಸುತ್ತಿದ್ದ ಹಳೆಯ ವಸ್ತುಗಳು ನೋಡಲು ಸಿಗುತ್ತವೆ. ಅವುಗಳು ಸೀದಾ ನಮ್ಮನ್ನು ಇತಿಹಾಸವನ್ನು ಮೆಲುಕು ಹಾಕುವಂತೆ ಮಾಡುತ್ತದೆ. ಕಾಲ ಬದಲಾದಂತೆ ಇವುಗಳೂ ಬಹಳ ನೋಡಲು ಸಿಗುವುದು ಕೂಡ ಬಹಳ ಅಪರೂಪವಾದ ಕಾರಣ ಇಂಟರ್‌ನೆಟ್‌ನಲ್ಲಿ ಇವುಗಳು ಸಾಕಷ್ಟು ವೈರಲ್ ಆಗುತ್ತವೆ. ಅದೇ ರೀತಿ ಈಗ ಸಾಮಾಜಿಕ ಜಾಲತಾಣದಲ್ಲಿ ಬ್ರಿಟಿಷ್ ಇಂಡಿಯಾ ಕಾಲದಲ್ಲಿ ಕ್ಲಾರ್ಕ್ ಆಗಿದ್ದ ವ್ಯಕ್ತಿಯೊಬ್ಬರ ವೀಡಿಯೋವೊಂದು ಸಖತ್ ವೈರಲ್ ಆಗಿದೆ.
1928ರ ಕಾಲಘಟ್ಟದ ಬ್ರಿಟೀಷ್ ಭಾರತೀಯ (British India) ಪಾಸ್‌ಪೋರ್ಟ್ ಇದಾಗಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪಾಸ್‌ಪೋರ್ಟ್‌ಗೆ ಬಳಸಿದ್ದ ಪೇಪರ್‌ನ ಗುಣಮಟ್ಟ ಹಾಗೂ ಆಗಿನ ಕಾಲದ ವಿದ್ಯಾವಂತ ಜನರ ಕೈ ಬರಹ ಎಷ್ಟು ಸುಂದರವಾಗಿತ್ತು ಎಂದು ಜನ ಈ ಪಾಸ್‌ಪೋರ್ಟ್ ನೋಡಿ ಹೊಗಳುತ್ತಿದ್ದಾರೆ. ಈ ಪಾಸ್ಪೋರ್ಟ್ ನೋಡಿದಾಗಲೇ ಇದು ಹಳೆಯದೆಂದು ತಿಳಿಯುತ್ತದೆ. ಜೊತೆಗೆ ಈ ಪಾಸ್ಪೋರ್ಟ್ ಬಳಸಿದವರು 1928 ಹಾಗೂ 1938ರಲ್ಲಿ ಕ್ರಮವಾಗಿ ಇರಾನ್ ಹಾಗೂ ಇರಾಕ್‌ಗೆ ಹೋಗಿದ್ದರು ಎಂಬುದು ತಿಳಿಯುತ್ತದೆ.
ಬ್ರಿಟಿಷ್ ಆಳ್ವಿಕೆಯ 40 ವರ್ಷದಲ್ಲಿ 16.5 ಕೋಟಿಗೂ ಹೆಚ್ಚು ಭಾರತೀಯರ ಸಾವು, 3600 ಲಕ್ಷ ಕೋಟಿ ರು. ಲೂಟಿ!
ಅಂದಹಾಗೆ ಈ ಪಾಸ್‌ಪೋರ್ಟ್ (Passport) ಬ್ರಿಟಿಷ್ ಸರ್ಕಾರದಲ್ಲಿ (British Govt) ಕ್ಲಾರ್ಕ್ ಆಗಿ ಕೆಲಸ ಮಾಡಿದವರ ಪಾಸ್‌ಪೋರ್ಟ್ ಆಗಿದೆ. ಈ ವೀಡಿಯೋವನ್ನು ವಿಂಟೇಜ್ ಪಾಸ್‌ಪೋರ್ಟ್ ಕಲೆಕ್ಟರ್ (Vintage Passport Collector) ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಈ ಪಾಸ್‌ಪೋರ್ಟ್‌ನ ವೀಡಿಯೋ ಪೋಸ್ಟ್ ಮಾಡಲಾಗಿದೆ. ಸೈಯದ್ ಮೊಹಮ್ಮದ್ ಖಲೀಲ್ ರಹಮಾನ್ ಶಾ ಹೆಸರಿನಲ್ಲಿ ಈ ಪಾಸ್‌ಪೋರ್ಟ್ ಇದ್ದು, ಅವರು ಬ್ರಿಟಿಷ್ ಕಾಲದಲ್ಲಿ ಸರ್ಕಾರಿ ಕ್ಲಾರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಪಾಸ್‌ಪೋರ್ಟ್ ಗಮನಿಸಿದರೆ ಅವರು ಆಗಿನ ಕಾಲದಲ್ಲಿಯೇ ಇರಾಕ್ (Iraq) ಇರಾನ್‌ಗೆ ಭೇಟಿ ನೀಡಿರುವುದು ತಿಳಿಯುತ್ತದೆ.
ಇನ್ನು ಈ ವೀಡಿಯೋಗೆ 70 ಸಾವಿರಕ್ಕೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಒಬ್ಬರು ಆಗಿನ ಪಾಸ್‌ಪೋರ್ಟ್‌ನ ಕ್ವಾಲಿಟಿ ಎಷ್ಟು ಚೆನ್ನಾಗಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಬಹುಶಃ ಆ ಸಮಯದಲ್ಲಿ ಇರಾನ್ (Iran) ಹಾಗೂ ಇರಾಕ್ ಬಹಳ ಜನರು ಪ್ರವಾಸ ಹೋಗಲು ಬಯಸುತ್ತಿದ್ದ ಪ್ರದೇಶಗಳಾಗಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ.(ಮಧ್ಯಪ್ರಾಚ್ಯದ ಈ ದೇಶಗಳು ಪ್ರಸ್ತುತ ಯುದ್ಧ ಆಂತರಿಕ ಕಲಹದ ಕಾರಣಕ್ಕೆ ದುಸ್ಥಿತಿಯಲ್ಲಿವೆ) ಮತ್ತೊಬ್ಬರು ಆ ಪಾಸ್‌ಪೋರ್ಟ್‌ನಲ್ಲಿ (Passport) ಕೈ ಬರಹ ಎಷ್ಟು ಚೆನ್ನಾಗಿತ್ತು ಎಂದು ಶ್ಲಾಘಿಸಿದ್ದಾರೆ. ಮತ್ತೆ ಕೆಲವರು ಆಗ ಭಾರತದ ಗಡಿಯೂ ಇರಾನ್ ಜೊತೆ ಹಂಚಿಕೆಯಾಗುತ್ತಿತ್ತು ಎಂಬುದನ್ನು ಇದರಿಂದ ತಿಳಿಯಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಪಾಸ್‌ಪೋರ್ಟ್ ಅನ್ನು ಅಲಹಾಬಾದ್‌ನಲ್ಲಿ (Alahabad) ತಯಾರಿಸಲಾಗುತ್ತಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಆಗಿನ ಕಾಲದ ವಸ್ತುಗಳೆಲ್ಲಾ ಈಗ ಅಪರೂಪಕ್ಕೆ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈಗಿನ ತಲೆಮಾರಿಗೆ ಆಗಿನ ಕಾಲಘಟ್ಟದ ಚಿತ್ರಣ ನೀಡುತ್ತಿದೆ.
8 ಕೋಟಿಗೂ ಅಧಿಕ ಮೊತ್ತಕ್ಕೆ ಸೇಲ್ ಆಯ್ತು ರಾಜಕುಮಾರಿ ಡಯನಾ ಸ್ವೆಟರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ