ಮೆಟಾ, ಮಾರ್ಕ್‌ ಜುಕರ್‌ಬರ್ಗ್‌ಗೆ ಮಾನನಷ್ಟ ಮೊಕದ್ದಮೆ ನೋಟಿಸ್‌ ಕಳಿಸಲಿರುವ ಸಂಸದೀಯ ಸಮಿತಿ

By Santosh Naik  |  First Published Jan 14, 2025, 4:14 PM IST

ಮೋದಿ ಸರ್ಕಾರ ಕೋವಿಡ್ ನಂತರ ಸೋತಿದೆ ಎಂಬ ಹೇಳಿಕೆ ನೀಡಿದ್ದಕ್ಕಾಗಿ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್‌ಗೆ ಸಂಸದೀಯ ಸಮಿತಿಯು ಸಮನ್ಸ್ ಕಳುಹಿಸಲಿದೆ. ತಪ್ಪು ಮಾಹಿತಿ ಹರಡಿದ್ದಕ್ಕಾಗಿ ಮೆಟಾ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿದ್ದಾರೆ.


ನವದೆಹಲಿ (ಜ.14): ಭಾರತದ ಸಂಸದೀಯ ಸಮಿತಿಯು ಮೆಟಾ ಹಾಗೂ ಮಾನನಷ್ಟ ಮೊಕದ್ದಮೆ ಸಮನ್ಸ್ ಕಳುಹಿಸಲಿದೆ. ಕೋವಿಡ್ ನಂತರ ಭಾರತದಲ್ಲಿ ಮೋದಿ ಸರ್ಕಾರ ಸೋತಿದೆ ಎಂದು ಹೇಳಿಕೆ ನೀಡಿರುವ META ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರಿಗೆ ಈ ಸಮನ್ಸ್ ಕಳುಹಿಸಲಾಗುವುದು ಎಂದು ತಿಳಿಸಿದೆ. ತಪ್ಪು ಮಾಹಿತಿ ಹರಡಿದ್ದಕ್ಕಾಗಿ META ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಸಂಸದ ಮತ್ತು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸ್ಥಾಯಿ ಸಮಿತಿಯ ಅಧ್ಯಕ್ಷ ನಿಶಿಕಾಂತ್ ದುಬೆ ಮಂಗಳವಾರ ಹೇಳಿದ್ದಾರೆ. ಜನವರಿ 10 ರಂದು ಪಾಡ್‌ಕ್ಯಾಸ್ಟ್‌ನಲ್ಲಿ ಸಿಇಒ ಮಾರ್ಕ್ ಜುಕರ್‌ಬರ್ಗ್, '2024 ರಲ್ಲಿ ಕೋವಿಡ್‌ನಿಂದಾಗಿ ಸರ್ಕಾರಗಳ ಪತನವು ಸಾರ್ವಜನಿಕರಿಗೆ ಅವುಗಳ ಮೇಲಿನ ಅಪನಂಬಿಕೆಯನ್ನು ತೋರಿಸುತ್ತದೆ' ಎಂದು ಹೇಳಿದರು. ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್, 'ಭಾರತದ ಚುನಾವಣೆಯಲ್ಲಿ 64 ಕೋಟಿ ಜನರು ಭಾಗವಹಿಸಿದ್ದರು. ಜನರು ಪ್ರಧಾನಿ ಮೋದಿ ಮತ್ತು ಎನ್‌ಡಿಎಯನ್ನು ನಂಬಿದ್ದರು. ಜುಕರ್‌ಬರ್ಗ್ ಸತ್ಯ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಬೇಕು' ಎಂದು ಹೇಳಿದ್ದರು.

META ಭಾರತೀಯ ಸಂಸತ್ತಿನಲ್ಲಿ ಕ್ಷಮೆಯಾಚಿಸಬೇಕು: ಲೋಕಸಭೆಯಲ್ಲಿ, ಗೊಡ್ಡಾ ಸಂಸದ ನಿಶಿಕಾಂತ್ ದುಬೆ ತಿಳಿಸಿದ್ದು "ನಾವು ಮೆಟಾದಿಂದ ಅಧಿಕಾರಿಗಳನ್ನು ಕರೆಯಲು ನಿರ್ಧರಿಸಿದ್ದೇವೆ. ಕೋವಿಡ್-19 ರ ನಂತರ ಸರ್ಕಾರದ ವಿರುದ್ಧ ವಾತಾವರಣ ಸೃಷ್ಟಿಯಾಗಿದೆ ಎಂದು ಜುಕರ್‌ಬರ್ಗ್ ಹೇಳಿಕೆ ನೀಡುವ ಮೂಲಕ ಹದ್ದು ಮೀರಿದ್ದಾರೆ. ಅದರಲ್ಲಿ ಅವರು ಭಾರತದ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಅವರ ಹೇಳಿಕೆ ಕಳವಳಕಾರಿಯಾಗಿದೆ. ಅಂತಹ ಹೇಳಿಕೆಯು ಅವರು ದೇಶದ ಪ್ರಜಾಪ್ರಭುತ್ವದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಮತ್ತು ಬಿಜೆಪಿ-ಎನ್‌ಡಿಎ ಸೋತಿದೆ ಎನ್ನುವ ತಪ್ಪು ಮಾಹಿತಿಯನ್ನು ನೀಡುವ ಮೂಲಕ ಜಗತ್ತನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ತೋರಿಸುತ್ತದೆ' ಎಂದಿದ್ದಾರೆ.

Tap to resize

Latest Videos

"ನಾವು META ಅಧಿಕಾರಿಗಳು ಕರೆಯಲು ನಿರ್ಧರಿಸಿದ್ದೇವೆ. ಅವರು ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ನಮ್ಮ ಸಮಿತಿಯು ಕ್ರಮ ಕೈಗೊಳ್ಳುತ್ತದೆ. ನಾವು ಸಮಿತಿ ಸದಸ್ಯರೊಂದಿಗೆ ಮಾತನಾಡುತ್ತೇವೆ ಮತ್ತು ಜನವರಿ 20-24 ರ ನಡುವೆ ಹಾಜರಾಗಲು ಕೇಳುತ್ತೇವೆ" ಎಂದು ದುಬೆ ಹೇಳಿದರು.

ಮೆಟ್ರೋ ಪಿಲ್ಲರ್‌, ವಯಾಡಕ್ಟ್‌ಗಳ ಮೇಲ್ವಿಚಾರಣೆಗೆ ಎಐ, ಡ್ರೋನ್‌ ಬಳಕೆ ಮಾಡಲಿರುವ ಬೆಂಗಳೂರು ಮೆಟ್ರೋ!

ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಸರ್ಕಾರಗಳ ಮೇಲಿನ ನಂಬಿಕೆಯ ಕೊರತೆಯ ಬಗ್ಗೆ ಮಾರ್ಕ್ ಜುಕರ್‌ಬರ್ಗ್ ಜೋ ರೋಗನ್ ಅವರೊಂದಿಗಿನ ಪಾಡ್‌ಕ್ಯಾಸ್ಟ್‌ನಲ್ಲಿ ಚರ್ಚಿಸುತ್ತಿದ್ದರು. ಈ ಸಂದರ್ಭದಲ್ಲಿ, ಅವರು 2024 ಒಂದು ದೊಡ್ಡ ಚುನಾವಣಾ ವರ್ಷವಾಗಿತ್ತು ಎಂದು ಹೇಳಿದರು. ಭಾರತ ಸೇರಿದಂತೆ ಈ ಎಲ್ಲಾ ದೇಶಗಳಲ್ಲಿ ಚುನಾವಣೆಗಳು ನಡೆದವು. ಬಹುತೇಕ ಎಲ್ಲಾ ಆಡಳಿತಗಾರರು ಚುನಾವಣೆಯಲ್ಲಿ ಸೋತರು.
ಜನರ ಅಸಮಾಧಾನ ಮತ್ತು ಕೋಪವು ಪ್ರಪಂಚದಾದ್ಯಂತದ ಚುನಾವಣಾ ಫಲಿತಾಂಶಗಳ ಮೇಲೆ ಪರಿಣಾಮ ಬೀರಿತು. ಎಲ್ಲಾ ಆಡಳಿತಾಧಿಕಾರಿಗಳು ಸೋತರು. ನರೇಂದ್ರ ಮೋದಿ ನೇತೃತ್ವದ ಸರ್ಕಾರವೂ ಸೋತಿತು ಎಂದು ಹೇಳಿದ್ದರು.

ಟ್ರಂಪ್ ಪ್ರಭಾವ; ಮೆಟಾ ಕಚೇರಿಗಳಲ್ಲಿದ್ದ ಟ್ಯಾಂಪೂನ್‌ಗಳನ್ನು ತೆಗೆಯಲು ಜುಕರ್‌ಬರ್ಗ್ ಆದೇಶ

click me!