ನವದೆಹಲಿ(ಮಾ.30): ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ದೆಹಲಿಯ ಎಲ್ಲಾ ಮೂರು ಮುನ್ಸಿಪಲ್ ಕಾರ್ಪೋರೇಶನ್(MCD)ಗಳನ್ನು ಏಕೀಕರಣ ಮಾಡುವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕರವಾಗಿದೆ. ಈ ಕುರಿತು ಲೋಕಸಭೆಯಲ್ಲಿ ಮಾನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ದೆಹಲಿಯ ಮೂರು ಪಾಲಿಕೆಗಳನ್ನು ಏಕೀಕರಿಸುವ ಮಸೂದೆ ಸಾಂವಿಧಾನಿಕವಾಗಿದೆ ಎಂದಿದ್ದಾರೆ.
ಈ ಹಿಂದೆ ದೆಹಲಿಯಲ್ಲಿ ಒಂದೇ ಮುನ್ಸಿಪಲ್ ಕಾರ್ಪೋರೇಶನ್ ಇತ್ತು. ಬಳಿಕ ತಿದ್ದುಪಡಿ ಮಾಡಲಾಗಿತ್ತು. ಇದೀಗ ಸಂವಿಧಾನದ 239 ಎಎ ಅಡಿಯಲ್ಲಿ ತಿದ್ದುಪಡಿ ಮಾಡಲಾಗಿದೆ. ಈ ಅಧಿಕಾರ ಸಂಸಸ್ತಿಗೆ ಇದೆ ಎಂದು ಅಮಿತ್ ಶಾ ಹೇಳಿದ್ದಾರೆ. ಇಷ್ಟೇ ಅಲ್ಲ ಪೌರ ಸಂಸ್ಥೆಗಳ ಏಕೀಕರಣ ಅಗತ್ಯ ಎಂದರು.
Historic Agreement ಏನಿದು 50 ವರ್ಷ ಹಳೆಯ ಅಸ್ಸಾಂ ಮೇಘಾಲಯ ಗಡಿ ವಿವಾದ?
ದೆಹಲಿಯ ಮೂರು ಮುನ್ಸಿಪಲ್ ಕಾರ್ಪೋರೇಶನ್ ವಿಲೀನಗೊಳಿಸುವ ನಿರ್ಧಾರವನ್ನು ಕೇಂದ್ರ ಸಂಪುಟ ಕಳೆದ ವಾರ ಅಂಗೀಕರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಮಿತ್ ಶಾ ಲೋಕಸಭೆಯಲ್ಲಿ ಹೇಳಿದರು.
ಏಕರೂಪದಲ್ಲಿದ್ದ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ನಿಗಮಗಳನ್ನು 2011ರ ತಿದ್ದುಪಡಿ ಕಾಯ್ದೆಯಲ್ಲಿ ಮೂರು ನಿಗಮಗಳಾಗಿ ವಿಭಜಿಸಲಾಗಿದೆ. ದಕ್ಷಿಣ ದೆಹೆಲಿ ಮುನ್ಸಿಪಲ್ ಕಾರ್ಪರೇಶನ್, ಉತ್ತರ ದೆಹಲಿ ಕಾರ್ಪೋರೇಶನ್ ಹಾಗೂ ಪೂರ್ವ ದೆಹಲಿ ಕಾರ್ಪೋರೇಶನ್ ಎಂದು ವಿಂಗಡಿಸಲಾಗಿದೆ.
ಮಾರ್ಚ್ 25 ರಂದು ಸಂಸತ್ತಿನಲ್ಲಿ ದೆಹಲಿಯ ಮೂರು ಮುನ್ಸಿಪಲ್ ಕಾರ್ಪೋರೇಶನ್ ನಿಗಮಗಳನ್ನು ಏಕೀಕರಿಸುವ ತಿದ್ದುಪಡಿ ಮಸೂದೆಯನ್ನು ಮಂಡಿಸಿತು. 2022ರ ತಿದ್ದುಪಡಿ ಮಸೂದೆಗೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ರೀತಿ ಏಕೀಕರಣ ಮಾಡುವ ಅಧಿಕಾರ ಕೇಂದ್ರಕ್ಕಿಲ್ಲ ಎಂದಿತ್ತು.
ಮಾ.31ಕ್ಕೆ ಕರ್ನಾಟಕಕ್ಕೆ ಅಮಿತ್ ಶಾ ಭೇಟಿ, ರಾಜ್ಯ ಬಿಜೆಪಿಯಲ್ಲಿ ಸಂಚಲನ!
ಮೂರು ನಿಗಮಗಳು ತಮ್ಮದೇ ನೀತಿ ನಿಮಯಗಳನ್ನು ಅನುಸರಿಸುತ್ತಿತ್ತು. ಇದರಲ್ಲಿ ಏಕರೂಪದ ಕಾನೂನು ಇರಲಿಲ್ಲ. ಇದರಿಂದ ಹಲವು ತೊಡಕಾಗಿದೆ. ಏಕೀಕರಣ ಮಾಡುವುದರಿಂದ ಏಕರೂಪದ ಕಾನೂನು, ನೀತಿ ಜಾರಿಯಾಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಏಪ್ರಿಲ್ 1ಕ್ಕೆ ಅಮಿತ್ ಶಾ ರಾಜ್ಯಕ್ಕೆ ಭೇಟಿ
ಸರ್ಕಾರದಲ್ಲಿ ಮಹತ್ತರ ಬದಲಾವಣೆ ಆಗುತ್ತಾ ಎಂಬ ಸುದ್ದಿಗಾರರ ಪ್ರಶ್ನೆಗೆ ಏಪ್ರಿಲ್ 1ರಂದು ಅಮಿತ್ ಶಾ ಬಂದ ಬಳಿಕ ಎಲ್ಲವೂ ತಿಳಿಯಲಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮದ ಧಾರ್ಮಿಕ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಏ.1 ರಂದು ಅಮಿತ್ ಶಾ ರಾಜ್ಯಕ್ಕೆ ಬರಲಿದ್ದು ಅವರು ಏನು ಸಲಹೆ-ಸೂಚನೆ ಕೊಡುತ್ತಾರೋ ಗೊತ್ತಿಲ್ಲ, ಅವರ ಬಂದ ಬಳಿಕ ಎಲ್ಲವೂ ತಿಳಿಯಲಿದೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದ್ದು, ಶಾ ಭೇಟಿ ಬಳಿಕ ಅದು ಕೂಡ ತಿಳಿದು ಬರಲಿದೆ ಎಂದರು.ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಿ ವಿಶ್ವಾಸ ಗೆಲ್ಲಿಸುವ ಉದ್ದೇಶದಿಂದ ನಾನು, ಸಿಎಂ ಹಾಗೂ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಳ್ಳಲಿದ್ದು ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರ ಪಡೆಯಲಿದ್ದು 130-140 ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.