
ನವದೆಹಲಿ(ಅ.12): ಭಾರತದಲ್ಲಿ ಪಾರ್ಲೆ ಬಿಸ್ಕೆಟ್ ಅತ್ಯಂತ ಜನಪ್ರಿಯವಾಗಿದೆ. ಹಲವರ ನೆಚ್ಚಿನ ಬಿಸ್ಕೆಟ್ ಪಾರ್ಲೆG ತಗೆದುಕೊಂಡಿರುವ ನಿರ್ಧಾರಕ್ಕೆ ಇದೀಗ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಭಾರತೀಯ ಸುದ್ದಿ ವಾಹಿನಿಗಳಲ್ಲಿ ಪಾರ್ಲೆ ಜಾಹೀರಾತು ನೀಡುವುದಿಲ್ಲ ಎಂದು ಘೋಷಿಸಿದೆ. ಭಾರತೀಯ ಸುದ್ದಿ ವಾಹಿನಿಗಳು ಆಕ್ರಮಣಕಾರಿ ಹಾಗೂ ವಿಷಕಾರಿ ಅಂಶಗಳನ್ನು ಉತ್ತೇಜಿಸುತ್ತಿದೆ ಎಂದು ಪಾರ್ಲೆG ಹೇಳಿದೆ.
TRP ಸಮರಕ್ಕೆ ದೊಡ್ಡ ಟ್ವಿಸ್ಟ್ , FIRನಲ್ಲಿ ರಿಪಬ್ಲಿಕ್ ಟಿವಿ ಹೆಸರೇ ಇಲ್ಲ!
ಮಿಂಚ್ ವರದಿ ಪ್ರಕಾರ , ಭಾರತೀಯ ಸುದ್ದಿ ವಾಹನಿಗಳು ಟಿಆರ್‌ಪಿ ಗಾಗಿ ಕಸರತ್ತು ಮಾಡುತ್ತಿದೆ. ಮುಂಬೈ ಪೊಲೀಸರು ಟಿಆರ್‌ಪಿ ಹಗರಣ ಬಯಲಿಗೆಳಿದಿದ್ದಾರೆ. ಹೀಗಾಗಿ ಸುದ್ದಿ ವಾಹಿನಿಗಳಲ್ಲಿ ಜಾಹೀರಾತು ನೀಡುವುದಿಲ್ಲ ಎಂದು ಪಾರ್ಲೆ ಮುಖ್ಯಸ್ಥ ಕೃಷ್ಣರಾವ್ ಬುದ್ಧ ಹೇಳಿದ್ದಾರೆ.
TRP ವಾರ್, ಮುಂಬೈ ಪೊಲಿಸ್ ಕಮಿಷನರ್ ವಿರುದ್ಧ ಅರ್ನಬ್ ಕೆಂಡ!
ಟಿವಿ ರೇಟಿಂಗ್‌ಗಾಗಿ ಸುದ್ದಿ ವಾಹನಿಗಳು ಹಗರಣ ನಡೆಸುತ್ತಿದೆ. ಹೀಗಾಗಿ ಜಾಹೀರಾತು ನೀಡುವುದಿಲ್ಲ ಎಂದು ಪಾರ್ಲೆ ಅಧೀಕೃತ ಟ್ವಿಟರ್ ಖಾತೆಯಲ್ಲಿ ಸ್ಪಷ್ಟಪಡಿಸಿದೆ. ಇನ್ನು ಪಾರ್ಲೆG ಕಂಪನಿಗೂ ಮೊದಲು ಬಜಾಜ್ ಇದೇ ನಿರ್ಧಾರ ಕೈಗೊಂಡಿತ್ತು. ಟಿಆರ್‌ಪಿ ರೇಟಿಂಗ್ ಹರಗಣ ನಡೆಸಿದ 3 ಚಾನೆಲ್‌ಗಳಿಗೆ ಯಾವುದೇ ಜಾಹೀರಾತು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ