'ಎಲೆ ನೋಡಿ ರಾಹುಲ್-ಪ್ರಿಯಾಂಕಾ ಬೆಳೆ ಹೇಳಿದ್ರೆ ರಾಜಕೀಯ ನಿವೃತ್ತಿ'

By Suvarna News  |  First Published Oct 12, 2020, 6:27 PM IST

ರಾಹುಲ್ ಮತ್ತು ಪ್ರಿಯಾಂಕಾ ಮೇಲೆ ವಾಗ್ದಾಳಿ/ ಎಲೆ ನೋಡಿ ಬೆಳೆ ಗುರುತಿಸಿದರೆ ರಾಜಕಾರಣದಿಂದ ನಿವೃತ್ತಿ ತೆಗೆದುಕೊಳ್ಳುತ್ತೇನೆ/ ಕೃಷಿ ಮಸೂದೆ ವಿಚಾರದಲ್ಲಿ ತಿಳಿದುಕೊಳ್ಳದೆ ಟೀಕೆ ಮಾಡ್ತಿದ್ದಾರೆ/ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸವಾಲು


ನವದೆಹಲಿ(ಅ. 12)  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಮೇಲೆ ಕೇಂದ್ರ ಸಚಿವ  ಗಜೇಂದ್ರ ಸಿಂಗ್ ಶೇಖಾವತ್  ವಾಗ್ದಾಳಿ ಮಾಡಿದ್ದಾರೆ. ಕೃಷಿ ಮಸೂದೆ ವಿಚಾರದಲ್ಲಿ  ರಾಹುಲ್ ಮತ್ತು ಪ್ರಿಯಾಂಕಾ ರೈತರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಹುಲ್ ಮತ್ತು ಪ್ರಿಯಾಂಕಾಗೆ ಮೇಕೆ ಮತ್ತು ಕುರಿ ನಡುವಿನ ವ್ಯತ್ಯಾಸ ಹೇಳಲು ಗೊತ್ತಿಲ್ಲ,, ತಿಳಿದುಕೊಳ್ಳದೆ ಕೃಷಿ ಮಸೂದೆ ವಿಚಾರದಲ್ಲಿ ಟೀಕೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

Latest Videos

undefined

'ರಾಹುಲ್ ಗಾಂಧಿ ತಮ್ಮನ್ನು ತಾವು ರಾಜ ಎಂದುಕೊಂಡಿದ್ದಾರೆ'

ಬಿಜೆಪಿ ರೈತ ಘಟಕವನ್ನು ಮುನ್ನಡೆಸುತ್ತಿರುವ ಶೇಖಾವತ್, ರಾಹುಲ್ ಮತ್ತು ಪ್ರಿಯಾಂಕಾಗೆ ಹೊಲದಲ್ಲಿ ಬೆಳೆದಿರುವ ಬೆಳೆಯ ಎಲೆಗಳನ್ನು ನೋಡಿ ಅದು ಯಾವುದೆಂದು ಗುರುತಿಸಲು ಸಾಧ್ಯವಿಲ್ಲ. ಒಂದು ವೇಳೆ ಸರಿಯಾಗಿ ಗುರುತಿಸಿದರೆ ನಾನು ರಾಜಕಾರಣದಿಂದ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಕೃಷಿ ಕಾಯ್ದೆ ವಿರೋಧಿಸಿ  ರಾಹುಲ್ ಗಾಂಧಿ ಪಂಜಾಬಿನಲ್ಲಿ  'ಖೇತಿ ಬಚಾವೊ ಯಾತ್ರೆ' ನಡೆಸಿದ್ದರು. ಎಪಿಎಂಸಿ ಕಾಯಿದೆ ಮತ್ತು ಕೃಷಿ ಕಾಯಿದೆ ವಿರೋಧಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸಿತ್ತು. 

click me!