ಆಯೋಧ್ಯೆ ರಾಮ ಮಂದಿರ ಆವರಣದಲ್ಲಿ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪ್ಯಾರಾ ಮಿಲಿಟರಿ ಯೋಧ ಗುಂಡೇಟಿಗೆ ಬಲಿಯಾಗಿದ್ದಾರೆ. ಮೂರು ತಿಂಗಳಲ್ಲಿ ನಡೆದ 2 ಘಟನೆ ಇದಾಗಿದೆ.
ಆಯೋಧ್ಯೆ(ಜೂ.19) ಪವಿತ್ರ ಆಯೋಧ್ಯೆ ರಾಮ ಮಂದಿರಕ್ಕೆ ಇದೀಗ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ಭಾರಿ ಬೆದರಿಕೆಗಳ ಕಾರಣ ಆಯೋಧ್ಯೆಯಲ್ಲಿ ಭಾರಿ ಭದ್ರತೆಯನ್ನೂ ನಿಯೋಜಿಸಲಾಗಿದೆ. ಹೀಗೆ ಭದ್ರತೆಗಾಗಿ ನಿಯೋಜನೆಗೊಂಡ ಪ್ಯಾರಾ ಮಿಲಿಟರಿ ಯೋಧ ತನ್ನದೇ ಗುಂಡಿಗೆ ಬಲಿಯಾಗಿದ್ದಾನೆ. ಅಚಾನಕ್ಕಾಗಿ ಸಿಡಿದ ಗುಂಡಿನಿಂದ ಯೋಧ ಮೃತಪಟ್ಟಿದ್ದಾನೆ.
ಅಂಬೇಡ್ಕರ್ ನಗರ ನಿವಾಸಿಯಾಗಿರುವ ಪ್ಯಾರಾ ಮಿಲಿಟರಿ ಯೋಧ ಶುತ್ರುಘ್ನ ವಿಶ್ವಕರ್ಮ, ರಾಮ ಜನ್ಮ ಭೂಮಿಯಲ್ಲಿ ಭದ್ರತಾ ಕಾರ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶಸಸ್ತ್ರ ಸೀಮಾ ಬಲ್(SSF) ಅನ್ನೋ ರಾಮ ಮಂದಿರ ಭದ್ರತಾ ಪಡೆಯ ಸಿಬ್ಬಂದಿಯಾಗಿದ್ದ ಶತ್ರುಘ್ನ ಇಂದು(ಜೂ.19) ರಾಮ ಮಂದಿರ ಆವರಣದಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದರು. ಈ ವೇಳೆ ತನ್ನಲ್ಲಿದ್ದ ಶಸ್ತ್ರಾಸ್ತ್ರ ಪರಿಶೀಲಿಸುತ್ತಿದ್ದ ವೇಳೆ ಅಚಾನಕ್ಕಾಗಿ ಗುಂಡು ಸಿಡಿದಿದೆ.
undefined
ಉತ್ತರ ಪ್ರದೇಶದಲ್ಲಿ ಹಿಂದೂ ಹೃದಯ ಸಾಮ್ರಾಟ್ ಆದರೂ ಮೋದಿ ತತ್ತರಿಸಿದ್ದೇಕೆ ?
ಅಚಾನಕ್ಕಾಗಿ ಸಿಡಿದ ಗುಂಡಿನಿಂದ ಯೋಧ ತೀವ್ರವಾಗಿ ಗಾಯಗೊಂಡಿದ್ದಾನೆ. ತಕ್ಷಣವೇ ಇತರ ಸಿಬ್ಬಂದಿಗಳು ರಾಮ ಮಂದಿರದಲ್ಲಿನ ಆ್ಯಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಗಾಯದ ಪ್ರಮಾಣ ಹಾಗೂ ತೀವ್ರ ರಕ್ತಸ್ರವಾದಿಂದ ಬಳಲಿದ ಯೋಧ ಆಸ್ಪತ್ರೆ ಸಾಗಿಸುವ ದಾರಿ ಮದ್ಯ ಅಸುನೀಗಿದ್ದಾರೆ. ಆಸ್ರತ್ರೆಯಲ್ಲಿ ಪರಿಶೀಲಿಸಿದ ವೈದ್ಯರು ಯೋಧ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಮಾರ್ಚ್ ತಿಂಗಳಲ್ಲೇ ಇದೇ ರೀತಿ ಯೋಧ ತನ್ನ ಶಸ್ತ್ರಾಸ್ತ್ರ ಪರಿಶೀಲನೆ ವೇಳೆ ಅಚಾನಕ್ಕಾಗಿ ಗುಂಡು ಸಿಡಿದಿತ್ತು. ತೀವ್ರವಾಗಿ ಗಾಯಗೊಂಡು ಯೋಧ ಪ್ರಾಣಾಪಾಯದಿಂದ ಪಾರಾಗಿದ್ದ. ಇದೀಗ ಕಳೆದ 3 ತಿಂಗಳಲ್ಲಿ ನಡೆದ 2ನೇ ಘಟನೆ ಇದಾಗಿದೆ. ಆಯೋಧ್ಯೆಯಲ್ಲಿ ಭದ್ರತೆಗೆ ಹೆಚ್ಚಿನ ಗಮನ ಹರಿಸಲಾಗಿದೆ. ಆದರೆ ಸೂಕ್ತ ತರಬೇತಿ ನೀಡದ ಪ್ಯಾರಾ ಮಿಲಿಟರಿ ಯೋಧರನ್ನು ಭದ್ರತೆಗೆ ನಿಯೋಜಿಸಲಾಗಿದೆ ಅನ್ನೋ ಆರೋಪ ಕೇಳಿಬರುತ್ತಿದೆ. ಇದೇ ವೇಳೆ ಪ್ಯಾರಾ ಮಿಲಿಟರಿ ಯೋಧರಿಗೆ ನೀಡಿರುವ ಶಸ್ತ್ರಾಸ್ತ್ರದ ಕುರಿತು ಅನುಮಾನಗಳು ವ್ಯಕ್ತವಾಗುತ್ತಿದೆ.
ಆಯೋಧ್ಯೆ ಮಾತ್ರವಲ್ಲ, ರಾಮಮಂದಿರ ಕಟ್ಟಿದ ಅಧಿಕಾರಿ ಪುತ್ರನಿಗೂ ಸೋಲುಣಿಸಿದ ಯುಪಿ!
ಚುನಾವಣೆ ವೇಳೆ ಆಯೋಧ್ಯೆಯಲ್ಲಿ ಭಕ್ತರ ಸಂಖ್ಯೆ ಇಳಿಮುಖವಾಗಿತ್ತು. ಫಲಿತಾಂಶದ ಬಳಿಕ ಇದೀಗ ಮತ್ತೆ ಬಾಲರಾಮನ ದರ್ಶನಕ್ಕಾಗಿ ಭಕ್ತರು ಆಗಮಿಸುತ್ತಿದ್ದಾರೆ. ಇದರ ಜೊತೆಗೆ ಕೆಲ ಉಗ್ರ ಸಂಘಟನೆಗಳು ರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದೆ. ಹೀಗಾಗಿ ರಾಮ ಮಂದಿರ ಆವರಣ ಹಾಗೂ ಆಯೋಧ್ಯೆಯಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದೆ. ಪೊಲೀಸ್ , ಪ್ಯಾರಾಮಿಲಿಟರಿ ಹಾಗೂ ಇತರ ಭದ್ರತಾ ಸಿಬ್ಬಂದಿಗಳು ಭಕ್ತರಿಗೆ ಸಂಪೂರ್ಣ ಭದ್ರತೆ ಒದಗಿಸುತ್ತಿದ್ದಾರೆ.