
ಪಾನಿಪುರಿ ಅಥವಾ ಗೋಲ್ಗಪ್ಪವನ್ನು ಇಷ್ಟಪಡದ ಜನರಿಲ್ಲ, ಸಂಜೆ ಸಮಯದಲ್ಲಿ ಹೊರಗೆ ಹೋದರೆ ಬಹುತೇಕರು ಇದನ್ನು ತಿಂದೇ ವಾಪಸ್ ಮನೆಗೆ ಬರುತ್ತಾರೆ. ಭಾರತೀಯ ಈ ಬೀದಿ ಬದಿಯ ಚಾಟ್ಸ್‌ನ್ನು ಇಷ್ಟಪಡದೇ ಇರೋರೇ ಇಲ್ಲ. ಕೆಲ ದಿನಗಳ ಹಿಂದೆ ನೈಜಿರೀಯನ್ ಮಹಿಳೆಯೊಬ್ಬರು ಮದುವೆಯೊಂದರಲ್ಲಿ ಡಾನ್ಸ್ ಮಾಡುತ್ತಲ್ಲೇ ಗೋಲ್ಗಪ್ಪ ತಿನ್ನುತ್ತಿರುವ ವೀಡಿಯೋ ವೈರಲ್ ಆಗಿತ್ತು. ಪಾನಿಪುರಿಯ ರುಚಿಗೆ ಮನಸೋತ ಅವರು ಎಲ್ಲಾ ಪಾನಿಪುರಿ ನನಗೆ ಬೇಕು ಎಂದು ಸೋಶಿಯಲ್ ಮಿಡಿಯಾದಲ್ಲಿ ವೀಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿದ್ದರು. ಹೀಗೆ ಸಣ್ಣವರಿಂದ ಹಿಡಿದು ದೊಡ್ಡವರವರೆಗೆ ಯಾವುದೇ ಲಿಂಗಭೇಧವಿಲ್ಲದೇ ಜನ ಪಾನಿಪುರಿಯನ್ನು ಇಷ್ಟಪಡುತ್ತಾರೆ. ಅದರೆ ಇಲ್ಲೊಬ್ಬ ಪಾನಿಪುರಿ ಮಾರುವ ಯುವಕ ನೋ ಬಾಯ್ಸ್ ಅಲೋವ್ಡ್ ಎಂಬ ಬೋರ್ಡ್‌ನ್ನು ತನ್ನ ಅಂಗಡಿ ಮುಂದೆ ತೂಗು ಹಾಕಿ ಜನರನ್ನು ಅಚ್ಚರಿಗೀಡು ಮಾಡಿದ್ದಾನೆ. ಈ ಘಟನೆ ಎಲ್ಲಿ ನಡೆದಿದೆ ಎಂದು ವರದಿಯಾಗಿಲ್ಲ. ಆದರೆ ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಹಲವು ಕಾಮೆಂಟ್ ಮಾಡ್ತಾ ಇದ್ದಾರೆ.
Bhartiyalast24hr ಎಂಬ ಇನ್ಸ್ಟಾಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ವೀಡಿಯೋದಲ್ಲಿ ಕಾಣುವಂತೆ ಯುವಕನೋರ್ವ ರಸ್ತೆಬದಿ ತನ್ನ ಪಾನಿಪುರಿ ಸ್ಟಾಲ್ ಇರಿಸಿಕೊಂಡು ಮಾರಾಟ ಮಾಡುತ್ತಿದ್ದು, ತನ್ನ ಈ ಪಾನಿಪುರಿ ಗಾಡಿಗೆ ಬಾಯ್ಸ್ ನಾಟ್ ಅಲೌಡ್ ಎಂದು ಬೋರ್ಡ್ ಹಾಕಿದ್ದಾನೆ. ಈತನ ಅಂಗಡಿ ಮುಮದೆ ಹಲವು ಹೆಣ್ಣು ಮಕ್ಕಳು ನಿಂತುಕೊಂಡು ಪಾನಿಪುರಿ ಸೇವಿಸುವುದನ್ನು ಕಾಣಬಹುದಾಗಿದೆ. ಜೊತೆಗೆ ಅಲ್ಲಿ ಪಾನಿಪುರಿ ತಿನ್ನುತ್ತಿರುವ ಹೆಣ್ಣು ಮಕ್ಕಳು ಈ ಯುವಕ ನಮ್ಮ ಕಾಳಜಿ ಮಾಡುತ್ತಿದ್ದಾನೆ. ಇಲ್ಲಿ ಪುರುಷರಿಗೆ ಅವಕಾಶ ಇಲ್ಲ ಎಂದು ಹೇಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಇದನ್ನೂ ಓದಿ: ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ನಿಧನ
ವೀಡಿಯೋ ಪೋಸ್ಟ್ ಮಾಡಿದ Bhartiyalast24hr ಇನ್ಸ್ಟಾಗ್ರಾಮ್ ಪೇಜ್ ಹೀಗೆ ಬರೆದುಕೊಂಡಿದೆ. 'ಹುಡುಗಿಯರಿಗೆ ಮಾತ್ರ ಪಾನಿಪುರಿ ನೀಡುವ ಅಂಗಡಿಯೊಂದು ಈಗ ಆನ್‌ಲೈನ್‌ನಲ್ಲಿ ಸಂಚಲನ ಮೂಡಿಸಿದೆ. ಬೀದಿ ಬದಿಯ ಪಾನಿ ಪುರಿ ಮಾರಾಟಗಾರನೊಬ್ಬ ಹುಡುಗರಿಗೆ ಅವಕಾಶವಿಲ್ಲ ಎಂದು ಬರೆದಿರುವ ಫಲಕವನ್ನು ಹಾಕಿದ್ದು ವೈರಲ್ ಆಗಿದೆ. ಮಹಿಳಾ ಗ್ರಾಹಕರಿಗೆ ಮಾತ್ರ ಸೇವೆ ಸಲ್ಲಿಸುವ ಈ ಅಂಗಡಿ ಬಗ್ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದನ್ನು ಮೋಜಿನ ಮಾರ್ಕೆಟಿಂಗ್ ಟ್ರಿಕ್ ಎಂದು ಕರೆದರೆ, ಇತರರು ನಿಯಮವನ್ನು ಪ್ರಶ್ನಿಸಿದ್ದಾರೆ. ಇಲ್ಲಿ ಹುಡುಗಿಯರು ಸಂತೋಷದಿಂದ ಗೋಲ್ಗಪ್ಪಾಗಳನ್ನು ಆನಂದಿಸುತ್ತಿದ್ದರೆ, ಗೊಂದಲಕ್ಕೊಳಗಾದ ಹುಡುಗರು ಪಕ್ಕಕ್ಕೆ ನಿಂತಿರುವುದನ್ನು ಕಾಣಬಹುದು' ಎಂದು ಬರೆಯಲಾಗಿದೆ.
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಒಬ್ಬರು ಇಂತಹ ಪಾನಿಪುರಿ ಬ್ರಾಂಚ್‌ನ್ನು ಪ್ರತಿ ನಗರದಲ್ಲಿ ತೆರೆಯುವಂತೆ ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಕೆಲವು ಹೆಣ್ಣು ಮಕ್ಕಳು ಆತನಿಗೆ ಧನ್ಯವಾದ ಹೇಳಿದ್ದಾರೆ. ಆದರೆ ಹುಡುಗರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈತನಿಗೆ ಮಾರ್ಕೇಟಿಂಗ್ ಹೇಗೆ ಮಾಡಬೇಕು ಎಂದು ಗೊತ್ತಿದೆ. ಆತನಿಗೆ ಮಹಿಳೆಯರ ಸೈಕಾಲಾಜಿ ಹೇಗೆ ಕೆಲಸ ಮಾಡತ್ತದೆ ಎಂದು ಗೊತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಇದು ಸಂಪೂರ್ಣವಾಗಿ ಲಿಂಗತಾರತಮ್ಯದಿಂದ ಕೂಡಿದ್ದು ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಅಮೆರಿಕಾದ ಬಳಿಕ ಈಗ ಮೆಕ್ಸಿಕೋದಿಂದಲೂ ಭಾರತದ ಮೇಲೆ ಶೇ.50 ಸುಂಕ: ಜನವರಿ 1ರಿಂದಲೇ ಹೊಸ ತೆರಿಗೆ ಜಾರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ