ಮಂಗಳೂರಿನವರೆಗೆ ಹಂಚಿಕೊಂಡಿರುವ ಪಾಲಕ್ಕಾಡ್‌ ರೈಲ್ವೆ ವಿಭಾಗದಿಂದ ಈ ವರ್ಷ ಬರೋಬ್ಬರಿ 1576.16 ಕೋಟಿ ರು. ಆದಾಯ!

By Gowthami K  |  First Published May 10, 2024, 6:19 PM IST

ದಕ್ಷಿಣ ಕೇರಳ ಮತ್ತು ಮಂಗಳೂರು ವರೆಗೆ ರೇಲ್ವೆ ಜಾಲ ಹೊಂದಿರುವ ಪಾಲಕ್ಕಾಡ್‌ ವಿಭಾಗ 2023-24ನೇ ಸಾಲಿನಲ್ಲಿ ಗಣನೀಯ ಆದಾಯ ಗಳಿಸಿದೆ.


ಮಂಗಳೂರು (ಮೇ.10): ದಕ್ಷಿಣ ಕೇರಳ ಮತ್ತು ಕರ್ನಾಟಕದ ದ.ಕ.ಜಿಲ್ಲಾ ಕೇಂದ್ರ ಮಂಗಳೂರು ವರೆಗೆ ರೇಲ್ವೆ ಜಾಲ ಹೊಂದಿರುವ ಪಾಲಕ್ಕಾಡ್‌ ( ಪಾಲ್ಘಾಟ್‌ )ವಿಭಾಗ 2023-24ನೇ ಸಾಲಿನಲ್ಲಿ ಗಣನೀಯ ಆದಾಯ ಗಳಿಸಿದೆ. ಒಟ್ಟು 1576.16 ಕೋಟಿ ರೂಪಾಯಿ ಆದಾಯ ಈ ವರ್ಷದ ಹಣಕಾಸು ವರ್ಷದಲ್ಲಿ ದಾಖಲಾಗಿದೆ.

ಪ್ರಯಾಣಿಕ ರೈಲಿನಿಂದ 964.19 ಕೋಟಿ ರು., ವಿಶೇಷ ರೈಲು ಸಂಚಾರ, ವಿಶೇಷ ಶೂಟಿಂಗ್‌, ಫ್ಲ್ಯಾಟ್‌ಫಾರಂ ಟಿಕೆಟ್‌ಗಳಿಂದ 65.96 ಕೋಟಿ ರು., ಸರಕು ಸಾಗಾಟದಿಂದ 481.36 ಕೋಟಿ ರು. ಹಾಗೂ ಪಾರ್ಸೆಲ್‌ ಸರ್ವೀಸ್‌, ಜಾಹಿರಾತು, ಪಾರ್ಕಿಂಗ್‌ ಶುಲ್ಕ, ರೈಲ್ವೆ ಸೊತ್ತುಗಳ ಲೀಸ್‌ ಸೇರಿದಂತೆ ವಿವಿಧ ಮೂಲಗಳಿಂದ 64.66 ಕೋಟಿ ರು. ಆದಾಯ ಲಭಿಸಿದೆ.

Tap to resize

Latest Videos

ಕರ್ನಾಟಕದ 7 ರೈಲು ನಿಲ್ದಾಣಗಳಲ್ಲಿ ಕಡಿಮೆ ದರದ ಆಹಾರ ಕೌಂಟರ್‌ ತೆರೆದ ಭಾರತೀಯ ರೈಲ್ವೆ, ನಿಮ್ಮ ಜಿಲ್ಲೆಯಲ್ಲಿದೆಯೇ?

ಈ ಎಲ್ಲ ಆದಾಯ ಹೆಚ್ಚಳಕ್ಕೆ ತ್ವರಿಗತಗತಿಯಲ್ಲಿ ರೈಲ್ವೆ ಸೌಲಭ್ಯ, ಯೋಜನೆಗಳನ್ನು ಪೂರೈಸಿರುವುದು ಪ್ರಮುಖ ಕಾರಣ. ಮುಖ್ಯವಾಗಿ ಅಮೃತ್‌ ಭಾರತ್‌ ರೈಲು ನಿಲ್ದಾಣಗಳ ಅಭಿವೃದ್ಧಿ, ಉಳ್ಳಾಲದಲ್ಲಿ ಹೊಸ ಗೂಡ್ಸ್‌ ಯಾರ್ಡ್‌, ಮಂಗಳೂರು ಸೆಂಟ್ರಲ್‌ನಲ್ಲಿ ಹೆಚ್ಚುವರಿ ಫ್ಲ್ಯಾಟ್‌ಫಾರಂ ರಚನೆ, ಇತರೆ ರೈಲು ನಿಲ್ದಾಣಗಳಲ್ಲಿ ಫ್ಲ್ಯಾಟ್‌ಫಾರಂ ಮತ್ತು ಪ್ರಯಾಣಿಕ ಸೌಲಭ್ಯಗಳನ್ನು ಮೇಲ್ದರ್ಜೇರಿಸಿರುವುದು, ಯೋಜನೆಗಳ ಕಾರ್ಯಗತ, ಸರಕು ಹಾಗೂ ಪ್ರಯಾಣಿಕರಿಗೆ ಉತ್ತಮ ಸಂಪರ್ಕ ಸೌಲಭ್ಯ ಕಲ್ಪಿಸಿರುವುದು ಆದಾಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವಿಭಾಗೀಯ ಅಧಿಕಾರಿ ಅರುಣ್‌ ಕುಮಾರ್‌ ಚತುರ್ವೇದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಂಜಾಬ್‌ನಲ್ಲಿ ವಿಚಿತ್ರ ಘಟನೆ, ಬೋಗಿ ಬಿಟ್ಟು 3 ಕಿ.ಮೀ. ಚಲಿಸಿದ ರೈಲು ಎಂಜಿನ್‌!

 2023-24 ರ ಹಣಕಾಸು ವರ್ಷದಲ್ಲಿ ಪಾಲಕ್ಕಾಡ್ ವಿಭಾಗದಿಂದ 1576.16 ಕೋಟಿ ರೂಪಾಯಿ ಮತ್ತು ತಿರುವನಂತಪುರಂನಿಂದ 2149.89 ಕೋಟಿ ರೂಪಾಯಿ ಆದಾಯವನ್ನು ರೈಲ್ವೆ ಗಳಿಸಿದೆ. ಒಟ್ಟು ಕೇರಳದಿಂದ 3726.05 ಕೋಟಿ ಆದಾಯ ಬಂದಿದೆ ರೂ. 2022-23ರಲ್ಲಿ ಕೇರಳದಿಂದ ಒಟ್ಟು ಆದಾಯ 3301.89 ಕೋಟಿ ರೂ ಬಂದಿತ್ತು.

click me!