ಅವಧಿ ಮುನ್ನವೇ ದಿಢೀರ್‌ ಸುಡುಬಿಸಿಲು, 6 ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ!

Published : Feb 18, 2020, 02:27 PM IST
ಅವಧಿ ಮುನ್ನವೇ ದಿಢೀರ್‌ ಸುಡುಬಿಸಿಲು, 6 ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ!

ಸಾರಾಂಶ

ದಿಢೀರ್‌ ಸುಡುಬಿಸಿಲು| 30 ವರ್ಷದಲ್ಲಿ ಮೊದಲ ಬಾರಿಗೆ 3 ಡಿಗ್ರಿ ಸೆಲ್ಸಿಯಸ್‌ ಏರಿಕೆ| 6 ಜಿಲ್ಲೆಗಳಲ್ಲಿ ಭಾರೀ ಸುಡುಬಿಸಿಲಿನ ಬಗ್ಗೆ ಮುನ್ನೆಚ್ಚರಿಕೆ

ತಿರುವನಂತಪುರ[ಫೆ.18]: ಇನ್ನೇನು ಚಳಿಗಾಲ ಕಳೆಯಿತು ಎನ್ನುವ ಹಂತದಲ್ಲೇ ಭಾರತದ ಪ್ರಸಿದ್ಧ ಪ್ರವಾಸಿ ತಾಣವಾದ ಕೇರಳದಲ್ಲಿ ತಾಪಮಾನದಲ್ಲಿ ದಿಢೀರ್‌ ಏರಿಕೆಯಾಗಿದೆ. ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ತಾಪಮಾನದಲ್ಲಿ 3 ಡಿ.ಸೆ.ವರೆಗೂ ಏರಿಕೆ ದಾಖಲಾಗುತ್ತಿದೆ. ಇಂಥ ಬೆಳವಣಿಗೆ ಕಳೆದ 30 ವರ್ಷಗಳಲ್ಲಿ ಇದೇ ಮೊದಲು. ಇದರ ಬೆನ್ನಲ್ಲೇ ಹವಮಾನ ಇಲಾಖೆಯ ಕೇರಳದ 6 ಜಿಲ್ಲೆಗಳಲ್ಲಿ ಸೋಮವಾರ ಮತ್ತು ಮಂಗಳವಾರ ಉಷ್ಣಾಂಶ ಸಾಮಾನ್ಯಕ್ಕಿಂತ 3 ಡಿ.ಸೆನಷ್ಟುಹೆಚ್ಚಿರಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.

ಅದರ ಬೆನ್ನಲ್ಲೇ ಸೋಮವಾರ ತಿರುವನಂತಪುರದಲ್ಲಿ 34.9 ಡಿ.ಸೆ., ಆಲಪ್ಪುಳದಲ್ಲಿ 36.8 ಡಿ.ಸೆ., ಕೊಟ್ಟಾಯಂನಲ್ಲಿ 37.8 ಡಿ.ಸೆ., ಕಣ್ಣೂರಿನಲ್ಲಿ 37.2 ಡಿ.ಸೆನಷ್ಟುತಾಪಮಾನ ದಾಖಲಾಗಿದೆ.

ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ನಗರಗಳ ಪೈಕಿ ಒಂದಾದ ಪಾಲಕ್ಕಾಡ್‌ನಲ್ಲಿ 2 ದಿನಗಳ ಹಿಂದೆ 37.1 ಡಿ.ಸೆ.ನಷ್ಟುಉಷ್ಣಾಂಶ ದಾಖಲಾಗಿರುವುದು ಸ್ಥಳೀಯರನ್ನು ಹೈರಾಣಾಗಿಸಿದೆ.

ಪರಿಸರ ಮಾಲಿನ್ಯದಿಂದಾಗಿ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ ಎಂಬ ವರದಿಗಳ ಬೆನ್ನಲ್ಲೇ, ಫೆಬ್ರುವರಿ ತಿಂಗಳ ಮೊದಲ 2 ವಾರದಲ್ಲೇ ಉಷ್ಣಾಂಶ ಈ ಮಟ್ಟಿಗೆ ಏರಿಕೆ ಕಂಡಿದೆ.

ತಿರುನವಂತಪುರ, ಆಲಪ್ಪುಳ, ಕೊಟ್ಟಾಯಂ, ತಿಶ್ಶೂರು, ಕಲ್ಲಿಕೋಟೆ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಮುಂದಿನ ಕೆಲ ದಿನಗಳ ಕಾಲ ಉಷ್ಣಾಂಶ ಹೆಚ್ಚಿನ ಮಟ್ಟದಲ್ಲೇ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋ ಅವಾಂತರ: ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್‌ಪೆಕ್ಟರ್‌ಗಳ ವಜಾ ಮಾಡಿದ ಡಿಜಿಸಿಎ
BOYS NOT ALLOWED ಅಂತ ಸ್ಟಾಲ್‌ನಲ್ಲಿ ಬೋರ್ಡ್‌ ಹಾಕಿದ ಪಾನಿಪುರಿ ಭೈಯಾ: ನೆಟ್ಟಿಗರಿಂದ ತೀವ್ರ ಆಕ್ರೋಶ