ಜಮ್ಮು-ಕಾಶ್ಮೀರಕ್ಕೇ ಪ್ರತ್ಯೇಕ ಸೇನಾ ಕಮಾಂಡ್‌!

By Kannadaprabha NewsFirst Published Feb 18, 2020, 12:38 PM IST
Highlights

ಜಮ್ಮು-ಕಾಶ್ಮೀರಕ್ಕೇ ಪ್ರತ್ಯೇಕ ಸೇನಾ ಕಮಾಂಡ್‌| ಪಶ್ಚಿಮ, ಪೌರ್ವ ನೌಕಾಪಡೆ ಕಮಾಂಡ್‌ ವಿಲೀನಗೊಳಿಸಿ ಒಂದೇ ಕಮಾಂಡ್‌| ಸಶಸ್ತ್ರಪಡೆಗಳಲ್ಲಿ ಬದಲಾವಣೆ ತರುವ ಯತ್ನ ಆರಂಭಿಸಿದ ಜ| ರಾವತ್‌

ನವದೆಹಲಿ[ಫೆ.18]: ಸಶಸ್ತ್ರಪಡೆಯ ಮೂರೂ ಅಂಗಗಳಿಗೆ ಏಕೀಕೃತ ಮುಖ್ಯಸ್ಥನಾಗಿ ನೇಮಕವಾದ ಬೆನ್ನಲ್ಲೇ ಜ| ಬಿಪಿನ್‌ ರಾವತ್‌ ಅವರು ಸೇನೆ, ನೌಕಾಪಡೆ ಹಾಗೂ ವಾಯುಪಡೆಗಳಲ್ಲಿ ಭಾರೀ ಬದಲಾವಣೆ ತರುವ ಯತ್ನಗಳಿಗೆ ಕೈಹಾಕಿದ್ದಾರೆ. ಜಮ್ಮು-ಕಾಶ್ಮೀರದಲ್ಲಿನ ಸೇನಾ ವ್ಯವಹಾರಗಳನ್ನು ನೋಡಿಕೊಳ್ಳಲು ಪ್ರತ್ಯೇಕ ಕಮಾಂಡ್‌ (ಪಡೆ) ಸ್ಥಾಪಿಸುವ ಚಿಂತನೆ ನಡೆದಿದೆ. ಇದೇ ವೇಳೆ, 2021ರ ವೇಳೆಗೆ ನೌಕಾಪಡೆಯ ಪೂರ್ವ ಹಾಗೂ ಪಶ್ಚಿಮ ಕಮಾಂಡ್‌ಗಳನ್ನು ವಿಲೀನಗೊಳಿಸಿ ಪ್ರತ್ಯೇಕ ‘ಪರ್ಯಾಯ ದ್ವೀಪ ಕಮಾಂಡ್‌’ ಸ್ಥಾಪಿಸಲಾಗುತ್ತದೆ.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಈ ವಿಷಯ ತಿಳಿಸಿದ ಜ| ರಾವತ್‌, ‘ಈಗ ಬಂಗಾಳ ಕೊಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇಡಲು ಪ್ರತ್ಯೇಕ ನೌಕಾಪಡೆ ಕಮಾಂಡ್‌ಗಳಿವೆ. ಇವುಗಳನ್ನುವಿಲೀನಗೊಳಿಸಿ ‘ಪೆನಿನ್ಸುಲರ್‌ ಕಮಾಂಡ್‌’ ಸ್ಥಾಪಿಸಲಾಗುತ್ತದೆ. ‘ಪೆನಿನ್ಸುಲರ್‌ ಕಮಾಂಡ್‌’ ಅರಬ್ಬೀ ಸಮುದ್ರ, ಬಂಗಾಳ ಕೊಲ್ಲಿ ಹಾಗೂ ಹಿಂದೂ ಮಹಾಸಾಗರದ ಮೇಲೆ ನಿಗಾ ಇಡುವ ಏಕೈಕ ಕಮಾಂಡ್‌ ಆಗಲಿದೆ. ಇದಕ್ಕಾಗಿ ಮಾಚ್‌ರ್‍ 31ರೊಳಗೆ ಅಧ್ಯಯನ ವರದಿ ನೀಡುವಂತೆ ಸೂಚಿಸಲಾಗಿದೆ’ ಎಂದರು.

ಇದೇ ವೇಳೆ, ಪಾಕಿಸ್ತಾನಿ ಭಯೋತ್ಪಾದಕರ ಚಟುವಟಿಕೆ ಹೆಚ್ಚಿರುವ ಜಮ್ಮು-ಕಾಶ್ಮೀರಕ್ಕೆಂದೇ ಪ್ರತ್ಯೇಕ ಸಮಗ್ರ (ಸೇನೆ, ನೌಕಾಪಡೆ, ವಾಯುಪಡೆ ಒಳಗೊಂಡ) ಕಮಾಂಡ್‌ ಸ್ಥಾಪಿಸುವ ಚರ್ಚೆ ನಡೆದಿದೆ. ಇನ್ನು ಚೀನಾ ಬೆದರಿಕೆ ಎದುರಿಸಲು ಪ್ರತ್ಯೇಕ ಚೀನಾ ಕಮಾಂಡ್‌ ಅಗತ್ಯವಿದೆ ಎಂದು ರಾವತ್‌ ಪ್ರತಿಪಾದಿಸಿದರು.

ನೌಕಾಪಡೆಗೆ ಯುದ್ಧವಿಮಾನ ವಾಹಕ ಹಡಗುಗಳಿಗಿಂತ ಜಲಾಂತರ್ಗಾಮಿಗಳ ಅಗತ್ಯವಿದೆ ಎಂದರು.

ಈಗ 19 ಕಮಾಂಡ್‌ಗಳು ದೇಶದಲ್ಲಿವೆ. ಇವುಗಳಲ್ಲಿ ನೌಕಾಪಡೆ-ವಾಯುಪಡೆ ಹಾಗೂ ಸೇನೆ- ಈ ಮೂರೂ ಅಂಗಗಳನ್ನು ಹೊಂದಿರುವ ಏಕೀಕೃತ ಕಮಾಂಡ್‌ಗಳ ಸಂಖ್ಯೆ 2 ಮಾತ್ರ. ಏಕಿಕೃತ ಸಂಖ್ಯೆ ಹೆಚ್ಚಿಸುವಂತೆ ಜ| ರಾವತ್‌ 

click me!