ಮಗಳ ಮದುವೆಗೆ ಆಹ್ವಾನಿಸಿದ ರಿಕ್ಷಾ ಚಾಲಕನ ಭೇಟಿಯಾದ ಮೋದಿ!

By Suvarna NewsFirst Published Feb 18, 2020, 1:25 PM IST
Highlights

ಮೋದಿಗೆ ಆಹ್ವಾನಿಸಿ ಇಂಟರ್ನೆಟ್‌ನಲ್ಲಿ ಫೇಮಸ್ ಆಗಿದ್ದ ಮಂಗಲ್ ಕೇವತ್| ಪತ್ರ ಮುಖೇನ ಶುಭ ಕೋರಿದ್ದ ಪಿಎಂ| ವಾರಾಣಸಿ ಭೇಟಿ ವೇಳೆ ಖುದ್ದು ಮಂಗಲ್ ಭೇಟಿಯಾದ ಪ್ರಧಾನಿ

ವಾರಾಣಸಿ[ಫೆ.18]: ಫೆ. 16 ರಂದು ತಮ್ಮ ತವರು ಕ್ಷೇತ್ರ ವಾರಾಣಸಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲೊಬ್ಬ ವಿಶೇಷ ವ್ಯಕ್ತಿಯನ್ನು ಭೇಟಿಯಾಗಿದ್ದಾರೆ. ಹೌದು ತನ್ನ ಮಗಳ ಮದುವೆಗೆ ಆಗಮಿಸಿ ಎಂದು ತನಗೆ ಆಹ್ವಾನ ಪತ್ರಿಕೆ ಕಳುಹಿಸಿದ್ದ ಬಡ ಆರಿಕ್ಷಾಲವಾಲಾನನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ.

ಹೌದು ವಾರದ ಹಿಂದೆ ಉತ್ತರ ಪ್ರದೇಶದ ವಾರಾಣಸಿಯ ಡೋಮರಿ ಎಂಬ ಹಳ್ಳಿಯ ಮಂಗಲ್ ಕೇವತ್ ಮಗಳ ಮದುವೆ ಫೆಬ್ರವರಿ 12 ರಂದು ನಡೆದಿದೆ. ಕೇವತ್ ತನ್ನ ಮಗಳ ಮದುವೆಗೆ ಆಗಮಿಸುವಂತೆ ಕೋರಿ ಪ್ರಧಾನ ಮಂತ್ರಿ ಮೋದಿಗೆ ಆಹ್ವಾನ ಆಹ್ವಾನ ನೀಡಿದ್ದರು. ಪ್ರಧಾನಿ ಮೋದಿಯಿಂದ ಪ್ರತಿಕ್ರಿಯೆ ಬರಬಹುದು ಎಂದೂ ಊಹಿಸಿರದ ಕೇವತ್ ಗೆ ಮದುವೆ ದಿನ ಅಚ್ಚರಿಯಾಗಿತ್ತು. ಯಾಕೆಂದರೆ ಮದುವೆ ಸಮಾರಂಭ ನಡೆಯುತ್ತಿದ್ದಾಗ ವ್ಯಕ್ತಿಯೊಬ್ಬ ಕೇವತ್ ಬಳಿ ಬಂದು ಪತ್ರವೊಂದನ್ನು ಕೊಟ್ಟಿದ್ದರು. 

ಮಗಳ ಮದುವೆಗೆ ಬನ್ನಿ ಎಂದ ಆಟೋ ಡ್ರೈವರ್: ಆಹ್ವಾನಕ್ಕೆ ಮೋದಿ ಉತ್ತರ?

ಈ ಪತ್ರ ತೆರೆದ ಕೇವತ್ ಗೆ ಅಚ್ಚರಿ ಕಾದಿತ್ತು. ಹೌದು ಖುದ್ದು ಪ್ರಧಾನಿ ಮೋದಿ ಪತ್ರ ಮುಖೇನ ಕೇವತ್ ಮಗಳ ಮದುವೆಗೆ ಶುಭ ಕೋರಿ, ಆಶೀರ್ವದಿಸಿದ್ದರು. ಅಲ್ಲದೇ ಮದುವೆಗೆ ಹಾಜರಾಗಲು ಸಾಧ್ಯವಾಗದ್ದಕ್ಕೆ ಖೇದ ವ್ಯಕ್ತಪಡಿಸಿದ್ದರು. ಈ ವಿಚಾರ ಬಹಿರ.ಗವಾಗುತ್ತಿದ್ದಂತೆಯೇ ಕೇವತ್ ಭಾರೀ ಫೇಮಸ್ ಆಗಿದ್ದರು.

ಕೇವತ್ ಭೇಟಿಯಾದ ಮೋದಿ

ಮದುವೆ ಓಫೆ. 12 ರಂದು ನಡೆದಿದ್ದರೂ, ಫೆ. 16 ಕ್ಕೆ ವಾರಾಣಸಿಗೆ ಕರ್ಯಕ್ರಮ ನಿಮಿತ್ತ ಒಂದು ದಿನಕ್ಕೆ ಆಗಮಿಸಿದ್ದ ಪಿಎಂ ಮೋದಿ ಮಂಗಲ್​ ಕೇವತ್​ರನ್ನು ಭೇಟಿ ಮಾಡಿ ಕುಟುಂಬದ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ. ಸದ್ಯ ಈ ಫೋಟೋ ಕೂಡಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಭೇಟಿ ಹಿಂದಿದೆ ವಿಶೇಷ ಕಾರಣ!

ಮಂಗಲ್​ ಕೇವತ್​ನ ಬಗ್ಗೆ ಮೋದಿ ಇಷ್ಟೊಂದು ಕಾಳಜಿ ತೋರಲು ಒಂದು ಮಹತ್ವದ ಕಾರಣವಿದೆ. ಪಿಎಂ ಮೋದಿ ನಡೆಸಿದ ಗಂಗಾ ಸ್ವಚ್ಛತಾ ಕಾರ್ಯಕ್ರಮದಿಂದ ಸ್ಫೂರ್ತಿ ಪಡೆದುಕೊಂಡ ಮಂಗಲ್​ ತನ್ನ ಊರಿನಲ್ಲಿ ಹರಿಯುವ ಗಂಗಾ ನದಿಯನ್ನು ಸ್ವತಃ ತಾನೇ ಮುಂದೆ ನಿಂತು ಸ್ವಚ್ಛ ಮಾಡಿದ್ದರು. ಈ ವಿಚಾರ ಪ್ರಧಾನಿಯವರೆಗೂ ತಲುಪಿತ್ತು. ಅಲ್ಲದೇ ಮಂಗಲ್ ವಾಸಿಸುತ್ತಿರುವ ಡೋಮರಿ ಹಳ್ಳಿ ಪ್ರಧಾನಿ ಮೋದಿ ದತ್ತು ಪಡೆದುಕೊಂಡಿದ್ದಾರೆ. ಹೀಗಿರುವಾಗ ತನ್ನ ಮಗಳು ಪ್ರಧಾನಿ ಮೋದಿಯ ಮಗಳು ಕೂಡಾ ಹೌದು ಎಂದು ಮಂಗಲ್ ಖುಷಿಯಿಂದ ಹೇಳಿಕೊಂಡಿದ್ದಾರೆ.

click me!