ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ಸಂಚುಕೋರ ಎನ್ನಲಾದ ಪಾಕಿಸ್ತಾನ ಮೂಲದ ಭಯೋತ್ಪಾದಕ ಫರ್ಹತ್ತುಲ್ಲಾ ಗೋರಿ, ಭಾರತದಲ್ಲಿ ರೈಲು ಹಳಿ ತಪ್ಪಿಸುವಂತೆ ತನ್ನ ಅನುಯಾಯಿಗಳಿಗೆ ಕರೆ ನೀಡಿದ್ದಾನೆ.
ನವದೆಹಲಿ (ಆ.28): ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ಸಂಚುಕೋರ ಎನ್ನಲಾದ ಪಾಕಿಸ್ತಾನ ಮೂಲದ ಭಯೋತ್ಪಾದಕ ಫರ್ಹತ್ತುಲ್ಲಾ ಗೋರಿ ಟೆಲಿಗ್ರಾಮ್‌ನಲ್ಲಿ ಬಿಡುಗಡೆಯಾದ ವಿಡಿಯೋದಲ್ಲಿ ಕಾಣಿಸಿಕೊಂಡು ದೆಹಲಿ ಮತ್ತು ಮುಂಬೈ ಸೇರಿದಂತೆ ಪ್ರಮುಖ ಭಾರತೀಯ ನಗರಗಳಲ್ಲಿ ಬೃಹತ್ ಪ್ರಮಾಣದಲ್ಲಿ ರೈಲು ಹಳಿ ತಪ್ಪಿಸುವಂತೆ ತನ್ನ ಅನುಯಾಯಿಗಳಿಗೆ ಕರೆ ನೀಡಿದ್ದಾನೆ.
1-2 ವಾರಗಳಿಂದ ವೈರಲ್ ಆಗಿರುವ ಈ ವಿಡಿಯೋ ಭಾರತೀಯ ಗುಪ್ತಚರ ಸಂಸ್ಥೆಗೆ ಆತಂಕ ತಂದಿದೆ. ಗೋರಿಯ ಕರೆಯಿಂದ ಭಾರತೀಯ ರೈಲ್ವೇಗಳ ಮೇಲಿನ ಸಂಭಾವ್ಯ ದಾಳಿ ನಡೆಯದಂತೆ ಗುಪ್ತಚರ ಸಂಸ್ಥೆ ಪರಿಶೀಲಿಸುತ್ತಿದೆ. ಪ್ರಸ್ತುತ ಭಾರತಕ್ಕೆ ಬೇಜಾಗಿರುವ ಉಗ್ರರ ಪಟ್ಟಿಯಲ್ಲಿ ಫರ್ಹತ್ತುಲ್ಲಾ ಗೋರಿ ಟಾಪ್ ನಲ್ಲಿದ್ದಾನೆ. ತನ್ನ ಅನುಯಾಯಿಗಳಿಗೆ ಬಂದೂಕುಗಳ ಬಳಕೆಯನ್ನು ಮೀರಿ ಅಡಚಣೆಗಳನ್ನು ಉಂಟು ಮಾಡುವ ವಿವಿಧ ವಿಧಾನಗಳನ್ನು ತನ್ನ ಅನುಯಾಯಿಗಳಿಗೆ ವಿವರಿಸಿದ್ದಾನೆ. ದೇಶದಲ್ಲಿ "ಅವ್ಯವಸ್ಥೆಯನ್ನು ಉಂಟುಮಾಡುವ" ಗುರಿಯೊಂದಿಗೆ ರೈಲು ಮಾರ್ಗಗಳು, ಪೆಟ್ರೋಲ್ ಪೈಪ್‌ಲೈನ್‌ಗಳು ಮತ್ತು ಲಾಜಿಸ್ಟಿಕಲ್ ಸರಪಣಿಗಳ ಮೇಲೆ ದಾಳಿ ಮಾಡುವಂತೆ ಆತ ಕರೆ ನೀಡಿರುವುದು ವಿಡಿಯೋದಲ್ಲಿ ಕಾಣುತ್ತಿದೆ.
undefined
ದೇಶದ ಅತ್ಯಂತ ಕಠಿಣ ಜೈಲಿಗೆ ದರ್ಶನ್ ಶಿಫ್ಟ್, ಬಳ್ಳಾರಿ ಜೈಲಿನ ಇತಿಹಾಸ ತಿಳಿಯಲೇಬೇಕು!
"ಪೆಟ್ರೋಲ್ ಪೈಪ್‌ಲೈನ್‌ಗಳು, ಅವುಗಳ ಲಾಜಿಸ್ಟಿಕ್ಸ್ ಸರಪಳಿ ಮತ್ತು ಸಹಯೋಗಗಳನ್ನು ಗುರಿಯಾಗಿಸಿಕೊಳ್ಳಿ. ರೈಲು ಮಾರ್ಗಗಳು, ಅವುಗಳ ಸಾರಿಗೆ ವ್ಯವಸ್ಥೆಯನ್ನು ಅಡ್ಡಿಪಡಿಸಿ. ಇವು ಅವ್ಯವಸ್ಥೆಯನ್ನು ಉಂಟುಮಾಡುತ್ತವೆ" ಎಂದು ಗೋರಿ ಘೋಷಿಸಿದ್ದಾನೆ. ಭಾರತ ಸರ್ಕಾರವು ED ಮತ್ತು NIA ಮೂಲಕ ನಮ್ಮ ಆಸ್ತಿತ್ವವನ್ನು ಗುರಿಯಾಗಿಸುತ್ತಿದೆ, ಆದರೆ ದೃಢವಾಗಿರಿ, ನಾವು ಬೇಗ ಅಥವಾ ನಿಧಾನವಾಗಿಯಾದರು ಅಧಿಕಾರವನ್ನು ಕಸಿದುಕೊಳ್ಳುತ್ತೇವೆ" ಎಂದು ಭಾರತೀಯ ಗುಪ್ತಚರ ಸಂಸ್ಥೆಯ ಪಟ್ಟಿಯಲ್ಲಿರುವ ಭಯೋತ್ಪಾದಕ ಹೇಳಿದ್ದಾನೆ.
ಗೋರಿಯ ವಿಡಿಯೋ ಭಾಷಣದ ರೈಲು ಹಳಿ ತಪ್ಪಿಸುವ ಹೇಳಿಕೆಯು ಭಾರತೀಯ ಭದ್ರತಾ ಸಂಸ್ಥೆಗಳನ್ನು ಎಚ್ಚರಿಸಿದೆ, ಹೀಗಾಗಿ ರೈಲು ಕ್ಷೇತ್ರದಲ್ಲಿ ಇತ್ತೀಚಿನ ಅನುಮಾನಾಸ್ಪದ ಚಟುವಟಿಕೆಗಳನ್ನು ಪರಿಶೀಲಿಸಲು ಕಾರಣವಾಗಿದೆ. ಉದಾಹರಣೆಗೆ, ಆಗಸ್ಟ್ 23 ಮತ್ತು 24 ರಂದು, ವಂದೇ ಭಾರತ್ ರೈಲನ್ನು ಹಳಿತಪ್ಪಿಸುವ ಪ್ರಯತ್ನ ನಡೆದಿತ್ತು. ಸಿಮೆಂಟ್ ಬ್ಲಾಕ್‌ಗಳನ್ನು ಹಳಿಗಳ ಮೇಲೆ ಇರಿಸಲಾಗಿತ್ತು ಎಂದು ವರದಿಯಾಗಿದೆ, ಈ ಘಟನೆಯು ಈಗ ಗೋರಿಯ ಪ್ರೋತ್ಸಾಹಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆ.
ಗೌಪ್ಯತೆ, ಸುರಕ್ಷತೆ ಇಲ್ಲದ ಟೆಲಿಗ್ರಾಮ್, ಭಾರತದಲ್ಲಿ ನಿಷೇಧವಾಗಲಿದ್ಯಾ?
ಮೂರು ನಿಮಿಷಗಳ ವೀಡಿಯೊದಲ್ಲಿ, ಗೋರಿ "ಫಿಡಾಯೀನ್ ಯುದ್ಧ" ಅಥವಾ ಆತ್ಮಹತ್ಯಾ ದಾಳಿಗೆ ಕರೆ ನೀಡಿದ್ದಾನೆ, ಅತನ ಅನುಯಾಯಿಗಳು ಹಿಂದೂ ಮುಖಂಡರು ಮತ್ತು ಪೊಲೀಸ್ ಸಿಬ್ಬಂದಿಗಳ್ನು ಗುರಿಯಾಗಿಸಿಕೊಳ್ಳುವಂತೆ ಹೇಳಿದ್ದಾನೆ. ಅವರು ಹೆಚ್ಚು ದುರ್ಬಲರಾಗಿರುವಲ್ಲಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಲು ವಿಭಿನ್ನ ತಂತ್ರಗಳೊಂದಿಗೆ ಪ್ರಯೋಗಿಸಿ ಎಂದಿದ್ದಾನೆ. ಭಾರತದಲ್ಲಿ ಅಶಾಂತಿ ಮತ್ತು ಕೋಮು ಉದ್ವಿಗ್ನತೆಯನ್ನು ಹುಟ್ಟುಹಾಕಲು ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ತಂತ್ರದ ಭಾಗ ಎಂದ ವೀಡಿಯೊವನ್ನು ನೋಡಲಾಗುತ್ತಿದೆ.
ಗಾಂಧಿನಗರದಲ್ಲಿ 2002 ರ ಅಕ್ಷರಧಾಮ ದೇವಸ್ಥಾನದ ದಾಳಿ ಸೇರಿದಂತೆ ಹಲವಾರು ಹೈ-ಪ್ರೊಫೈಲ್ ದಾಳಿ ಸೇರಿದಂತೆ ಗೋರಿಯು ಹಲವು ಭಯೋತ್ಪಾದನೆಯಲ್ಲಿ ಭಾಗಿಯಾಗಿರುವುದು ದಾಖಲಾಗಿದೆ. ಕಳೆದ ವರ್ಷ, ದೆಹಲಿ ಪೊಲೀಸರ ವಿಶೇಷ ದಳವು ಇಸ್ಲಾಮಿಕ್ ಸ್ಟೇಟ್-ಪ್ರೇರಿತ ಮಾಡ್ಯೂಲ್ ಅನ್ನು ಬಹಿರಂಗಪಡಿಸಿತು, ಇದನ್ನು IS ನೇಮಕಾತಿದಾರನಂತೆ ವೇಷ ಧರಿಸಿದ್ದ ಗೋರಿ ಸಂಘಟಿಸುತ್ತಿದ್ದನು. ಈ ಮಾಡ್ಯೂಲ್ ಭಾರತೀಯ ವಿಶ್ವವಿದ್ಯಾಲಯ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿದೆ. ಅವರಿಗೆ ಇಸ್ಲಾಮಿಸ್ಟ್ ಸಿದ್ಧಾಂತವನ್ನು ಭೋಧಿಸಲಾಗುತ್ತಿದೆ ಎಂದು ನಂಬಲಾಗಿದೆ,
ಮಾರ್ಚ್ 1 ರಂದು ಬೆಂಗಳೂರಿನ ಜನಪ್ರಿಯ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟದಲ್ಲಿ ಕನಿಷ್ಠ 10 ಮಂದಿ ಗಾಯಗೊಂಡಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮಾರ್ಚ್ 3 ರಂದು ಪ್ರಕರಣವನ್ನು ವಶಕ್ಕೆ ಪಡೆದುಕೊಂಡಿತು ಮತ್ತು ಏಪ್ರಿಲ್ 12 ರಂದು ಪ್ರಮುಖ ಶಂಕಿತರಾದ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಮತ್ತು ಮುಸ್ಸಾವಿರ್ ಹುಸೇನ್ ಶಾಜಿಬ್ ನನ್ನು ಬಂಧಿಸಿತು. ದಾಳಿಯ ಹಿಂದಿನ ಸೂತ್ರಧಾರ ತಾಹಾ ಎಂದು ನಂಬಲಾಗಿದೆ, ಆದರೆ ಶಾಜಿಬ್ ಕೆಫೆಯಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು (IED) ಇಟ್ಟಿದ್ದ ಎನ್ನಲಾಗಿದೆ.
ಇಬ್ಬರು ಶಂಕಿತರನ್ನು ಕೋಲ್ಕತ್ತಾ ಬಳಿಯ ಒಂದು ಲಾಡ್ಜ್‌ನಿಂದ ಬಂಧಿಸಲಾಯಿತು, ಅಲ್ಲಿ ಅವರು ಅಲಿಯಾಸ್ ಹೆಸರಿನಲ್ಲಿ ಅಡಗಿದ್ದರು. ಇಬ್ಬರೂ ಶಂಕಿತರು ಕರ್ನಾಟಕದ ಶಿವಮೊಗ್ಗದಲ್ಲಿರುವ ಇಸ್ಲಾಮಿಕ್ ಸ್ಟೇಟ್ (IS) ಮಾಡ್ಯೂಲ್‌ನ ಸದಸ್ಯರು ಎಂದು ತಿಳಿದುಬಂದಿತ್ತು, ಇನ್ನು ನವೆಂಬರ್ 2022 ರಲ್ಲಿ ಮಂಗಳೂರಿನಲ್ಲಿ ಮತ್ತೊಬ್ಬ ಮಾಡ್ಯೂಲ್ ಸದಸ್ಯ ಶಾರಿಕ್ ಎಂಬಾತ ಕುಕ್ಕರ್ ಸ್ಫೋಟ ನಡೆಸಿದ್ದ
ಗೋರಿ ಮತ್ತು ಅವರ ಅಳಿಯ ಶಾಹಿದ್ ಫೈಸಲ್ ದಕ್ಷಿಣ ಭಾರತದಲ್ಲಿ ಬಲವಾದ ಸ್ಲೀಪರ್ ಸೆಲ್‌ಗಳ ಜಾಲವನ್ನು ಸ್ಥಾಪಿಸಿದ್ದಾರೆ ಎನ್ನಲಾಗಿದೆ. ಫೈಸಲ್ ತಾಹಾ ಮತ್ತು ಶಾಜಿಬ್ ಇಬ್ಬರ ಸಂಪರ್ಕದಲ್ಲಿದ್ದರು ಮತ್ತು ರಾಮೇಶ್ವರಂ ಕೆಫೆ ಸ್ಫೋಟವನ್ನು ಸಂಘಟಿಸುವಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದರು ಎಂದು ವರದಿ ತಿಳಿಸಿದೆ.
ಇತ್ತೀಚೆಗೆ, ವಿಶೇಷ ದಳವು ರಿಜ್ವಾನ್ ಅಲಿ ಎಂಬ ವ್ಯಕ್ತಿಯನ್ನು ಬಂಧಿಸಿತು, ಆತ ಗೋರಿ ಮಾರ್ಗದರ್ಶನದಲ್ಲಿ IS-ಪ್ರೇರಿತ ಮಾಡ್ಯೂಲ್‌ನ ಭಾಗವಾಗಿದ್ದ ಎಂಬುದು ಬಳಿಕ ಬಹಿರಂಗವಾಯಿತು. ರಿಜ್ವಾನ್ @rockkman ಎಂಬ ಟೆಲಿಗ್ರಾಮ್ ಐಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾತ ಗೋರಿಯೊಂದಿಗೆ ನೇರ ಸಂಪರ್ಕದಲ್ಲಿದ್ದ ಎಂದು ತನಿಖೆಗಳು ಬಹಿರಂಗಪಡಿಸಿವೆ. ISI ನ ಆಶ್ರಯದಲ್ಲಿ ಭಾರತದಲ್ಲಿ ವ್ಯಕ್ತಿಗಳನ್ನು ನೇಮಿಸಿಕೊಳ್ಳುವ ಮತ್ತು ಅವರನ್ನು ಕೃತ್ಯಗಳಿಗೆ ಬಳಸಿಕೊಳ್ಳುವಲ್ಲಿ ಗೋರಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ ಎಂಬ ಗುಪ್ತಚರ ಇಲಾಖೆ ದೃಢಪಡಿಸಿವೆ.
ಮೂಲತಃ ಹೈದರಾಬಾದ್‌ನವನಾದ ಗೋರಿಯನ್ನು 2022 ರಲ್ಲಿ ಭಾರತೀಯ ಗೃಹ ಸಚಿವಾಲಯವು ಭಯೋತ್ಪಾದಕ ಎಂದು ಗೊತ್ತುಪಡಿಸಿತು. ಇದರ ಹೊರತಾಗಿಯೂ, ಆತ ಪಾಕಿಸ್ತಾನದ ಲಾಹೋರ್‌ನಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಭಾರತದಲ್ಲಿ ಅಸ್ಥಿರತೆಯನ್ನು ಸೃಷ್ಟಿಸಲು ವಿಧ್ವಂಸಕ ಕೃತ್ಯಕ್ಕೆ ISI ತಂತ್ರದ ಭಾಗವಾಗಿ ಗೋರಿಯ ಈ ವಿಡಿಯೋ ಇರಬಹುದು ಎಂದು ಗುಪ್ತಚರ ಮೂಲಗಳು ನಂಬಿವೆ, ಆದರೆ ಪಾಕಿಸ್ತಾನವು ತನ್ನ ಮಣ್ಣಿನಲ್ಲಿ ಉಗ್ರ ಗೋರಿಯ ಉಪಸ್ಥಿತಿಯನ್ನು ನಿರಾಕರಿಸುವ ಮೂಲಕ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದೆ.
ಗೋರಿ ಈಗ ಟೆಲಿಗ್ರಾಮ್‌ನಂತಹ ಸಾರ್ವಜನಿಕ ವೇದಿಕೆಗಳ ಮೂಲಕ ಬಹಿರಂಗವಾಗಿ ಹಿಂಸಾಚಾರವನ್ನು ಪ್ರಚೋದಿಸುತ್ತಿರುವ ಕಾರಣ, ಭಾರತೀಯ ಗುಪ್ತಚರ ಮತ್ತು ಕಾನೂನು ಜಾರಿ ಸಂಸ್ಥೆಗಳು ಹೆಚ್ಚಿನ ಜಾಗರೂಕತೆಯಲ್ಲಿದೆ. ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಭಯೋತ್ಪಾದನಾ ಹಣಕಾಸು ಮತ್ತು ಚಟುವಟಿಕೆಗಳನ್ನು ತಡೆಯಲು ಹಣಕಾಸು ಕ್ರಿಯಾ ಕಾರ್ಯಪಡೆ (FATF) ಅಡಿಯಲ್ಲಿ ಹೆಚ್ಚಿನ ಜಾಗರೂಕತೆ ನಡೆಸುತ್ತಿದೆ.